ADVERTISEMENT

ಚಿಟಗುಪ್ಪ | ಆಂಗ್ಲ ಉಪನ್ಯಾಸಕ ಇಲ್ಲದ ಕಾಲೇಜು

ವೀರೇಶ.ಎನ್.ಮಠಪತಿ
Published 18 ಜೂನ್ 2024, 6:08 IST
Last Updated 18 ಜೂನ್ 2024, 6:08 IST
ಚಿಟಗುಪ್ಪ ಬಾಲಕಿಯರ ಪಿಯು ಕಾಲೇಜಿನಲ್ಲಿ ವಿದ್ಯಾರ್ಥಿನಿಯರು ಪ್ರಯೋಗಾಲಯದಲ್ಲಿ ಪ್ರಯೋಗ ಮಾಡುತ್ತಿರುವುದು
ಚಿಟಗುಪ್ಪ ಬಾಲಕಿಯರ ಪಿಯು ಕಾಲೇಜಿನಲ್ಲಿ ವಿದ್ಯಾರ್ಥಿನಿಯರು ಪ್ರಯೋಗಾಲಯದಲ್ಲಿ ಪ್ರಯೋಗ ಮಾಡುತ್ತಿರುವುದು   

ಚಿಟಗುಪ್ಪ: ಸರ್ಕಾರಿ ಪಿಯು ಬಾಲಕಿಯರ ವಿಜ್ಞಾನ ಕಾಲೇಜಿಗೆ ಹಲವು ವರ್ಷಗಳಿಂದ ಆಂಗ್ಲ ಭಾಷೆ ಉಪನ್ಯಾಸಕ ಹುದ್ದೆಯೇ ಮಂಜೂರು ಆಗಿಲ್ಲ.

ವಿಜ್ಞಾನ ವಿಭಾಗವಿದ್ದರೂ ಆಂಗ್ಲ ಹಾಗೂ ಉರ್ದು ಬೋಧನೆಗೆ ನಿತ್ಯ ಸಮಸ್ಯೆಯಾಗುತ್ತಿದೆ. ಸರ್ಕಾರ ಅತಿಥಿ ಉಪನ್ಯಾಸಕ ಹುದ್ದೆಯೂ ನೇಮಿಸಿಲ್ಲ ಎಂದು ಪ್ರಾಚಾರ್ಯ ಮಾರುತರಡ್ಡಿ ಮಾಹಿತಿ ನೀಡಿದರು.

ಕಲಾ, ವಾಣಿಜ್ಯ ಹಾಗೂ ವಿಜ್ಞಾನ ವಿಭಾಗಗಳಿದ್ದು, ವಾಣಿಜ್ಯ, ಅರ್ಥಶಾಸ್ತ್ರ, ಸಮಾಜ ಶಾಸ್ತ್ರ, ಆಂಗ್ಲ, ಉರ್ದು ವಿಷಯಗಳ ಉಪನ್ಯಾಸಕರ ಹುದ್ದೆಗಳು ಖಾಲಿ ಇದ್ದು, ಪ್ರವೇಶ ಪಡೆಯಲು ವಿದ್ಯಾರ್ಥಿನಿಯರು ಹಿಂದೇಟು ಹಾಕುತ್ತಿದ್ದಾರೆ. ಎಲ್ಲರು ಪಿಯು ವಿಜ್ಞಾನ ಕಲಿಕೆ ನಂತರ ಸಿಇಟಿ ಅಥವಾ ನೀಟ್‌ ಪರೀಕ್ಷೆ ಬರೆಯಬೇಕು ಎಂದು ಬಯಸುತ್ತಾರೆ. ಆದರೆ, ಇಲ್ಲಿ ಉಪನ್ಯಾಸಕರ ಕೊರತೆ ಇರುವುದರಿಂದ ಪ್ರವೇಶಕ್ಕೆ ಕಷ್ಟವಾಗುತ್ತಿದೆ.

ADVERTISEMENT

6 ಜನರಲ್ಲಿ ಇಬ್ಬರು ಮಾತ್ರ ಬೋಧಕರು: ಇಲ್ಲಿಯ ಸರ್ಕಾರಿ ಬಾಲಕರ ಪಿಯು ಕಾಲೇಜಿನಲ್ಲಿ ಆರು ಹುದ್ದೆಗಳಲ್ಲಿ ಇಬ್ಬರು ಮಾತ್ರ ಖಾಯಂ ಉಪನ್ಯಾಸಕರಿದ್ದು, ನಾಲ್ಕು ಹುದ್ದೆಗಳು ಖಾಲಿ ಇವೆ. ಹೀಗಾಗಿ ಪ್ರತಿ ವರ್ಷ ಕಡಿಮೆ ವಿದ್ಯಾರ್ಥಿಗಳು ಪ್ರವೇಶ ಪಡೆಯುತ್ತಾರೆ.ವಿದ್ಯಾರ್ಥಿಗಳಿಗೆ ಶೌಚಾಲಯ ಅವಶ್ಯಕತೆಯಿದ್ದು ಕಳೆದ ಹಲವು ವರ್ಷಗಳಿಂದ ಕೆಟ್ಟಿದ್ದ ಶೌಚಾಲಯ ಇದುವರೆಗೂ ದುರಸ್ತಿಕೈಗೊಂಡಿಲ್ಲ ಎಂದು ಪ್ರಾಚಾರ್ಯ ಪ್ರೇಮಕುಮಾರ್‌ ನುಡಿಯುತ್ತಾರೆ.

ಆಟದ ಮೈದಾನವಿದ್ದರೂ ಉಪನ್ಯಾಸಕ ಹುದ್ದೆ ಖಾಲಿ: ತಾಲ್ಲೂಕಿನ ತಾಳಮಡಗಿ ಸರ್ಕಾರಿ ಪಿಯು ಕಾಲೇಜಿಗೆ ವಿಶಾಲವಾದ ಆಟದ ಮೈದಾನವಿದೆ. ಆದರೆ, ದೈಹಿಕ ಉಪನ್ಯಾಸಕ ಹುದ್ದೆ ಖಾಲಿಯಿದೆ. ಈ ವರ್ಷದ ಎಸ್‌ಎಸ್‌ಎಲ್‌ಸಿ ಫಲಿತಾಂಶ ರಾಜ್ಯಾದ್ಯಂತ ಕಡಿಮೆ ಬಂದಿರುವ ಕಾರಣ ಇಲ್ಲಿಯೂ ಪಾಸಾದ ಮಕ್ಕಳ ಸಂಖ್ಯೆ ಕಡಿಮೆಯಿರುವುದರಿಂದ ಕಾಲೇಜಿಗೆ ಕಡಿಮೆ ಪ್ರವೇಶ ಬಂದಿವೆ ಎಂದು ಪ್ರಾಚಾರ್ಯ ಹನುಮಂತ ಹೇಳುತ್ತಾರೆ.

ಉಪನ್ಯಾಸಕರ ಕೊರತೆ: ತಾಲ್ಲೂಕಿನ ನಿರ್ಣಾದ ಸರ್ಕಾರಿ ಪಿಯು ಕಾಲೇಜಿನಲ್ಲಿ ಆರು ಹದ್ದೆ ಮಂಜೂರಿದ್ದು, ಕೇವಲ ಮೂವರು ಇದ್ದಾರೆ. ಉಳಿದ 3 ಹುದ್ದೆಗಳು ಅತಿಥಿ ಉಪನ್ಯಾಸಕರ ಮೂಲಕ ಸರ್ಕಾರ ಭರ್ತಿ ಮಾಡಲಿದೆ. ಕಾಲೇಜಿಗೆ ಕುಡಿಯುವ ನೀರಿನ ವ್ಯವಸ್ಥೆ, ಗ್ರಂಥಾಲಯ ಬೇಕಿದೆ ಎಂದು ಪ್ರಾಚಾರ್ಯ ಶಿವರಾಜ್‌ ಬಿರಾದಾರ್‌ ನುಡಿಯುತ್ತಾರೆ.

ಫಲಿತಾಂಶ್‌ 100–ಸಮಸ್ಯೆ ಹಲವು: ತಾಲ್ಲೂಕಿನ ಬೇಮಳಖೇಡಾ ಗ್ರಾಮದ ಸರ್ಕಾರಿ ಪಿಯು ಕಾಲೇಜಿಗೆ ಕಳೆದ ವರ್ಷ ಶೇ 100 ಫಲಿತಾಂಶ ಬಂದಿದೆ. ಹಲವು ಸಮಸ್ಯೆಗಳು ಇವೆ.

’ವಿದ್ಯಾರ್ಥಿಗಳಿಗೆ ಕುಡಿಯುವ ನೀರಿನ ಸಮಸ್ಯೆ ಕಾಡುತ್ತಿದ್ದು, ನಿತ್ಯ ದೂರದಿಂದ ನೀರು ತುಂಬಿಕೊಂಡು ಬರಬೇಕಿದೆ. ಶೌಚಾಲಯ ಸಮಸ್ಯೆ ಇದೆ’ ಎಂದು ಪ್ರಾಚಾರ್ಯೆ ವಿಜಯಲಕ್ಷ್ಮಿ ಮಾಹಿತಿ ನೀಡಿದ್ದಾರೆ.

ಮಾರುತ ರಡ್ಡಿ
ಪ್ರೇಮ ಕುಮಾರ್‌
ಶಿವರಾಜ್‌ ಬಿರಾದಾರ್‌
ವಿಜಯಲಕ್ಷ್ಮಿ
ಚಿಟಗುಪ್ಪದ ಬಾಲಕರ ಪಿಯು ಕಾಲೇಜಿನಲ್ಲಿ ಶೌಚಾಲಯ ಹಾಳಾಗಿರುವುದು
ಚಿಟಗುಪ್ಪ ತಾಲ್ಲೂಕಿನ ಬೇಮಳಖೇಡಾದ ಸರ್ಕಾರಿ ಪಿಯು ಕಾಲೇಜಿನ ವಿದ್ಯಾರ್ಥಿನಿಯರು ದೂರದಿಂದ ನೀರು ತುಂಬಿದ ಕೊಡ ಹೊತ್ತುತರುತ್ತಿರುವುದು

ವಿಜ್ಞಾನ ವಿಭಾಗಕ್ಕೆ ವಿಶೇಷವಾಗಿ ಆಗ್ಲ ಉಪನ್ಯಾಸಕ ಅವಶ್ಯಕತೆ ಇರುತ್ತದೆ. ಮೂಲ ಸೌಲಭ್ಯವಿದ್ದಾಗಲೇ ಮಕ್ಕಳು ಪ್ರವೇಶ ಪಡೆಯಲು ಸಾಧ್ಯ

-ಮಾರುತ ರಡ್ಡಿ ಪ್ರಾಚಾರ್ಯ ಚಿಟಗುಪ್ಪ ಪಿಯು ಬಾಲಕಿಯರ ಕಾಲೇಜು

ವಿದ್ಯಾರ್ಥಿಗಳಿಗೆ ಆಳವಾದ ಅಧ್ಯಯನಕ್ಕೆ ಕಾಲೇಜಿನಲ್ಲಿ ಸುಸಜ್ಜಿತವಾದ ಗ್ರಂಥಾಲಯ ನಿರ್ಮಿಸಬೇಕು

- ಶಿವರಾಜ್‌ ಬಿರಾದಾರ್‌ ಪ್ರಾಚಾರ್ಯ ಪಿಯು ಕಾಲೇಜು ನಿರ್ಣಾ

ಕುಡಿಯುವ ನೀರು ಶೌಚಾಲಯ ಆಟದ ಮೈದಾನ ಮುಖ್ಯವಾಗಿದ್ದು ಸರ್ಕಾರ ಪೂರೈಸಿದಲ್ಲಿ ಮಾತ್ರ ವಿದ್ಯಾರ್ಥಿಗಳ ಪ್ರವೇಶ ಹೆಚ್ಚಾಗುತ್ತದೆ

-ಪ್ರೇಮ ಕುಮಾರ್‌ ಚಿಟಗುಪ್ಪ ಪಿಯು ಬಾಲಕಿಯರ ಕಾಲೇಜು

ಕಾಲೇಜು ಪ್ರಾಂಗಣಕ್ಕೆ ಸೂಕ್ತ ಸುತ್ತುಗೋಡೆ ನಿರ್ಮಿಸಬೇಕು ಕುಡಿಯುವ ಶುದ್ಧ ನೀರು ಸೌಲಭ್ಯ ಪೂರೈಸಬೇಕು

-ವಿಜಯಲಕ್ಷ್ಮಿ ಪ್ರಾಚಾರ್ಯೆ ಪಿಯು ಕಾಲೇಜು ಬೇಮಳಖೇಡಾ

ಕಾಲೇಜು 2023-24 ಸಾಲಿನ ವಿದ್ಯಾರ್ಥಿಗಳ ಸಂಖ್ಯೆ 2024-25 ಸಾಲಿನ ವಿದ್ಯಾರ್ಥಿಗಳ ಸಂಖ್ಯೆ ಬಾಲಕಿಯರ ಪಿಯು ಕಾಲೇಜು ಚಿಟಗುಪ್ಪ 315 250 ಬಾಲಕರ ಪಿಯು ಕಾಲೇಜು ಚಿಟಗುಪ್ಪ 34 24 ಸರ್ಕಾರಿ ಪಿಯು ಕಾಲೇಜು ತಾಳಮಡಗಿ 55 23 ಸರ್ಕಾರಿ ಪಿಯು ಕಾಲೇಜು ಬೇಮಳಖೇಡಾ 85 70

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.