ADVERTISEMENT

ಬೀದರ್: ಭಾಗ್ಯಲಕ್ಷ್ಮಿ ಬಾಂಡ್‌ ನೀಡಲು ಲಂಚ ಪಡೆದ ಅಂಗನವಾಡಿ ಕಾರ್ಯಕರ್ತೆ

​ಪ್ರಜಾವಾಣಿ ವಾರ್ತೆ
Published 28 ಆಗಸ್ಟ್ 2024, 13:27 IST
Last Updated 28 ಆಗಸ್ಟ್ 2024, 13:27 IST
<div class="paragraphs"><p>ಲಂಚ (ಪ್ರಾತಿನಿಧಿಕ ಚಿತ್ರ)&nbsp;</p></div>

ಲಂಚ (ಪ್ರಾತಿನಿಧಿಕ ಚಿತ್ರ) 

   

ಬಸವಕಲ್ಯಾಣ: ನಗರದ ಅಮೀರಪೇಟ್ ಓಣಿಯ ಅಂಗನವಾಡಿ ಕೇಂದ್ರ–2ರ ಕಾರ್ಯಕರ್ತೆ ರೇಣುಕಾ ಅವರು ಭಾಗ್ಯಲಕ್ಷ್ಮಿ ಬಾಂಡ್ ನೀಡಲು ಫಲಾನುಭವಿಯಿಂದ ಲಂಚ ಪಡೆದಿರುವ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದೆ.

ಇದನ್ನು ಗಮನಿಸಿದ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಗೌತಮ ಶಿಂಧೆ ಅವರು ಬುಧವಾರ ಕಾರ್ಯಕರ್ತೆಗೆ ಕಾರಣ ಕೇಳಿ ನೋಟಿಸ್ ಜಾರಿ ಮಾಡಿದ್ದಾರೆ.

ADVERTISEMENT

ಓಣಿ ನಿವಾಸಿ ಸಮೀರ್ ಎನ್ನುವವರು ಭಾಗ್ಯಲಕ್ಷ್ಮಿ ಬಾಂಡ್ ಮಾಡಿಕೊಡಲು ಕೇಳಿಕೊಂಡಾಗ ಕಾರ್ಯಕರ್ತೆ ₹1,400 ಕೊಡಲು ಹೇಳಿದ್ದಾರೆ. ಅಲ್ಲದೆ ಕೈಯಿಂದ ಹಣ ಪಡೆದುಕೊಂಡಿರುವುದು ವಿಡಿಯೊದಲ್ಲಿ ಸ್ಪಷ್ಟವಾಗಿ ಕಾಣುತ್ತಿದೆ. ಆದ್ದರಿಂದ ಈ ಬಗ್ಗೆ 24 ಗಂಟೆಗಳಲ್ಲಿ ಸ್ಪಷ್ಟೀಕರಣ ನೀಡಬೇಕು ಎಂದು ಸೂಚಿಸಿದ್ದಾರೆ.

ಇಲ್ಲದಿದ್ದರೆ ಬೇಜವಾಬ್ದಾರಿಯಿಂದ ವರ್ತಿಸಿದಕ್ಕಾಗಿ ಹಾಗೂ ಲಂಚ ಪಡೆದ ಕಾರಣಕ್ಕಾಗಿ ತಮ್ಮ ಮೇಲೆ ಶಿಸ್ತು ಕ್ರಮ ಜರುಗಿಸುವುದಕ್ಕಾಗಿ ಮೇಲಧಿಕಾರಿಗಳಿಗೆ ಶಿಫಾರಸು ಮಾಡಲಾಗುವುದು. ಈ ಬಗ್ಗೆ ಶೀಘ್ರದಲ್ಲಿ ಉತ್ತರಿಸಬೇಕು ಎಂದು ನೋಟಿಸ್ ನಲ್ಲಿ ಸೂಚಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.