ಹುಮನಾಬಾದ್: ‘ಜೀವನದಲ್ಲಿ ಸುಖ ದುಖ ಎರಡನ್ನು ಸಮಾನವಾಗಿ ಸ್ವೀಕರಿಸಬೇಕು. ಯಾವುದಕ್ಕೂ ಸಹ ಅಹಂಕಾರ ಪಡಬಾರದು’ ಎಂದು ಹಲಬರ್ಗಾ-ಶಿವಣಿ-ಹೈದರಾಬಾದ್ ಮಠದ ಹಾವಗಿಲಿಂಗೇಶ್ವರ ಶಿವಾಚಾರ್ಯ ಹೇಳಿದರು.
ತಾಲ್ಲೂಕಿನ ಹುಡುಗಿ ಗ್ರಾಮದಲ್ಲಿ ನಡೆದ ದಿಗಂಬರ ಕರಿ ಬಸವೇಶ್ವರ ಜಾತ್ರಾ ಮಹೋತ್ಸವದಲ್ಲಿ ಅವರು ಮಾತನಾಡಿದರು.
ಹೇಗೆ ದೀಪ ಇದ್ದಲ್ಲಿ ಕತ್ತಲೆ ಮರೆಯಾಗುತ್ತದೆಯೋ ಹಾಗೆ ಜ್ಞಾನ ಇದ್ದಲ್ಲಿ ಅಜ್ಞಾನ ದೂರವಾಗುತ್ತದೆ. ಜ್ಞಾನದಿಂದಲೇ ಜೀವನ ಸುಂದರವಾಗುತ್ತದೆ ಎಂದು ಹೇಳಿದರು.
ಹಿರೇಮಠ ಸಂಸ್ಥಾನದ ಪೀಠಾಧಿಪತಿ ವಿರೂಪಾಕ್ಷ ಶಿವಾಚಾರ್ಯರು ಸಾನಿಧ್ಯ ವಹಿಸಿದ್ದರು. ಶರಣಯ್ಯ ಸ್ವಾಮಿ ವಿಭೂತಿ, ಚಂದ್ರಕಾಂತ ಔರಾದೆ, ಶಿವಾನಂದ ಉಳ್ಳಾಗಡ್ಡಿಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.