ADVERTISEMENT

ಬೀದರ್: ಔಷಧ ವ್ಯಾಪಾರಿಗಳ ಸಂಘದ ಕಟ್ಟಡ ಉದ್ಘಾಟನೆ

​ಪ್ರಜಾವಾಣಿ ವಾರ್ತೆ
Published 28 ಫೆಬ್ರುವರಿ 2024, 5:20 IST
Last Updated 28 ಫೆಬ್ರುವರಿ 2024, 5:20 IST

ಬೀದರ್: ಜಿಲ್ಲಾ ಔಷಧ ವ್ಯಾಪಾರಿಗಳ ಸಂಘದ ಕಟ್ಟಡದ ಮೊದಲ ಮಹಡಿ ಉದ್ಘಾಟನಾ ಸಮಾರಂಭ ನಗರದಲ್ಲಿ ಮಂಗಳವಾರ ಜರುಗಿತು.

ಸಂಘದ ಜಂಟಿ ಸಂಘಟನಾ ಕಾರ್ಯದರ್ಶಿ ಎ.ಕೆ. ಜೀವನ್ ಮಾತನಾಡಿ, ಅಖಿಲ ಭಾರತ ಔಷಧ ವ್ಯಾಪಾರಿಗಳ ಸಂಘವು ಔಷಧ ವ್ಯಾಪಾರಿಗಳ ಹಿತ ರಕ್ಷಣೆಗೆ ಸಿದ್ಧವಿದೆ. ವ್ಯಾಪಾರಿಗಳ ಏನೇ ಸಮಸ್ಯೆಗಳಿದ್ದರೂ ರಾಜ್ಯ ಹಾಗೂ ರಾಷ್ಟ್ರಮಟ್ಟದ ಸಂಘಗಳ ಗಮನಕ್ಕೆ ತರಬಹುದಾಗಿದೆ’ ಎಂದು ತಿಳಿಸಿದರು.

‘ರಾಜ್ಯ ಸಂಘಕ್ಕೆ 26 ಸಾವಿರ ಸದಸ್ಯರಿದ್ದರೆ, ಅಖಿಲ ಭಾರತ ಔಷಧ ವ್ಯಾಪಾರಿಗಳ ಸಂಘಕ್ಕೆ 13 ಲಕ್ಷ ಸದಸ್ಯರು ಇದ್ದಾರೆ. ಬರುವ ದಿನಗಳಲ್ಲಿ ಔಷಧಕ್ಕೆ ಸಂಬಂಧಿಸಿದ ಕಾಯ್ದೆಗಳಲ್ಲಿ ಬದಲಾವಣೆಗಳು ಆಗಲಿವೆ. ವ್ಯಾಪಾರಿಗಳು ಸರ್ಕಾರದ ನಿಯಮಾನುಸಾರ ವ್ಯಾಪಾರ ನಡೆಸಬೇಕು. ಆಧುನಿಕ ತಂತ್ರಜ್ಞಾನದೊಂದಿಗೆ ಮುನ್ನಡೆಯಬೇಕು’ ಎಂದು ಹೇಳಿದರು.

ADVERTISEMENT

ಕರ್ನಾಟಕ ರಾಜ್ಯ ಔಷಧ ವ್ಯಾಪಾರಿಗಳ ಸಂಘದ ಅಧ್ಯಕ್ಷ ರಘುನಾಥ ರೆಡ್ಡಿ ಮಾತನಾಡಿ,‘ಬರುವ ದಿನಗಳಲ್ಲಿ ಸಂಘವೇ ಔಷಧ ಉತ್ಪನ್ನಗಳನ್ನು ಮಾರುಕಟ್ಟೆಗೆ ಬಿಡುಗಡೆಗೊಳಿಸಿ, ಅಂತಹ ಅಂಗಡಿಗಳಿಗೆ ಸ್ಪರ್ಧೆ ಒಡ್ಡುವ ಕುರಿತು ಚಿಂತನೆ ನಡೆಸಿದೆ’ ಎಂದು ತಿಳಿಸಿದರು.

ಸಂಘದ ರಾಜ್ಯ ಸಹ ಕಾರ್ಯದರ್ಶಿ ಜಿ.ಎನ್. ಭಾನುಪ್ರಕಾಶ, ಸಂಘಟನಾ ಕಾರ್ಯದರ್ಶಿ ಬಂಧು ಆರ್. ಕಟ್ಟಿ, ಬೀದರ್ ಜಿಲ್ಲಾ ಔಷಧ ವ್ಯಾಪಾರಿಗಳ ಸಂಘದ ಅಧ್ಯಕ್ಷ ಶಿವರಾಜ ಪಾಟೀಲ, ಕಲಬುರಗಿ ವೃತ್ತದ ಉಪ ಔಷಧ ನಿಯಂತ್ರಕ ಗೋಪಾಲ್ ಎಚ್. ಭಂಡಾರಿ, ಬೀದರ್ ಸಹಾಯಕ ಔಷಧ ನಿಯಂತ್ರಕಿ ಕರುಣಾದೇವಿ, ಶಾಹೀನ್ ಶಿಕ್ಷಣ ಸಂಸ್ಥೆಗಳ ಸಮೂಹದ ಅಧ್ಯಕ್ಷ ಅಬ್ದುಲ್ ಖದೀರ್, ಬೀದರ್ ಕೆಮಿಸ್ಟ್ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಅಧ್ಯಕ್ಷ ಮಲ್ಲಪ್ಪ ಬಿರಾದಾರ, ಸಂಘದ ಬೆಳಗಾವಿ ಜಿಲ್ಲಾ ಘಟಕದ ಅಧ್ಯಕ್ಷ ವಿಜಯಕುಮಾರ ಭುರಳಿ, ಕಲಬುರಗಿ ಜಿಲ್ಲಾ ಘಟಕದ ಕಾರ್ಯದರ್ಶಿ ರವೀಂದ್ರ ಜೋಶಿ ಇತರರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.