ADVERTISEMENT

ಔರಾದ್: ಸರ್ಕಾರಿ ಶಾಲೆ ಮಕ್ಕಳಿಗೆ ಕಲಿಕಾ ಕಿಟ್ ವಿತರಣೆ

​ಪ್ರಜಾವಾಣಿ ವಾರ್ತೆ
Published 24 ಜೂನ್ 2024, 16:08 IST
Last Updated 24 ಜೂನ್ 2024, 16:08 IST
ಔರಾದ್ ಪಟ್ಟಣದ ಸರ್ಕಾರಿ ಪ್ರಾಥಮಿಕ ಶಾಲೆ ಮಕ್ಕಳಿಗೆ ಕಲಿಕಾ ಕಿಟ್ ವಿತರಿಸಲಾಯಿತು
ಔರಾದ್ ಪಟ್ಟಣದ ಸರ್ಕಾರಿ ಪ್ರಾಥಮಿಕ ಶಾಲೆ ಮಕ್ಕಳಿಗೆ ಕಲಿಕಾ ಕಿಟ್ ವಿತರಿಸಲಾಯಿತು   

ಔರಾದ್: ಸ್ಥಳೀಯ ಪೊಲೀಸ್ ಪೇದೆ ಅನಿಲಕುಮಾರ ತಾರೆ ಅವರ ಜನ್ಮದಿನದ ಅಂಗವಾಗಿ ಪಟ್ಟಣದ ಹರಿಜನವಾಡ ಸರ್ಕಾರಿ ಪ್ರಾಥಮಿಕ ಶಾಲೆ 98 ಮಕ್ಕಳಿಗೆ ಕಲಿಕಾ ಕಿಟ್ ವಿತರಿಸಲಾಯಿತು.

ಪಟ್ಟಣ ಪಂಚಾಯಿತಿ ಸದಸ್ಯ ಬಂಟಿ ದರಬಾರೆ ಅವರು ಕಲಿಕಾ ಕಿಟ್ ವಿತರಿಸಿ ಮಾತನಾಡಿ, ‘ಸರ್ಕಾರಿ ಶಾಲೆಗಳು ಬೆಳೆಯಬೇಕು. ಇಲ್ಲಿಯ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಸಿಗಬೇಕು. ಈ ಕಾರ್ಯಕ್ಕೆ ಸಮಾಜ ಕೈಜೋಡಿಸಬೇಕು’ ಎಂದು ಹೇಳಿದರು.

ಕ್ಷೇತ್ರ ಸಂಪನ್ಮೂಲ ವ್ಯಕ್ತಿ ಶಶಿಕಾಂತ ಬಿಡವೆ ಮಾತನಾಡಿ, ‘ನಾಲ್ಕು ನೋಟ್ ಬುಕ್, ಒಂದು ಪೆನ್, ಪೆನ್ಸಿಲ್, ಶಾರ್ಪನರ್‌ ಸೇರಿದಂತೆ ಕಲಿಕಾ ಸಾಮಗ್ರಿಗಳಿರುವ ಕಿಟ್ ವಿತರಿಸಲಾಗಿದೆ. ಇದರಿಂದ ಸರ್ಕಾರಿ ಶಾಲೆಗೆ ಬರುವ ಬಡ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ’ ಎಂದು ಹೇಳಿದರು.

ADVERTISEMENT

ವಿನಾಯಕ ಗಂಗೊಳ್ಳಿ, ಛಾಯಾದೇವಿ ಗಂಗೊಳ್ಳಿ, ಮುಖ್ಯ ಶಿಕ್ಷಕ ವಿಜಯಕುಮಾರ ಧುಳಂಡೆ, ಕಾಶಿನಾಥ ಬಿರಾದಾರ, ಸೋಪಾನರಾವ ಡೊಂಗ್ರೆ, ಸುಧಾಕರ ಸಕ್ಪಾಲ್, ಶಿಕ್ಷಕಿ ಕಮಲಾ, ಮಹಾದೇವಿ, ಅಮಜ, ರವಿ, ವಿಜಯಕುಮಾರ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.