ADVERTISEMENT

ಔರಾದ್ | ಬೇರ್ಪಟ್ಟ ಬಸ್ ಟೈರ್: ತಪ್ಪಿದ ಅವಘಡ

​ಪ್ರಜಾವಾಣಿ ವಾರ್ತೆ
Published 5 ಜುಲೈ 2024, 16:19 IST
Last Updated 5 ಜುಲೈ 2024, 16:19 IST
ಔರಾದ್ ತಾಲ್ಲೂಕಿನ ‌ಕಂದುಗೂಳ ಬಳಿ ಸಾರಿಗೆ ಸಂಸ್ಥೆ ಬಸ್‌ನ ಟೈರ್ ಬೇರ್ಪಟ್ಟಿದೆ
ಔರಾದ್ ತಾಲ್ಲೂಕಿನ ‌ಕಂದುಗೂಳ ಬಳಿ ಸಾರಿಗೆ ಸಂಸ್ಥೆ ಬಸ್‌ನ ಟೈರ್ ಬೇರ್ಪಟ್ಟಿದೆ   

ಔರಾದ್: ತಾಲ್ಲೂಕಿನ ಕಂದಗೂಳ‌ ಹತ್ತಿರ ಶುಕ್ರವಾರ ಮಧ್ಯಾಹ್ನ ಕಲ್ಯಾಣ ಕರ್ನಾಟಕ ಸಾರಿಗೆ ಸಂಸ್ಥೆ ಬೀದರ್ ಘಟಕದ ಬಸ್ ಚಲಿಸುತ್ತಿರುವಾಗಲೇ ಟೈರ್ ಬೇರ್ಪಟ್ಟು ಚಾಲಕನ ಸಮಯ ಪ್ರಜ್ಞೆಯಿಂದ ಅವಘಡ ತಪ್ಪಿದೆ‌.

ಈ ಘಟನೆಯಿಂದ ಪ್ರಯಾಣಿಕರಲ್ಲಿ ಕೆಲ ಕಾಲ ಭೀತಿ ಅವರಿಸಿತು. ತಕ್ಷಣ ಬಸ್‌ನಿಂದ ಇಳಿದು ನಿಟ್ಟುಸಿರು‌ ಬಿಟ್ಟರು. ‘ಎಲ್ಲ ನೋಡಿಕೊಂಡು ಬಸ್ ತರಬೇಕು. ಏನಾದರೂ ಹೆಚ್ಚು ಕಮ್ಮಿಯಾದರೆ ಯಾರು‌ ಹೊಣೆ’ ಎಂದು ಪ್ರಯಾಣಿಕರು ಆಕ್ರೋಶ ವ್ಯಕ್ತಪಡಿಸಿದರು. ಈ ಬಸ್ ಜಮಗಿಯಿಂದ ಬೀದರ್ ಕಡೆ ಬರುವಾಗ ಕಂದಗೂಳ ಸೇತುವೆ ಬಳಿ ಘಟನೆ ನಡೆದಿದೆ. ಬಸ್‌ನಲ್ಲಿ 29 ಪ್ರಯಾಣಿಕರಿದ್ದರು‌‌. ಅವರೆಲ್ಲರನ್ನೂ ಮತ್ತೊಂದು ಬಸ್‌ನಲ್ಲಿ ಕೂಡಿಸಿ ಕಳುಹಿಸಲಾಗಿದೆ ಎಂದು ಸಾರಿಗೆ ನಿಗಮದ ಅಧಿಕಾರಿಗಳು ತಿಳಿಸಿದ್ದಾರೆ.

ಬೋಲ್ಟ್ ಹೊರ ಬಂದು ಟೈರ್ ಬೇರ್ಪಟ್ಟ ಸಾಧ್ಯತೆ ಇದೆ. ಮೆಕಾನಿಕ್ ಪರಿಶೀಲಿಸಿದ ನಂತರ ಅವರಿಗೆ ಗೊತ್ತಾಗುತ್ತದೆ ಎಂದು ಔರಾದ್ ಘಟಕ ವ್ಯವಸ್ಥಾಪಕ ಪಿ.ಎಸ್ ರಾಠೋಡ್ ತಿಳಿಸಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.