ADVERTISEMENT

ಬಿಜೆಪಿಯಿಂದ ಪರಿಶಿಷ್ಟರಲ್ಲಿ ಒಡಕು: ದಿನೇಶ ಪವಾರ್

​ಪ್ರಜಾವಾಣಿ ವಾರ್ತೆ
Published 5 ಮೇ 2024, 15:34 IST
Last Updated 5 ಮೇ 2024, 15:34 IST
ಪವಾರ್‌
ಪವಾರ್‌   

ಬೀದರ್‌: ‘ಹಿಂದೆ ರಾಜ್ಯದಲ್ಲಿದ್ದ ಬಸವರಾಜ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರ ಪರಿಶಿಷ್ಟರಲ್ಲಿ ಒಡಕು ಮೂಡಿಸುವ ಕೆಲಸ ಮಾಡಿತು. ಸದಾಶಿವ ಆಯೋಗದ ವರದಿ ಜಾರಿಗೆ ಕೇಂದ್ರಕ್ಕೆ ಶಿಫಾರಸು ಮಾಡಿ ಪರಿಶಿಷ್ಟರನ್ನು ಇಬ್ಭಾಗ ಮಾಡಿತು’ ಎಂದು ಬಂಜಾರ ಸಮಾಜದ ಮುಖಂಡ ದಿನೇಶ ಪವಾರ್ ಆರೋಪಿಸಿದರು.

ಡಾ. ಬಿ.ಆರ್. ಅಂಬೇಡ್ಕರ್ ಅವರ ಆಶಯದಂತೆ ಮೀಸಲಾತಿ ಇರಬೇಕೇ ವಿನಃ ಅದರಲ್ಲಿ ಪ್ರತ್ಯೇಕತೆ ಸಲ್ಲದು. ಆದರೆ, ಬಿಜೆಪಿ ಸಮಾಜಗಳಲ್ಲಿ ಒಡಕು ಮೂಡಿಸಿ ರಾಜಕೀಯ ಲಾಭ ಪಡೆಯಲು ಹವಣಿಸುತ್ತಿದೆ. ಪರಿಶಿಷ್ಟರಲ್ಲಿ 101 ಜಾತಿಗಳು ಒಳಗೊಂಡಿದ್ದು, ಎಲ್ಲರೂ ಒಟ್ಟಾಗಿದ್ದೆವು ಎಂದು ನಗರದಲ್ಲಿ ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಕಳೆದ ಹತ್ತು ವರ್ಷಗಳಲ್ಲಿ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರವು ಜಾತಿ ಜಾತಿಗಳಲ್ಲಿ ಜಗಳ ಹಚ್ಚಿ ಸಮಾಜಗಳನ್ನು ಚೂರು ಚೂರು ಮಾಡಲು ಹೊರಟಿದೆ. ಸಂವಿಧಾನದ ಆಶಯದಂತೆ ಎಲ್ಲರಿಗೂ ಸಮಬಾಳು ಸಮಪಾಲು ಸಿಗಬೇಕು. ಆದರೆ, ಅದರ ಆಶಯಕ್ಕೆ ಕೊಡಲಿ ಪೆಟ್ಟು ಕೊಡಲು ಹೊರಟಿದ್ದಾರೆ ಎಂದು ದೂರಿದರು.

ADVERTISEMENT

ಸಂತೋಷಕುಮಾರ ಅಣ್ಣೆಪ್ಪನೋರ್, ಸಚಿನ್ ಪವಾರ್ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.