ADVERTISEMENT

ಬಸವಕಲ್ಯಾಣ |ಗ್ರಾಮ ಲೆಕ್ಕಾಧಿಕಾರಿ ಪರೀಕ್ಷೆಗೆ ಹೋಗುವಾಗ ಕಾರು ಪಲ್ಟಿ; ಯುವತಿ ಸಾವು

​ಪ್ರಜಾವಾಣಿ ವಾರ್ತೆ
Published 27 ಅಕ್ಟೋಬರ್ 2024, 15:49 IST
Last Updated 27 ಅಕ್ಟೋಬರ್ 2024, 15:49 IST
ಬಸವಕಲ್ಯಾಣದ ಪರೀಕ್ಷೆ ಬರೆಯಲು ಕಲಬುರಗಿಗೆ ತೆರಳುತ್ತಿದ್ದಾಗ ಕಾರು ಪಲ್ಟಿಯಾದ ಘಟನೆಯ ಮೃತಪಟ್ಟ ಯುವತಿಯ ಕುಟುಂಬಸ್ಥರಿಗೆ ವಿಧಾನಪರಿಷತ್ ಮಾಜಿ ಸದಸ್ಯ ವಿಜಯಸಿಂಗ ಸಾಂತ್ವನ ಹೇಳಿದರು. ಪಿಎಸ್‌ಐ ಜಯಶ್ರೀ ಹೂಡಲ್ ಇದ್ದರು
ಬಸವಕಲ್ಯಾಣದ ಪರೀಕ್ಷೆ ಬರೆಯಲು ಕಲಬುರಗಿಗೆ ತೆರಳುತ್ತಿದ್ದಾಗ ಕಾರು ಪಲ್ಟಿಯಾದ ಘಟನೆಯ ಮೃತಪಟ್ಟ ಯುವತಿಯ ಕುಟುಂಬಸ್ಥರಿಗೆ ವಿಧಾನಪರಿಷತ್ ಮಾಜಿ ಸದಸ್ಯ ವಿಜಯಸಿಂಗ ಸಾಂತ್ವನ ಹೇಳಿದರು. ಪಿಎಸ್‌ಐ ಜಯಶ್ರೀ ಹೂಡಲ್ ಇದ್ದರು   

ಬಸವಕಲ್ಯಾಣ: ಭಾನುವಾರ ಗ್ರಾಮ ಆಡಳಿತಾಧಿಕಾರಿ ಪರೀಕ್ಷೆ ಬರೆಯಲು ಹೋಗುತ್ತಿದ್ದದ್ದಾಗ ಕಾರು ಪಲ್ಟಿಯಾಗಿ ತಾಲ್ಲೂಕಿನ ಜಾಫರವಾಡಿಯ ಐಶ್ವರ್ಯ ಹಣಮಂತ ಬಂಡೆ (21) ಮೃತಪಟ್ಟಿದ್ದಾರೆ.

ಕಲಬುರಗಿಯಲ್ಲಿನ ಕೇಂದ್ರದಲ್ಲಿ ಪರೀಕ್ಷೆ ಇತ್ತು.

ಕಾರಿನ ಮೂಲಕ ಹಾರಕೂಡ ಗ್ರಾಮದವರೆಗೆ ಹೋಗಿ ಅಲ್ಲಿಂದ ಬಸ್‌ನಲ್ಲಿ ಕಲಬುರಗಿಗೆ ಹೋಗಲು ಅವರು ಭಾನುವಾರ ಬೆಳಿಗ್ಗೆಯೇ ಊರಿಂದ ಹೊರಟಿದ್ದರು. ಕಾರಿನಲ್ಲಿ ತಾಯಿ ಮತ್ತು ಸಹೋದರಿ ಸಹ ಇದ್ದರು. ಬಸ್ ತಪ್ಪಬಾರದು ಎಂಬ ಕಾರಣಕ್ಕೆ ಕಾರನ್ನು ವೇಗವಾಗಿ ಚಾಲನೆ ಮಾಡಲಾಗುತ್ತಿತ್ತು ಎನ್ನುಲಾಗಿದೆ. ಹಾರಕೂಡ ಸಮೀಪದಲ್ಲಿ ಕಾರು ರಸ್ತೆ ಬದಿಗೆ ಪಲ್ಟಿಯಾಗಿದೆ.

ADVERTISEMENT

ಐಶ್ವರ್ಯ ಸ್ಥಳದಲ್ಲೇ ಮೃತಪಟ್ಟರೆ ತಾಯಿ ಹಾಗೂ ಚಾಲಕನಿಗೆ ಗಂಭೀರ ಗಾಯಗಳಾಗಿವೆ. ಗಾಯಾಳುಗಳಿಗೆ ತಾಲ್ಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ. ವಿಧಾನ ಪರಿಷತ್ ಮಾಜಿ ಸದಸ್ಯ ವಿಜಯಸಿಂಗ್ ಆಸ್ಪತ್ರೆಯಲ್ಲಿ ಗಾಯಾಳುಗಳನ್ನು ಹಾಗೂ ಸಂಬಂಧಿಕರನ್ನು ಭೇಟಿಯಾಗಿ ಸಾಂತ್ವನ ಹೇಳಿದರು.

ಮುಡಬಿ ಠಾಣೆ ಪಿಎಸ್‌ಐ ಜಯಶ್ರೀ ಹೂಡಲ್ ಮತ್ತಿತರರು ಸ್ಥಳಕ್ಕೆ ಭೇಟಿ ನೀಡಿದ್ದಾರೆ.

ಬಸವಕಲ್ಯಾಣದ ತಾಲ್ಲೂಕು ಆಸ್ಪತ್ರೆಯಲ್ಲಿ ಭಾನುವಾರ ಮೃತಳ ಸಂಬಂಧಿಕರಿಗೆ ವಿಧಾನಪರಿಷತ್ ಮಾಜಿ ಸದಸ್ಯ ವಿಜಯಸಿಂಗ್ ಸಾಂತ್ವನ ಹೇಳಿದರು. ಸಬ್ ಇನ್ ಸ್ಪೇಕ್ಟರ್ ಜಯಶ್ರೀ ಹೂಡಲ್ ಇದ್ದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.