ADVERTISEMENT

ಔರಾದ್ | ಅತಿಕ್ರಮಣ ತೆರವಿಗೆ ಸಹಕರಿಸಿ: ತಹಶೀಲ್ದಾರ್ ಚಿದ್ರೆ

​ಪ್ರಜಾವಾಣಿ ವಾರ್ತೆ
Published 9 ಜುಲೈ 2024, 16:24 IST
Last Updated 9 ಜುಲೈ 2024, 16:24 IST
ಔರಾದ್ ಬಸ್ ನಿಲ್ದಾಣದ ಬಳಿ ಅತಿಕ್ರಮಣ ತೆರವಿಗಾಗಿ ತಹಶೀಲ್ದಾರ್ ಮಲಶೆಟ್ಟಿ ಚಿದ್ರೆ ಅವರ ಸಮ್ಮುಖದಲ್ಲಿ ಅಳತೆ ಮಾಡಲಾಯಿತು. ಮುಖ್ಯಾಧಿಕಾರಿ ಸ್ವಾಮಿದಾಸ ಇದ್ದಾರೆ
ಔರಾದ್ ಬಸ್ ನಿಲ್ದಾಣದ ಬಳಿ ಅತಿಕ್ರಮಣ ತೆರವಿಗಾಗಿ ತಹಶೀಲ್ದಾರ್ ಮಲಶೆಟ್ಟಿ ಚಿದ್ರೆ ಅವರ ಸಮ್ಮುಖದಲ್ಲಿ ಅಳತೆ ಮಾಡಲಾಯಿತು. ಮುಖ್ಯಾಧಿಕಾರಿ ಸ್ವಾಮಿದಾಸ ಇದ್ದಾರೆ   

ಔರಾದ್: ‘ಪಟ್ಟಣದಲ್ಲಿ ಅತಿಕ್ರಮಣ ತೆರವು ಮಾಡಿ ರಸ್ತೆ ಅಗಲೀಕರಣ ಕಾರ್ಯಕ್ಕೆ ಸಾರ್ವಜನಿಕರು ಸಹಕರಿಸಬೇಕು’ ಎಂದು’ ತಹಶೀಲ್ದಾರ್ ಮಲಶೆಟ್ಟಿ ಚಿದ್ರೆ ಮನವಿ ಮಾಡಿದ್ದಾರೆ.

ಪಟ್ಟಣದ ಬಸ್ ನಿಲ್ದಾಣದ ಬಳಿ ಅತಿಕ್ರಮಣ ತೆರವಿಗಾಗಿ ಅಳತೆ ಮಾಡುವ ವೇಳೆ ಅವರು ಮಾತನಾಡಿದರು.

‘ಉದೇಶಪೂರ್ವಕ ನಿಮ್ಮ ಅಂಗಡಿ ತೆರವು ಮಾಡಿ ನಿಮಗೆ ತೊಂದರೆ ಕೊಡುವುದಲ್ಲ. ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟರೆ ಎಲ್ಲರಿಗೂ ಅನುಕೂಲವಾಗಲಿದೆ. ಪಟ್ಟಣ ಪಂಚಾಯಿತಿಯವರು ಮುಖ್ಯ ರಸ್ತೆ ಎರಡೂ ಬದಿ ರಸ್ತೆ ಹಾಗೂ ಪಾದಚಾರಿ ಮಾರ್ಗ ಅತಿಕ್ರಮಿಸಿದ ಶೆಡ್ ಅಂಗಡಿ ತೆರವು ಮಾಡಲು ಅವಕಾಶ ಮಾಡಿಕೊಡಿ. ದೊಡ್ಡವರು, ಸಣ್ಣವರು ಯಾರನ್ನೂ ನೋಡದೆ ಒತ್ತುವರಿ ತೆರವು ಮಾಡುತ್ತೇವೆ’ ಎಂದು ಹೇಳಿದರು. 

ADVERTISEMENT

‘ಈಗಾಗಲೇ ಇಂದಿರಾ ಕ್ಯಾಂಟಿನ್‍ನಿಂದ ಬಸ್ ನಿಲ್ದಾಣ ಬಳಿ ಸೇತುವೆವರೆಗೆ ಒಂದು ಭಾಗದ ಅತಿಕ್ರಮಣ ತೆರವು ಮಾಡಲಾಗಿದೆ. ಮೊತ್ತೊಂದು ಭಾಗದ ತೆರವು ಮಾಡಿ ಎರಡು ಕಡೆ ಚರಂಡಿ ನೀರು ಸುಗಮವಾಗಿ ಹರಿದು ಹೋಗಲು ವ್ಯವಸ್ಥೆ ಮಾಡಿಕೊಡುತ್ತೇವೆ’ ಎಂದು ಪಟ್ಟಣ ಪಂಚಾತ್ ಮುಖ್ಯಾಧಿಕಾರಿ ಸ್ವಾಮಿದಾಸ ಹೇಳಿದರು.

‘ಪಟ್ಟಣದಲ್ಲಿ ಸ್ವಚ್ಛತೆ ಕಾಪಾಡುವ ನಿಟ್ಟಿನಲ್ಲಿ ನಡೆಯುವ ಕಾರ್ಯಗಳಿಗೆ ನಾಗರಿಕರು ಸಹಕರಿಸಬೇಕು. ಬೀದಿ ಬದಿ ವ್ಯಾಪಾರಿಗಳಿಗೆ ಸೂಕ್ತ ಸ್ಥಳಾವಕಾಶ ಕಲ್ಪಿಸಲಾಗುವುದು’ ಎಂದು ಅವರು ತಿಳಿಸಿದರು.

ಬಸ್ ನಿಲ್ದಾಣದ ಎದುರು ಪಾರ್ಕಿಂಗ್ ವ್ಯವಸ್ಥೆ ಇಲ್ಲದೆ ಸಾರ್ವಜನಿಕರಿಗೆ ಸಮಸ್ಯೆಯಾಗುತ್ತಿದೆ. ಸಾರಿಗೆ ಸಂಸ್ಥೆ ಅಂಗಡಿಗಳೇ ರಸ್ತೆ ಅತಿಕ್ರಮಿಸಿದ್ದು ಅಂಗಡಿಗಳನ್ನು ತೆರವುಗೊಳಿಸಿ ಪಾರ್ಕಿಂಗ್ ವ್ಯವಸ್ಥೆ ಮಾಡಬೇಕು ಎಂದು ಕರ್ನಾಟಕ ರಕ್ಷಣಾ ವೇದಿಕೆಯ ರಾಜು ಯಡವೆ ಹಾಗೂ ಇತರರು ಆಗ್ರಹಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.