ADVERTISEMENT

ಬಹಮನಿ ಕೋಟೆಯಲ್ಲಿ ಬೊಮ್ಮಗೊಂಡೇಶ್ವರ ಉತ್ಸವದ ಅನುಮತಿಗೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 26 ಫೆಬ್ರುವರಿ 2024, 4:08 IST
Last Updated 26 ಫೆಬ್ರುವರಿ 2024, 4:08 IST
ಜಿಲ್ಲಾ ಗೊಂಡ ವಿದ್ಯಾರ್ಥಿ ಸಂಘದವರು ಬೀದರ್‌ನಲ್ಲಿ ಶನಿವಾರ ಜಿಲ್ಲಾಧಿಕಾರಿ ಗೋವಿಂದ ರೆಡ್ಡಿ ಅವರಿಗೆ ಮನವಿ ಪತ್ರ ಸಲ್ಲಿಸಿದರು
ಜಿಲ್ಲಾ ಗೊಂಡ ವಿದ್ಯಾರ್ಥಿ ಸಂಘದವರು ಬೀದರ್‌ನಲ್ಲಿ ಶನಿವಾರ ಜಿಲ್ಲಾಧಿಕಾರಿ ಗೋವಿಂದ ರೆಡ್ಡಿ ಅವರಿಗೆ ಮನವಿ ಪತ್ರ ಸಲ್ಲಿಸಿದರು   

ಬೀದರ್‌: ನಗರದ ಬಹಮನಿ ಕೋಟೆಯಲ್ಲಿ ಬೊಮ್ಮಗೊಂಡೇಶ್ವರ ಉತ್ಸವ ಆಯೋಜಿಸಲು ಜಿಲ್ಲಾಡಳಿತ ಅನುಮತಿ ನೀಡಬೇಕೆಂದು ಜಿಲ್ಲಾ ಗೊಂಡ ವಿದ್ಯಾರ್ಥಿ ಸಂಘ ಒತ್ತಾಯಿಸಿದೆ.

ಸಂಘದ ಪದಾಧಿಕಾರಿಗಳು ನಗರದಲ್ಲಿ ಶನಿವಾರ ಜಿಲ್ಲಾಧಿಕಾರಿ ಗೋವಿಂದ ರೆಡ್ಡಿ ಅವರಿಗೆ ಮನವಿ ಪತ್ರ ಸಲ್ಲಿಸಿ ಆಗ್ರಹಿಸಿದರು.

ಬೊಮ್ಮಗೊಂಡೇಶ್ವರರು ನೀಡಿರುವ ಕೊಡುಗೆ ಅಪಾರ. ಅವರ ಸ್ಮರಣೆ, ಆದರ್ಶಗಳ ಪ್ರಚಾರ ಅಗತ್ಯ. ಬೊಮ್ಮಗೊಂಡೇಶ್ವರರು 14ನೇ ಶತಮಾನದಲ್ಲಿ ಜಿಲ್ಲೆಯಲ್ಲಿ ಆಗಿ ಹೋದ ಪವಾಡ ಪುರುಷರು. ಬೀದರ್ ಕೋಟೆ ನಿರ್ಮಾಣಕ್ಕೆ ಕಾರಣರಾದವರಲ್ಲಿ ಒಬ್ಬರು. ದುಷ್ಟ ಗೋಸಾಯಿಯನ್ನು ಸಂಹರಿಸಿದ್ದರು. ಬರಗಾಲದಲ್ಲಿ ಬಹಮನಿ ಅರಸ ಹಾಗೂ ಆತನ ಸೈನಿಕರ ಬಾಯಾರಿಕೆ ನೀಗಿಸಿದ್ದರು. ಕೋಟೆ ಕಟ್ಟಲು ಕಾಣಿಕೆ ಕೊಟ್ಟಿದ್ದರು ಎಂದು  ಸಂಘದ ಜಿಲ್ಲಾ ಅಧ್ಯಕ್ಷ ಸಂತೋಷಕುಮಾರ ಜೋಳದಾಪಕೆ ತಿಳಿಸಿದರು. 

ADVERTISEMENT

ಕೋಟೆಯಲ್ಲಿ ಬೊಮ್ಮಗೊಂಡೇಶ್ವರ ಸಮಾಧಿ ಇದೆ. ಬೊಮ್ಮಗೊಂಡೇಶ್ವರ ಕೆರೆ ಹಾಗೂ ನಾವದಗೇರಿ ಬಳಿಯ ಬೊಮ್ಮಗೊಂಡ ಗುಡ್ಡ ಅವರ ಇತಿಹಾಸಕ್ಕೆ ಸಾಕ್ಷಿಯಾಗಿವೆ ಎಂದರು.

ಗೊಂಡ ಸಮಾಜದ ಪ್ರಮುಖರಾದ ಭೀಮಸಿಂಗ್ ಮಲ್ಕಾಪುರ, ಎಂ.ಪಿ. ವೈಜಿನಾಥ, ವಿಜಯಕುಮಾರ ಬ್ಯಾಲಹಳ್ಳಿ, ಸುನೀಲ್ ಚಿಲ್ಲರ್ಗಿ, ರಮೇಶ ಮರ್ಜಾಪುರ, ತುಕಾರಾಮ ಚಿದ್ರಿ, ಕಲ್ಲಪ್ಪ ಶಹಾಪುರ, ಮಲ್ಲಪ್ಪ ಮೇತ್ರೆ, ಮಾರುತಿ ಗಾದಗಿ, ಶಿವಕುಮಾರ ಚಿಂತಲಗೇರಾ, ಶಿವಕುಮಾರ ಬಾಳೂರ, ಅನಿಲಕುಮಾರ ಇಮಾಮ್‍ಬಾದ್‍ಹಳ್ಳಿ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.