ADVERTISEMENT

ಭಾಲ್ಕಿ: ಫುಟ್‌ಪಾತ್‌ ಮೇಲೆ ನಿರ್ಮಿಸಿದ ಅಕ್ರಮ ಶೆಡ್‌ ತೆರವು

​ಪ್ರಜಾವಾಣಿ ವಾರ್ತೆ
Published 5 ಜುಲೈ 2024, 16:18 IST
Last Updated 5 ಜುಲೈ 2024, 16:18 IST
ಭಾಲ್ಕಿ ಪಟ್ಟಣದಲ್ಲಿ ಶುಕ್ರವಾರ ಅತಿಕ್ರಮಣ ತೆರವು ಕಾರ್ಯಾಚರಣೆ ನಡೆಯಿತು
ಭಾಲ್ಕಿ ಪಟ್ಟಣದಲ್ಲಿ ಶುಕ್ರವಾರ ಅತಿಕ್ರಮಣ ತೆರವು ಕಾರ್ಯಾಚರಣೆ ನಡೆಯಿತು   

ಭಾಲ್ಕಿ: ಪಟ್ಟಣದ ಫುಟ್‌ಪಾತ್‌ ಮೇಲೆ ಅಕ್ರಮವಾಗಿ ನಿರ್ಮಿಸಿದ ಶೆಡ್, ಡಬ್ಬಾಗಳ ತೆರವು ಕಾರ್ಯಾಚರಣೆ ಶುಕ್ರವಾರ ಆರಂಭವಾಗಿದೆ.

ಈಚೆಗೆ ಪುರಸಭೆ ಮುಖ್ಯಾಧಿಕಾರಿ ಅಕ್ರಮವಾಗಿ ನಿರ್ಮಿಸಿದ ಶೆಡ್, ಡಬ್ಬಾಗಳ ತೆರವಿಗೆ ಸೂಚನೆ ನೀಡಿದರೂ ರಸ್ತೆ ಬದಿ ಹಾಗೂ ಫುಟ್‌ಪಾತ್‌ ಮೇಲಿನ ಅಂಗಡಿಗಳು ಹಾಗೆಯೇ ಇದ್ದವು. ಪುರಸಭೆ ಸಿಬ್ಬಂದಿ ಮಧ್ಯಾಹ್ನ ಜೆಸಿಬಿ ತಂದು ಅಂಗಡಿಗಳನ್ನು ತೆರವುಗೊಳಿಸಿದರು. ಪಟ್ಟಣದ ಮಹಾತ್ಮ ಗಾಂಧಿ ವೃತ್ತದಿಂದ ಅಂಬೇಡ್ಕರ್ ವೃತ್ತ ಹಾಗೂ ಅಂಬೇಡ್ಕರ್ ವೃತ್ತದಿಂದ ಜ್ಯೋತಿಬಾ ಫುಲೆ ವೃತ್ತದವರೆಗೆ ನಡೆದ ತೆರವು ಕಾರ್ಯಾಚರಣೆಯಲ್ಲಿ ಸುಮಾರು 60 ಶೆಡ್, ಡಬ್ಬಾ ತೆರವುಗೊಳಿಸಲಾಗಿದೆ.

ಈ ತೆರವು ಕಾರ್ಯಾಚರಣೆ ಇನ್ನೂ ಎರಡ್ಮೂರು ದಿನ ನಡೆಯಲಿದೆ. ಸಾರ್ಜನಿಕರಿಗೆ ಸುಗಮ ಸಂಚಾರಕ್ಕಾಗಿ ಅತಿಕ್ರಮಣ ತೆರವು ಅಗತ್ಯವಾಗಿದೆ ಎಂದು ಪುರಸಭೆ ಮುಖ್ಯಾಧಿಕಾರಿ ಸಂಗಮೇಶ ಕಾರಬಾರಿ ತಿಳಿಸಿದರು. ತಹಶೀಲ್ದಾರ್, ನಗರ ಪೊಲೀಸ್ ಠಾಣೆ ಸಿಪಿಐ, ಕಂದಾಯ ಇಲಾಖೆ, ಪುರಸಭೆ ಸಿಬ್ಬಂದಿ ಸೇರಿದಂತೆ ಇತರರು ಇದ್ದರು.

ADVERTISEMENT
ಚಿತ್ರ ಭಾಲ್ಕಿ ಪಟ್ಟಣದಲ್ಲಿ ಶುಕ್ರವಾರ ಅತಿಕ್ರಮಣ ತೆರವು ಕಾರ್ಯಾಚರಣೆ ನಡೆಯಿತು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.