ಬೀದರ್: ಜಿಲ್ಲೆಯ 19 ಗ್ರಾಮ ಮತ್ತು ತಾಂಡಾಗಳಲ್ಲಿ ಬಿಎಸ್‌ಎನ್‌ಎಲ್ 4ಜಿ ಮೊಬೈಲ್ ಟವರ್ ಅಳವಡಿಸುವುದಕ್ಕೆ ಕೇಂದ್ರ ದೂರಸಂಪರ್ಕ ಸಚಿವಾಲಯ ಒಪ್ಪಿಗೆ ನೀಡಿದೆ.
ಔರಾದ್ ತಾಲ್ಲೂಕಿನ ಗುಡಪಳ್ಳಿ ಪಂಚಾಯಿತಿಯ ಚಿಂತಾಮಣಿ ತಾಂಡಾ, ಚಿಮ್ಮೇಗಾಂವ್ ಪಂಚಾಯಿತಿಯ ಕಿರಗಣವಾಡಿ ಮತ್ತು ಮಾಣಿಕ ತಾಂಡಾ, ಭಂಡಾರಕುಮಟಾ ಪಂಚಾಯಿತಿಯ ಮಹಾದೇವ ವಾಡಿ ತಾಂಡಾ, ನಾಗಮಾರಪಳ್ಳಿ ಪಂಚಾಯಿತಿಯ ಮಾಣೂರ (ಕೆ), ಜೋಜನಾ ಪಂಚಾಯಿತಿಯ ನಾಗೂರಾ (ಬಿ), ಚೌದ್ರಿ ಬೆಳಕೋಣಿ ಪಂಚಾಯಿತಿಯ ರಾಮಸಿಂಗ್ ತಾಂಡಾ, ಮುರ್ಕಿ ಪಂಚಾಯಿತಿಯ ವಾಗನಗೀರ ವಾಡಿ, ಕಮಲನಗರ ತಾಲ್ಲೂಕಿನ ಚಿಕ್ಲಿ (ಯು) ಪಂಚಾಯಿತಿಯ ವಾಸಂ ತಾಂಡಾ, ಕಮಲನಗರ ಪಂಚಾಯಿತಿಯ ಮುಖೇಡ್ ಮತ್ತು ದಾಬಕಾ (ಸಿಎಚ್) ಪಂಚಾಯಿತಿಯ ರಾಮಸಿಂಗ್ ತಾಂಡಾ, ಬಸವಕಲ್ಯಾಣ ತಾಲ್ಲೂಕಿನ ಕಲಖೋರ ಪಂಚಾಯಿತಿಯ ದೇವಿ ತಾಂಡಾ, ಉಜಳಂಬ ಪಂಚಾಯಿತಿಯ ನವಚಂದವಾಡಿ, ಹುಲಸೂರ ಪಂಚಾಯಿತಿಯ ಅಂತರಭಾರತಿ ತಾಂಡಾ, ಭಾಲ್ಕಿ ತಾಲ್ಲೂಕಿನ ಮೋರಂಬಿ ಪಂಚಾಯಿತಿಯ ಫುಲದರವಾಡಿ, ಮದಕಟ್ಟಿ ಪಂಚಾಯಿತಿಯ ಬಾಜೋಳಗಾ, ಹುಮನಾಬಾದ್ ತಾಲ್ಲೂಕಿನ ಘಾಟಬೋರಾಳ ಪಂಚಾಯಿತಿಯ ಝರಲ ತಾಂಡಾ, ಬೀದರ್ ತಾಲ್ಲೂಕಿನ ಅಲಿಯಾಬಾದ್ ಪಂಚಾಯಿತಿಯ ಅಲಿಯಾಬಾದ್ ಏರ್‌ಫೋರ್ಸ್ ಸಮೀಪ, ಚಿದ್ರಿ ಏರ್‌ಫೋರ್ಸ್ ಬಳಿ ಹೊಸ ಟವರ್ ಅಳವಡಿಸಲು ಒಪ್ಪಿಗೆ ದೊರೆತಿದೆ.
ಹೊಸ ಟವರ್‌ಗಳ ಅಳವಡಿಕೆಯಿಂದ ಮಹಾರಾಷ್ಟ್ರ ಮತ್ತು ತೆಲಂಗಾಣ ಗಡಿಗೆ ಹೊಂದಿಕೊಂಡಿರುವ ಗ್ರಾಮಸ್ಥರಿಗೆ ಅನುಕೂಲವಾಗಲಿದೆ. ಈ ಸಂಬಂಧ ಮಾಜಿ ಸಂಸದ ಭಗವಂತ ಖೂಬಾ ಅವರು ದೂರಸಂಪರ್ಕ ಸಚಿವಾಲಯಕ್ಕೆ ಈ ಹಿಂದೆ ಮನವಿ ಮಾಡಿದ್ದರು. ಅವರ ಮನವಿಗೆ ಇಲಾಖೆ ಸ್ಪಂದಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.