ಬೀದರ್: ಇಲ್ಲಿಯ ಓಲ್ಡ್‍ಸಿಟಿಯಲ್ಲಿ ಇರುವ ಡಾ. ಸಾಲಿನ್ಸ್ ನೇತ್ರ ಆಸ್ಪತ್ರೆಯಲ್ಲಿ ಡಾ. ಸಾಲಿನ್ಸ್ ಅವರ ಜನ್ಮದಿನ ಆಚರಿಸಲಾಯಿತು.
ಆಸ್ಪತ್ರೆಯ ನಿರ್ದೇಶಕಿ ಡಾ. ಸಿಬಿಲ್ ಸಾಲಿನ್ಸ್ ಅವರು ಡಾ. ಸಾಲಿನ್ಸ್ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಗೌರವಿಸಿದರು.
ನನ್ನ ತಂದೆ ಡಾ. ಸಾಲಿನ್ಸ್ ಅವರು ಬಡ ರೋಗಿಗಳ ಸೇವೆಯಲ್ಲೇ ಸಂತೃಪ್ತಿ ಕಂಡಿದ್ದರು. 1968 ರಲ್ಲಿ ಅವರು ಸ್ಥಾಪಿಸಿದ ಸಾಲಿನ್ಸ್ ಆಸ್ಪತ್ರೆ ಬಡ ರೋಗಿಗಳಿಗೆ ನಿರಂತರ ವೈದ್ಯಕೀಯ ಸೇವೆ ಒದಗಿಸುತ್ತ ಬಂದಿದೆ ಎಂದು ಡಾ. ಸಿಬಿಲ್ ತಿಳಿಸಿದರು.
ನಗರದ ಕೋಟೆ ಬಳಿ ಭಿಕ್ಷೆ ಬೇಡುತ್ತಿದ್ದ ಕುಷ್ಠರೋಗಿಗಳನ್ನು ಗುರುತಿಸಿ, ಚಟ್ನಳ್ಳಿ ಸಮೀಪ ಆಶ್ರಯ ಕಲ್ಪಿಸಿದರು. ಅವರಿಗೆ ಆಹಾರ, ಔಷಧಿಯನ್ನೂ ಒದಗಿಸಿದರು. 20 ವಿಧವೆಯರಿಗೆ ವಿಧವಾ ವೇತನ ಕೊಡಲು ಆರಂಭಿಸಿದರು ಎಂದು ಸ್ಮರಿಸಿದರು.
ಆಸ್ಪತ್ರೆಯ ಆಡಳಿತಾಧಿಕಾರಿ ಫಿಲೋಮನ್‍ರಾಜ್ ಪ್ರಸಾದ್ ಮಾತನಾಡಿ, ಜಿಲ್ಲೆಯ ವೈದ್ಯಕೀಯ ಕ್ಷೇತ್ರಕ್ಕೆ ಡಾ. ಸಾಲಿನ್ಸ್ ಕೊಡುಗೆ ಅಪಾರವಾಗಿದೆ. ಅವರ ಪುತ್ರಿ ಡಾ. ಸಿಬಿಲ್ ಅವರೂ ಅವರ ಮಾರ್ಗದಲ್ಲೇ ಸಾಗುತ್ತಿದ್ದಾರೆ. ಉಚಿತ ನೇತ್ರ ತಪಾಸಣೆ, ಶಸ್ತ್ರಚಿಕಿತ್ಸಾ ಶಿಬಿರ ಆಯೋಜಿಸಿ ಬಡ ರೋಗಿಗಳಿಗೆ ನೆರವಾಗುತ್ತಿದ್ದಾರೆ ಎಂದು ಹೇಳಿದರು.
ಕುಷ್ಠರೋಗಿಗಳ ಉಪಚಾರ ಮಾಡುತ್ತಿದ್ದಾರೆ. ಅನಾಥ ಹಾಗೂ ಒಂಟಿ ಪಾಲಕರು ಇರುವ 40 ಮಕ್ಕಳಿಗೆ ಆಸರೆ ಒದಗಿಸಿದ್ದಾರೆ. ಶಿಕ್ಷಣದೊಂದಿಗೆ ಅವರ ಭವಿಷ್ಯ ಉಜ್ವಲಗೊಳಿಸಲು ಶ್ರಮಿಸುತ್ತಿದ್ದಾರೆ. ಡಾ. ಸಿಬಿಲ್ ಅವರ ಸೇವೆ ಎಲ್ಲರಿಗೂ ಮಾದರಿಯಾಗಿದೆ ಎಂದು ತಿಳಿಸಿದರು.
ಪಾಸ್ಟರ್ ಜೋಸೆಫ್, ಡಾ. ವೀರೇಂದ್ರ ಪಾಟೀಲ, ಆಸ್ಪತ್ರೆಯ ಕಾರ್ಯಕ್ರಮ ಸಂಯೋಜಕ ಪುಟ್ಟರಾಜ್ ಬಲ್ಲೂರಕರ್, ವ್ಯವಸ್ಥಾಪಕ ಸತೀಶ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.