ADVERTISEMENT

ಚಿಟಗುಪ್ಪ: ಕ್ರಿಮಿನಾಶಕ ಸಿಂಪರಣೆ ಡ್ರೋನ್‌ ಪ್ರಾತ್ಯಕ್ಷಿಕೆ

​ಪ್ರಜಾವಾಣಿ ವಾರ್ತೆ
Published 11 ಜುಲೈ 2024, 12:33 IST
Last Updated 11 ಜುಲೈ 2024, 12:33 IST
ಚಿಟಗುಪ್ಪ ತಾಲ್ಲೂಕಿನ ಕರಕನಳ್ಳಿ ಗ್ರಾಮದ ಸೋನಮ್ಮ ದೇವೆಂದ್ರಪ್ಪ ಅವರ ಹೊಲದಲ್ಲಿ ಡ್ರೋನ್‌ ಮೂಲಕ ಕ್ರಿಮಿನಾಶಕ ಸಿಂಪರಣೆ ಪ್ರಾತ್ಯಕ್ಷಿಕೆ ನಡೆಯಿತು
ಚಿಟಗುಪ್ಪ ತಾಲ್ಲೂಕಿನ ಕರಕನಳ್ಳಿ ಗ್ರಾಮದ ಸೋನಮ್ಮ ದೇವೆಂದ್ರಪ್ಪ ಅವರ ಹೊಲದಲ್ಲಿ ಡ್ರೋನ್‌ ಮೂಲಕ ಕ್ರಿಮಿನಾಶಕ ಸಿಂಪರಣೆ ಪ್ರಾತ್ಯಕ್ಷಿಕೆ ನಡೆಯಿತು   

ಚಿಟಗುಪ್ಪ: ತಾಲ್ಲೂಕಿನ ಕರಕನಳ್ಳಿ ಗ್ರಾಮದ ಸೋನಮ್ಮ ದೇವೇಂದ್ರಪ್ಪ ಅವರ ಹೊಲದಲ್ಲಿ ರಿಲಾಯನ್ಸ್‌ ಫೌಂಡೇಶನ್‌, ಪ್ರವರ್ಧ ಸಂಸ್ಥೆ, ಪ್ರಾಥಮಿಕ ಪತ್ತಿನ ಕೃಷಿ ಸಹಕಾರ ನಿಯಮಿತ ಸಂಘದ ಸಹಯೋಗದಲ್ಲಿ ಡ್ರೋನ್‌ ಮೂಲಕ ಬೆಳೆಗೆ ಕ್ರಿಮಿನಾಶಕ ಸಿಂಪರಣೆ ಪ್ರಾತ್ಯಕ್ಷಿಕೆ ಕಾರ್ಯಕ್ರಮ ನಡೆಯಿತು.

ಗ್ರಾಮದ ರೈತರಿಗೆ ಕೃಷಿ ಚಟುವಟಿಕೆಗಳಲ್ಲಿ ಆಧುನಿಕ ತಂತ್ರಜ್ಞಾನ ಬಳಕೆ ಮೂಲಕ ಕಡಿಮೆ ಖರ್ಚಿನಲ್ಲಿ ಅಧಿಕ ಇಳುವರಿ ಪಡೆಯುವ ಪದ್ಧತಿ ಪ್ರಾತ್ಯಕ್ಷಿಕೆ ಮೂಲಕ ತೋರಿಸಲಾಯಿತು.

ಇಫ್ಕೊ ಜಿಲ್ಲಾ ವ್ಯವಸ್ಥಾಪಕ ಸುರೇಶ್‌ ಎಚ್‌ ಮಾತನಾಡಿ, ‘ಕೃಷಿ ಚಟುವಟಿಕೆಗೆ ಕೃಷಿ ಕಾರ್ಮಿಕರ ಸಮಸ್ಯೆ ಬಹುದೊಡ್ಡ ಸವಾಲಾಗಿ ಪರಿಣಮಿಸಿದ್ದು, ರೈತರು ತಂತ್ರಜ್ಞಾನದ ಉಪಕರಣಗಳು ಬಳಸಿಕೊಂಡು ಕೃಷಿ ಕಾರ್ಯ ಮಾಡುವುದರಿಂದ ಕಾರ್ಮಿಕರ ಸಮಸ್ಯೆಯಿಂದ ಮುಕ್ತಿ ಪಡೆಯಬಹುದು. ಡ್ರೋನ್‌ ಬಳಸುವುದರಿಂದ ಸಮಯ, ಶ್ರಮ ಉಳಿತಾಯವಾಗಲಿದೆ’ ಎಂದರು.

ADVERTISEMENT

ಸಂಗಪ್ಪ ಅತಿವಾಳ, ಪ್ರಭು ನೆಲ್ವಾದ್‌, ಮಹಾರುದ್ರ, ಜ್ಯೋತಿ, ಪ್ರೇಮಕುಮಾರ್‌, ರವಿ ರಾಠೋಡ್‌, ಸುರೇಶ್‌ ಮಿನಕೇರಾ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.