ADVERTISEMENT

ದಸರಾ ಸಮಾಪ್ತಿ: ವಿದ್ಯಾರ್ಥಿಗಳಿಗೆ ಬಹುಮಾನ

​ಪ್ರಜಾವಾಣಿ ವಾರ್ತೆ
Published 14 ಅಕ್ಟೋಬರ್ 2024, 16:14 IST
Last Updated 14 ಅಕ್ಟೋಬರ್ 2024, 16:14 IST
ಬಸವಕಲ್ಯಾಣ ತಾಲ್ಲೂಕಿನ ಬಟಗೇರಾ ಗ್ರಾಮದಲ್ಲಿ ಭಾನುವಾರ ನಡೆದ ಮಹಾಲಕ್ಷ್ಮಿ ದೇವಸ್ಥಾನದ ದಸರಾ ಸಮಾಪ್ತಿ ಮೆರವಣಿಗೆಯಲ್ಲಿ ಎಸ್ಎಸ್ಎಲ್‌ಸಿಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಬಹುಮಾನ ನೀಡಿ ಸನ್ಮಾನಿಸಲಾಯಿತು
ಬಸವಕಲ್ಯಾಣ ತಾಲ್ಲೂಕಿನ ಬಟಗೇರಾ ಗ್ರಾಮದಲ್ಲಿ ಭಾನುವಾರ ನಡೆದ ಮಹಾಲಕ್ಷ್ಮಿ ದೇವಸ್ಥಾನದ ದಸರಾ ಸಮಾಪ್ತಿ ಮೆರವಣಿಗೆಯಲ್ಲಿ ಎಸ್ಎಸ್ಎಲ್‌ಸಿಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಬಹುಮಾನ ನೀಡಿ ಸನ್ಮಾನಿಸಲಾಯಿತು   

ಬಸವಕಲ್ಯಾಣ: ತಾಲ್ಲೂಕಿನ ಬಟಗೇರಾ ಗ್ರಾಮದಲ್ಲಿ ಭಾನುವಾರ ಮಹಾಲಕ್ಷ್ಮಿ ದೇವಸ್ಥಾನದ ನಾಡಹಬ್ಬ ದಸರಾ ಸಮಾಪ್ತಿ ಮತ್ತು ಪಲ್ಲಕ್ಕಿ ಮೆರವಣಿಗೆ ಸಂಭ್ರಮದಿಂದ ನೆರವೇರಿತು.

ಬಳಿಕ ಹಮ್ಮಿಕೊಂಡಿದ್ದ ಸಭೆಯಲ್ಲಿ ಗ್ರಾಮದ 1997ನೇ ಸಾಲಿನ ಎಸ್.ಎಸ್.ಎಲ್.ಸಿ ಸಹಪಾಠಿ ಬಳಗದಿಂದ, ಪ್ರಸಕ್ತ ಸಾಲಿನ ಎಸ್ಎಸ್ಎಲ್‌ಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಬಹುಮಾನ ನೀಡಿ ಸನ್ಮಾನಿಸಲಾಯಿತು. ಸಾನಿಯಾ ಮಹೇಬೂಬ್‌ಗೆ ಪ್ರಥಮ ಬಹುಮಾನವಾಗಿ ₹11 ಸಾವಿರ ಮತ್ತು ವಿದ್ಯಾಶ್ರೀ ಭೀಮರಾಯ ಗಿಲಗಿಲಿ ಅವರಿಗೆ ದ್ವಿತೀಯ ಬಹುಮಾನವಾಗಿ ₹5 ಸಾವಿರ ಹಣ ನೀಡಿ ಸನ್ಮಾನಿಸಲಾಯಿತು

ಬಳಗದ ಪ್ರಮುಖರಾದ ಅಶೋಕ ಸಂಗೋಳಗಿ, ತಾನಾಜಿ ಭುರೆ, ದತ್ತಾತ್ರಿ ಕಪನೂರೆ, ದೇವ ಭುರೆ, ಕುಶಲಿಂಗ ಗೌಡೆ, ದತ್ತಾತ್ರಿ ಜಮಾದಾರ, ಪರಮೇಶ್ವರ ಢೋಲೆ, ಸಿದ್ಧಾರೂಢ ಜಮಾದಾರ, ತುಕಾರಾಮ ಜಮಾದಾರ ಮತ್ತಿತರರು ಉಪಸ್ಥಿತರಿದ್ದರು.

ADVERTISEMENT

ಇಡೀದಿನ ಗ್ರಾಮದಲ್ಲಿ ಪಲ್ಲಕ್ಕಿ ಮೆರವಣಿಗೆ ನಡೆಯಿತು. ವಾದ್ಯ ಮೇಳದವರು, ಭೂತೇರ ಕುಣಿತದವರು, ಭಜನಾ ತಂಡದವರು ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.