ADVERTISEMENT

ಸ್ವ ಉದ್ಯೋಗದಿಂದ ಆರ್ಥಿಕ ಪ್ರಗತಿ: ಶಿವಕಾಂತ್‌ ಮಿಶ್ರಾ

​ಪ್ರಜಾವಾಣಿ ವಾರ್ತೆ
Published 14 ಮೇ 2024, 16:21 IST
Last Updated 14 ಮೇ 2024, 16:21 IST
ಚಿಟಗುಪ್ಪ ತಾಲ್ಲೂಕಿನ ನಿರ್ಣಾದ ಗ್ರಾಮೀಣ ಸ್ವಉದ್ಯೋಗ ತಂತ್ರಜ್ಞಾನ ತರಬೇತಿ ಕೇಂದ್ರ, ನಿಸರ್ಗ ಆಯುರ್ವೇದ ಕೇಂದ್ರ ಹಾಗೂ ಲೂಧಿಯಾನದ ಅಂತರರಾಷ್ಟ್ರೀಯ ಮಾರುಕಟ್ಟೆ ನಿಗಮ ಆಶ್ರಯದಲ್ಲಿ ಜರುಗಿದ ಸ್ವಾವಲಂಬಿ ಬದುಕಿಗೆ ಸ್ವ ಉದ್ಯೋಗ ಉಪನ್ಯಾಸ ಕಾರ್ಯಕ್ರಮದಲ್ಲಿ ಶಿವಕಾಂತ್‌ ಮಿಶ್ರಾ ಮಾತನಾಡಿದರು
ಚಿಟಗುಪ್ಪ ತಾಲ್ಲೂಕಿನ ನಿರ್ಣಾದ ಗ್ರಾಮೀಣ ಸ್ವಉದ್ಯೋಗ ತಂತ್ರಜ್ಞಾನ ತರಬೇತಿ ಕೇಂದ್ರ, ನಿಸರ್ಗ ಆಯುರ್ವೇದ ಕೇಂದ್ರ ಹಾಗೂ ಲೂಧಿಯಾನದ ಅಂತರರಾಷ್ಟ್ರೀಯ ಮಾರುಕಟ್ಟೆ ನಿಗಮ ಆಶ್ರಯದಲ್ಲಿ ಜರುಗಿದ ಸ್ವಾವಲಂಬಿ ಬದುಕಿಗೆ ಸ್ವ ಉದ್ಯೋಗ ಉಪನ್ಯಾಸ ಕಾರ್ಯಕ್ರಮದಲ್ಲಿ ಶಿವಕಾಂತ್‌ ಮಿಶ್ರಾ ಮಾತನಾಡಿದರು   

ಚಿಟಗುಪ್ಪ: ʼಸ್ವ ಉದ್ಯೋಗದಿಂದ ಆರ್ಥಿಕವಾಗಿ ಸ್ವಾವಲಂಭಿ ಜೀವನ ನಡೆಸಲು ಸಾಧ್ಯವಾಗುತ್ತದೆʼ ಎಂದು ಹರಿಯಾಣದ ಅಂತರಾಷ್ಟ್ರೀಯ ಮಾರುಕಟ್ಟೆ ನಿಗಮದ ಪಾಲುದಾರ ನಿರ್ದೇಶಕ ಶಿವಕಾಂತ್‌ ಮಿಶ್ರಾ ಹೇಳಿದರು.

ತಾಲ್ಲೂಕಿನ ನಿರ್ಣಾದ ಗ್ರಾಮೀಣ ಸ್ವ ಉದ್ಯೋಗ ತಂತ್ರಜ್ಞಾನ ತರಬೇತಿ ಕೇಂದ್ರ, ನಿಸರ್ಗ ಆಯುರ್ವೇದ ಕೇಂದ್ರ ಹಾಗೂ ಲೂಧಿಯಾನದ ಅಂತರರಾಷ್ಟ್ರೀಯ ಮಾರುಕಟ್ಟೆ ನಿಗಮ ಆಶ್ರಯದಲ್ಲಿ ಜರುಗಿದ ಸ್ವಾವಲಂಬಿ ಬದುಕಿಗೆ ಸ್ವ ಉದ್ಯೋಗ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮುಖ್ಯ ಉಪನ್ಯಾಸ ನೀಡಿ ಮಾತನಾಡಿದರು.

‘ಕೇಂದ್ರ ಸರ್ಕಾರ ಸ್ವಾವಲಂಬಿ ಬದುಕಿಗೆ ಹೆಚ್ಚಿನ ಮಹತ್ವ ನೀಡುತ್ತಿದ್ದು, ನಾಗರಿಕರು ವಾಸ ಮಾಡುವ ಸ್ಥಳದಲ್ಲಿಯೇ ಲಭ್ಯ ಇರುವ ಸಂಪನ್ಮೂಲಗಳ ಸದ್ಬಳಕೆ ಮಾಡಿಕೊಂಡು ಅವುಗಳಿಗೆ ಆಧುನಿಕ ತಂತ್ರಜ್ಞಾನದ ಸ್ಪರ್ಶ ನೀಡಿ ಹೊಸ ಉತ್ಪನ್ನ ತಯಾರಿಸಿ ಅಂತರ್ಜಾಲ ತಾಣಗಳ ಮೂಲಕ ಮಾರಾಟ ಮಾಡುವುದರಿಂದ ಅಧಿಕ ಲಾಭ ಗಳಿಸಬಹುದಾಗಿದೆ ಹಾಗೂ ನಿರುದ್ಯೋಗ ಸಮಸ್ಯೆಯಿಂದ ಮುಕ್ತಿ ಪಡೆಯಬಹುದು ಎಂದರು.

ADVERTISEMENT

ನಿವೃತ್ತ ಉಪನ್ಯಾಸಕ ಸಿ.ವಿ ಮೈನಾಳೆ, ಶಿಕ್ಷಕ ನಾರಾಯಣರಾವ್‌ ಮಾತನಾಡಿದರು. ವಿಠಲ ನರಸಪ್ಪ, ಭೀಮರಾವ್‌ ಬಂಬೂಳಗಿ, ಅನಿಲ ಕುಮಾರ್‌ ಕುರಬಖೇಳಗಿ, ಶಂಕ್ರಯ್ಯ ಸ್ವಾಮಿ ಮಠ, ಸಾಯಬಣ್ಣ ಇದಲಾಯಿ, ಕುಪೇಂದ್ರ ಸಿದಪ್ಪ, ಈಶ್ವರ ಧುಮ್ಮನಸೂರ್‌, ನಾಗೇಶ್‌, ಮಹೇಶ್‌, ಮಂಜು ಭದ್ರಪನೋರ್‌ ಇತರರು ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.