ADVERTISEMENT

ಸದೃಢ ರಾಷ್ಟ್ರ ನಿರ್ಮಾಣಕ್ಕೆ ಎಲ್ಲರ ಕೊಡುಗೆ ಅಗತ್ಯ: ಕನ್ನಡ-ಸಂಸ್ಕೃತಿ ಇಲಾಖೆ

ಸಹಾಯಕ ನಿರ್ದೇಶಕ ಸಿದ್ರಾಮ ಸಿಂಧೆ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 24 ಡಿಸೆಂಬರ್ 2021, 13:08 IST
Last Updated 24 ಡಿಸೆಂಬರ್ 2021, 13:08 IST
ಬೀದರ್ ತಾಲ್ಲೂಕಿನ ಚಿಮಕೋಡ್ ಗ್ರಾಮದಲ್ಲಿ ನಡೆದ ಸ್ವಾತಂತ್ರ್ಯದ ಅಮೃತ ಮಹೋತ್ಸವ ಕಾರ್ಯಕ್ರಮವನ್ನು ಗ್ರಾಮ ಪಂಚಾಯಿತಿ ಅಧ್ಯಕ್ಷ ನಾಗಶೆಟ್ಟಿ ಬಿರಾದಾರ ಉದ್ಘಾಟಿಸಿದರು. ಸಿದ್ರಾಮ ಸಿಂಧೆ, ರಾಜೇಶ್ವರಿ, ಶ್ರೀಕಾಂತ ಕಂದಗೂಳೆ, ಅನಿಲ್ ಸಿಂಪೆ ಇದ್ದರು
ಬೀದರ್ ತಾಲ್ಲೂಕಿನ ಚಿಮಕೋಡ್ ಗ್ರಾಮದಲ್ಲಿ ನಡೆದ ಸ್ವಾತಂತ್ರ್ಯದ ಅಮೃತ ಮಹೋತ್ಸವ ಕಾರ್ಯಕ್ರಮವನ್ನು ಗ್ರಾಮ ಪಂಚಾಯಿತಿ ಅಧ್ಯಕ್ಷ ನಾಗಶೆಟ್ಟಿ ಬಿರಾದಾರ ಉದ್ಘಾಟಿಸಿದರು. ಸಿದ್ರಾಮ ಸಿಂಧೆ, ರಾಜೇಶ್ವರಿ, ಶ್ರೀಕಾಂತ ಕಂದಗೂಳೆ, ಅನಿಲ್ ಸಿಂಪೆ ಇದ್ದರು   

ಜನವಾಡ: ‘ಸದೃಢ ರಾಷ್ಟ್ರ ನಿರ್ಮಾಣಕ್ಕೆ ಒಂದಿಲ್ಲೊಂದು ರೀತಿಯ ಕೊಡುಗೆ ಕೊಡಬೇಕು. ಹೀಗಾಗಿ ಯುವಕರು ದೇಶ ಸೇವೆಗೆ ಸದಾ ಸಿದ್ಧರಿರಬೇಕು’ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಸಿದ್ರಾಮ ಸಿಂಧೆ ಹೇಳಿದರು.

ಬೀದರ್ ತಾಲ್ಲೂಕಿನ ಚಿಮಕೋಡ್ ಗ್ರಾಮದ ನಂದೀಶ್ವರ ದೇವಸ್ಥಾನ ಆವರಣದಲ್ಲಿ ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಆಯೋಜಿಸಿದ್ದ ಸ್ವಾತಂತ್ರ್ಯದ ಅಮೃತ ಮಹೋತ್ಸವ ಹಾಗೂ ಸ್ವರ್ಣಂ ವಿಜಯ ವರ್ಷ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

2023 ರಲ್ಲಿ ದೇಶದ ಸ್ವಾತಂತ್ರ್ಯಕ್ಕೆ 75 ವರ್ಷ ತುಂಬುತ್ತಿದೆ. ಇದರ ಅಂಗವಾಗಿ ಇಲಾಖೆಯಿಂದ ವಿಶೇಷ ಉಪನ್ಯಾಸ, ಸಂಗೀತ, ಸ್ತಬ್ಧಚಿತ್ರ ಪ್ರದರ್ಶನ ಸೇರಿ 17 ಕಾರ್ಯಕ್ರಮಗಳನ್ನು ನಡೆಸಲಾಗಿದೆ. ಜನರಲ್ಲಿ ದೇಶಾಭಿಮಾನ ಬೆಳೆಸಲಾಗುತ್ತಿದೆ ಎಂದು ಹೇಳಿದರು.

ADVERTISEMENT

ಯಲ್ಲಾಲಿಂಗೇಶ್ವರ ಪ್ರೌಢಶಾಲೆ ಮುಖ್ಯಶಿಕ್ಷಕಿ ರಾಜೇಶ್ವರಿ ಮಾತನಾಡಿ, ದೇಶಕ್ಕೆ ಅನೇಕರ ಮಹಾ ಪುರುಷರ ತ್ಯಾಗ, ಬಲಿದಾನದಿಂದ ಸ್ವಾತಂತ್ರ್ಯ ದೊರಕಿದೆ ಎಂದು ಹೇಳಿದರು.

ವಿದ್ಯಾರ್ಥಿಗಳು ಸ್ವಾತಂತ್ರ್ಯಕ್ಕಾಗಿ ನಡೆದ ಹೋರಾಟವನ್ನು ಅರಿಯಬೇಕು. ದೇಶಪ್ರೇಮ ಮೈಗೂಡಿಸಿಕೊಳ್ಳಬೇಕು ಎಂದು ನುಡಿದರು.

ಕಲಾವಿದೆ ವೀಣಾ ದೇವದಾಸ ಚಿಮಕೋಡ್ ದೇಶಭಕ್ತಿ ಗೀತೆ ಗಾಯನ ಮಾಡಿದರು. ಸಿದ್ಧಲಿಂಗ ಮತ್ತು ಯಲ್ಲಾಲಿಂಗ ಸುಣಗಾರ ಸಹೋದರರು ತಮಟೆ ಪ್ರದರ್ಶನ ನೀಡಿದರು.

ಗ್ರಾಮ ಪಂಚಾಯಿತಿ ಅಧ್ಯಕ್ಷ ನಾಗಶೆಟ್ಟಿ ಬಿರಾದಾರ ಉದ್ಘಾಟಿಸಿದರು. ಪಿಡಿಒ ಅನಿಲಕುಮಾರ ಚಿಟ್ಟಾ ಅಧ್ಯಕ್ಷತೆ ವಹಿಸಿದ್ದರು.

ಗ್ರಾಮ ಪಂಚಾಯಿತಿ ಅಧ್ಯಕ್ಷ ಅನಿಲಕುಮಾರ ಚಿಟ್ಟಾ ಅಧ್ಯಕ್ಷತೆ ವಹಿಸಿದ್ದರು. ಸದಸ್ಯರಾದ ಅನಿಲ್ ಸಿಂಪೆ, ದೇವಿದಾಸ ಬಿರಾದಾರ, ಸರ್ಕಾರಿ ಪ್ರಾಥಮಿಕ ಶಾಲೆಯ ಎಸ್‍ಡಿಎಂಸಿ ಅಧ್ಯಕ್ಷ ಶ್ರೀಕಾಂತ ಕಂದಗೂಳೆ ಇದ್ದರು. ಕಲಾವಿದ ದೇವದಾಸ ಚಿಮಕೋಡ್ ನಿರೂಪಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.