ADVERTISEMENT

ಮನಸೂರೆಗೊಳಿಸಿದ ಸಾಂಸ್ಕೃತಿಕ ಸಂಜೆ

​ಪ್ರಜಾವಾಣಿ ವಾರ್ತೆ
Published 8 ಏಪ್ರಿಲ್ 2024, 16:33 IST
Last Updated 8 ಏಪ್ರಿಲ್ 2024, 16:33 IST
ಬೀದರ್‌ನಲ್ಲಿ ಭಾನುವಾರ ನಡೆದ ಸಾಂಸ್ಕೃತಿಕ ಸಂಜೆ ಕಾರ್ಯಕ್ರಮದಲ್ಲಿ ಬಾಲಕಿಯರ ಸಮೂಹ ನೃತ್ಯ ಸಭಿಕರ ಮನತಣಿಸಿತು
ಬೀದರ್‌ನಲ್ಲಿ ಭಾನುವಾರ ನಡೆದ ಸಾಂಸ್ಕೃತಿಕ ಸಂಜೆ ಕಾರ್ಯಕ್ರಮದಲ್ಲಿ ಬಾಲಕಿಯರ ಸಮೂಹ ನೃತ್ಯ ಸಭಿಕರ ಮನತಣಿಸಿತು   

ಬೀದರ್: ನಾಟ್ಯಶ್ರೀ ನೃತ್ಯಾಲಯದಿಂದ ನಗರದಲ್ಲಿ ಭಾನುವಾರ ಆಯೋಜಿಸಿದ್ದ ಸಾಂಸ್ಕೃತಿಕ ಸಂಜೆ ಕಾರ್ಯಕ್ರಮ ಜನರ ಮನಸೂರೆಗೊಳಿಸಿತು.

ಕಲಾವಿದರು ಸಂಗೀತ, ನೃತ್ಯದ ಮೂಲಕ ಸಭಿಕರ ಮನತಣಿಸಿದರು. ದಶಾವತಾರ ನೃತ್ಯ ರೂಪಕ, ಜಕ್ಕಣಕ ಜಾನಪದ ನೃತ್ಯ, ಗಣೇಶ ಸ್ತುತಿ ಮೊದಲಾದವು ಸಭಿಕರ ಮೆಚ್ಚುಗೆಗೆ ಪಾತ್ರವಾಯಿತು.

ಪೂರ್ವಿಕಾ ಮತ್ತು ತಂಡದವರು ದಶಾವತಾರ ನೃತ್ಯ ರೂಪಕ, ಅಮೃತಾ ಶೆಟ್ಟಿ ಹಾಗೂ ತಂಡ ಶಾಸ್ತ್ರೀಯ ಸಂಗೀತ, ಮಹೇಶಕುಮಾರ ಮತ್ತು ತಂಡ ಜಾನಪದ ಗೀತೆ, ರಶ್ಮಿ, ಶ್ವೇತಾ ಹಾಗೂ ತಂಡ ಭರತನಾಟ್ಯ, ನಿತ್ಯಾ ಮತ್ತು ತಂಡ ಸಮೂಹ ನೃತ್ಯ, ರಾಜೇಶ್ವರಿ ಹಾಗೂ ತಂಡದವರು ಜಾನಪದ ನೃತ್ಯ ಪ್ರದರ್ಶಿಸಿದರು.

ADVERTISEMENT

ಉಪನ್ಯಾಸಕಿ ಅಕ್ಷಯಾ ಗೋಖಲೆ ಉದ್ಘಾಟಿಸಿದರು. ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಸದಸ್ಯ ಸಂಜೀವಕುಮಾರ ಅತಿವಾಳೆ, ಜ್ಞಾನಸುಧಾ ವಿದ್ಯಾಲಯದ ನಿರ್ದೇಶಕ ಮುನೇಶ್ವರ ಲಾಖಾ, ಡಾ. ಲೀಲಾವತಿ ನಿಂಬೂರೆ, ಚಿಂತಕಿ ಶೀಲಾ ಪಾಟೀಲ ಗಾದಗಿ, ನಾಟ್ಯಶ್ರೀ ನೃತ್ಯಾಲಯದ ಅಧ್ಯಕ್ಷೆ ರಾಣಿ ಸತ್ಯಮೂರ್ತಿ, ರಾಮಕೃಷ್ಣ ಸಾಳೆ, ನಾರಾಯಣರಾವ್ ಮುಖೇಡಕರ್, ಕೆ. ಗುರುಮೂರ್ತಿ, ಭಾರತಿ ವಸ್ತ್ರದ್, ಪ್ರತಿಭಾ ಚಾಮಾ, ಭಾನುಪ್ರಿಯ ಅರಳಿ, ನೃತ್ಯಾಲಯದ ನಿರ್ದೇಶಕ ಸತ್ಯಮೂರ್ತಿ, ಬಸವರಾಜ ಮೂಲಗೆ, ದೇವಿದಾಸ ಜೋಶಿ, ‌ರಾಘವೇಂದ್ರ ಅಡಿಗ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.