ADVERTISEMENT

ದೀಪಾವಳಿಗೆ ಹುಬ್ಬಳ್ಳಿ–ಬೀದರ್‌–ಯಶವಂತಪುರ ನಡುವೆ ವಿಶೇಷ ರೈಲು

​ಪ್ರಜಾವಾಣಿ ವಾರ್ತೆ
Published 9 ನವೆಂಬರ್ 2023, 12:44 IST
Last Updated 9 ನವೆಂಬರ್ 2023, 12:44 IST
ಭಗವಂತ ಖೂಬಾ
ಭಗವಂತ ಖೂಬಾ   

ಬೀದರ್‌: ‘ದೀಪಾವಳಿ ಹಬ್ಬಕ್ಕೆ ಜನರ ಅನುಕೂಲಕ್ಕಾಗಿ ಹುಬ್ಬಳ್ಳಿ–ಬೀದರ್‌–ಯಶವಂತಪುರ ನಡುವೆ ವಿಶೇಷ ರೈಲಿನ ವ್ಯವಸ್ಥೆ ಮಾಡಲಾಗಿದೆ’ ಎಂದು ಕೇಂದ್ರ ರಾಸಾಯನಿಕ ಖಾತೆ ರಾಜ್ಯ ಸಚಿವ ಭಗವಂತ ಖೂಬಾ ತಿಳಿಸಿದ್ದಾರೆ.

ವಿಶೇಷ ರೈಲು (ಗಾಡಿ ಸಂಖ್ಯೆ: 06505) ನವೆಂಬರ್‌ 10ರಂದು ಮಧ್ಯಾಹ್ನ 2.30ಕ್ಕೆ ಹುಬ್ಬಳ್ಳಿಯಿಂದ ಹೊರಟು ರಾತ್ರಿ 11.15ಕ್ಕೆ ಯಶವಂತಪುರ ತಲುಪಲಿದೆ. ಅಲ್ಲಿಂದ ನಿರ್ಗಮಿಸಿ ಯಾದಗಿರಿ, ಕಲಬುರಗಿ, ತಾಜಸುಲ್ತಾನಪುರ ಮಾರ್ಗವಾಗಿ ಬೆಳಿಗ್ಗೆ 10.49ಕ್ಕೆ ಹುಮನಾಬಾದ್‌, ಮಧ್ಯಾಹ್ನ 12.15ಕ್ಕೆ ಬೀದರ್‌ ತಲುಪಲಿದೆ. ಗಾಡಿ ಸಂಖ್ಯೆ: 06506 ರೈಲು ನವೆಂಬರ್‌ 14ರಂದು ಮಧ್ಯಾಹ್ನ 2.30ಕ್ಕೆ ಬೀದರ್‌ನಿಂದ ನಿರ್ಗಮಿಸಿ ಮರುದಿನ ನಸುಕಿನ ಜಾವ 4ಗಂಟೆಗೆ ಯಶವಂತಪುರ ನಿಲ್ದಾಣ ಸೇರಲಿದೆ ಎಂದು ಗುರುವಾರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಇತ್ತೀಚೆಗೆ ಬೀದರ್‌–ಯಶವಂತಪುರ ವಾಯಾ ಕಲಬುರಗಿ ರೈಲು ಶನಿವಾರ ರಾತ್ರಿ 11.15ಕ್ಕೆ ಯಶವಂತಪುರದಿಂದ ಹೊರಟು ಮರುದಿನ ಮಧ್ಯಾಹ್ನ 1.30ಕ್ಕೆ ಬೀದರ್‌ ತಲುಪಲಿದೆ. ಅದೇ ದಿನ ಮಧ್ಯಾಹ್ನ 2.30ಕ್ಕೆ ಬೀದರ್‌ನಿಂದ ನಿರ್ಗಮಿಸಿ ಮರುದಿನ ನಸುಕಿನ ಜಾವ 4ಕ್ಕೆ ಯಶವಂತಪುರ ಸೇರಲಿದೆ ಎಂದು ತಿಳಿಸಿದ್ದಾರೆ.

ADVERTISEMENT

ವಾಯಾ ವಿಕಾರಬಾದ್‌ ಮಾರ್ಗವಾಗಿ ಬೀದರ್‌–ಯಶವಂತಪುರ, ನಾಂದೇಡ್‌–ಬೀದರ್‌–ಬೆಂಗಳೂರು ರೈಲುಗಳು ಎಂದಿನಂತೆ ಸಂಚರಿಸಲಿವೆ. ಎರಡು ರೈಲು ವಾಯಾ ಕಲಬುರಗಿ ಮೂಲಕ ಪಯಣ ಬೆಳೆಸಲಿವೆ. ಇದರೊಂದಿಗೆ ಒಟ್ಟು ನಾಲ್ಕು ರೈಲುಗಳು ಬೆಂಗಳೂರಿಗೆ ಸಂಚರಿಸಿದಂತಾಗಲಿದ್ದು, ಸಾರ್ವಜನಿಕರು ಇದರ ಪ್ರಯೋಜನ ಪಡೆದುಕೊಳ್ಳಬೇಕು. ವಿಶೇಷ ರೈಲುಗಳಿಂದ ಹಣ ಉಳಿತಾಯವಾಗಲಿದೆ. ನಮ್ಮ ಮನವಿಗೆ ಓಗೊಟ್ಟು ಪ್ರಧಾನಿ ನರೇಂದ್ರ ಮೋದಿ, ರೈಲ್ವೆ ಸಚಿವ ಅಶ್ವಿನಿ ವೈಷ್ಣವ್‌ ಅವರು ವಿಶೇಷ ರೈಲುಗಳನ್ನು ಬಿಟ್ಟಿದ್ದಾರೆ ಎಂದು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.