ADVERTISEMENT

ಬೀದರ್ | ದತ್ತಗಿರಿ ಪಬ್ಲಿಕ್ ಶಾಲೆಗೆ ಶೇ 100 ಫಲಿತಾಂಶ

​ಪ್ರಜಾವಾಣಿ ವಾರ್ತೆ
Published 22 ಜುಲೈ 2022, 13:02 IST
Last Updated 22 ಜುಲೈ 2022, 13:02 IST
ಆದರ್ಶಕುಮಾರ
ಆದರ್ಶಕುಮಾರ   

ಬೀದರ್: ನಗರದ ಬಸವನಗರದಲ್ಲಿ ಇರುವ ದತ್ತಗಿರಿ ಮಹಾರಾಜ ಆಂಗ್ಲಮಾಧ್ಯಮ ಪಬ್ಲಿಕ್ ಶಾಲೆಯು ಪ್ರಸಕ್ತ ಸಾಲಿನ ಸಿಬಿಎಸ್‍ಇ 10ನೇ ತರಗತಿ ಪರೀಕ್ಷೆಯಲ್ಲಿ ಶೇ 100ಕ್ಕೆ 100 ರಷ್ಟು ಫಲಿತಾಂಶ ಪಡೆದು ಗಮನ ಸೆಳೆದಿದೆ.

ಪರೀಕ್ಷೆ ಬರೆದ ಎಲ್ಲ 62 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ. 11 ವಿದ್ಯಾರ್ಥಿಗಳು ಅಗ್ರಶ್ರೇಣಿ, 40 ಪ್ರಥಮ ದರ್ಜೆ ಹಾಗೂ 11 ವಿದ್ಯಾರ್ಥಿಗಳು ದ್ವಿತೀಯ ದರ್ಜೆಯಲ್ಲಿ ಪಾಸಾಗಿದ್ದಾರೆ.

ಆದರ್ಶಕುಮಾರ ಶಿವಕುಮಾರ ಶೇ 97, ಭೂಮಿಕಾ ಬಸವರಾಜ ಶೇ 94.8, ವೃಶಾಂಕ ರಾಜಕುಮಾರ ಖ್ಯಾಮಾ ಶೇ 91, ವೈಭವ ಪ್ರಕಾಶ ಮಹಾಜನ್ ಶೇ 89.6, ಶ್ರೀದೇವಿ ಗೌತಮ ಶೇ 89.4, ಅಭಿಷೇಕ ಶಿವಾಜಿ ಶೇ 88.7, ಗಗನ ವೆಂಕಟರಾವ್ ಶೇ 88.4, ಶಿವಾನಿ ವಿಕಾಸಕುಮಾರ ಶೇ 86.6, ಧನರಾಜ ಮೊಗಲಪ್ಪ ಶೇ 86.4, ಶಿವಕುಮಾರ ಚಂದ್ರಕಾಂತ ಶೇ 86, ವೀರೇಂದ್ರ ಬಸವರಾಜ ಶೇ 86 ರಷ್ಟು ಅಂಕ ಪಡೆದು ಸಾಧನೆ ಮಾಡಿದ್ದಾರೆ.
ಉತ್ತಮ ಶೈಕ್ಷಣಿಕ ವಾತಾವರಣ, ನುರಿತ, ಅನುಭವಿ ಶಿಕ್ಷಕರು ಹಾಗೂ ಗುಣಮಟ್ಟದ ಶಿಕ್ಷಣದಿಂದಾಗಿ ಶಾಲೆ ಸತತ 13ನೇ ವರ್ಷವೂ ಶೇ 100 ಕ್ಕೆ 100 ರಷ್ಟು ಫಲಿತಾಂಶ ದಾಖಲಿಸಿದೆ.

ಶಾಲೆಯ ವಿದ್ಯಾರ್ಥಿಗಳ ಸಾಧನೆಯನ್ನು ದತ್ತಗಿರಿ ಮಹಾರಾಜ ಶಿಕ್ಷಣ ಸಂಸ್ಥೆಯ ಸಂಸ್ಥಾಪಕ ಪೂಜ್ಯ ಶ್ರೀ ಅವಧೂತಗಿರಿ ಮಹಾರಾಜ, ಅಧ್ಯಕ್ಷ ರಮೇಶಕುಮಾರ ಪಾಂಡೆ, ಉಪಾಧ್ಯಕ್ಷ ಮಲ್ಲಿಕಾರ್ಜುನ ಹತ್ತಿ, ಕಾರ್ಯದರ್ಶಿ ಶಿವರಾಜ ಪಾಟೀಲ, ಜಂಟಿ ಕಾರ್ಯದರ್ಶಿ ರಮೇಶ ಜಿ. ದುಕಾನದಾರ್, ಖಜಾಂಚಿ ಪ್ರಭಾಕರ ಮೈಲಾಪುರೆ, ಸದಸ್ಯರಾದ ಶಾಂತಾಬಾಯಿ ಯರಮಲ್ಲಿ, ರವಿ ಮಲಸಾ, ಬಸವರಾಜ ದೇಗಲಮಡಿ, ಪ್ರಾಚಾರ್ಯೆ ಮಹಾದೇವಿ ಬೀದೆ, ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ಪ್ರಶಂಶಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.