ADVERTISEMENT

ಹುಲಸೂರ: ವೀರಭದ್ರೇಶ್ವರ ರಥೋತ್ಸವ

​ಪ್ರಜಾವಾಣಿ ವಾರ್ತೆ
Published 8 ಏಪ್ರಿಲ್ 2022, 12:23 IST
Last Updated 8 ಏಪ್ರಿಲ್ 2022, 12:23 IST
ಹುಲಸೂರಿನಲ್ಲಿ ವೀರಭದ್ರೇಶ್ವರರ ರಥೋತ್ಸವ ನಡೆಯಿತು
ಹುಲಸೂರಿನಲ್ಲಿ ವೀರಭದ್ರೇಶ್ವರರ ರಥೋತ್ಸವ ನಡೆಯಿತು   

ಹುಲಸೂರ: ಪಟ್ಟಣದಲ್ಲಿ ಏ.2ರಿಂದ 8ರವರೆಗೆ ವೀರಭದ್ರೇಶ್ವರರ ಜಾತ್ರಾ ಮಹೋತ್ಸವ ನಡೆಯಿತು. ಶುಕ್ರವಾರ ರಥ ಎಳೆಯಲಾಯಿತು.

ಸಂಗಮೇಶ್ವರ ದೇವಾಲಯದಿಂದ ಹಾದಿ ಬಸವಣ್ಣ (ನಂದಿ) ದೇವಾಲಯದವರೆಗೆ ರಥ ಎಳೆಯಲಾಯಿತು. ಈ ವೇಳೆ ಸಿಡಿಮದ್ದುಗಳನ್ನು ಹಾರಿಸಲಾಯಿತು.

ವೀರಭದ್ರೇಶ್ವರ ದೇವಾಲಯದ ಪಂಚ ಸಮಿತಿ ಅಧ್ಯಕ್ಷ ಕಾಶಿನಾಥ ಪಾರಶೇಟ್ಟೆ, ಉಪಾಧ್ಯಕ್ಷ ಚಂದ್ರಕಾಂತ ದೆಟ್ನೆ, ಕಾರ್ಯದರ್ಶಿ ಬಂಡುರಾವ ಪಿ.ಪಾಟೀಲ, ಸಹ ಕಾರ್ಯದರ್ಶಿ ಕಾಶಿನಾಥ ಕೌಟೆ, ಮಲ್ಲಪ್ಪ ಧಬಾಲೆ, ಓಂಕಾರ ಪಟ್ನೆ, ಬಾಬುರಾವ ಬಾಲಕುಂದೆ, ಸೂಯ೯ಕಾಂತ ಪಾರಶೇಟೆ, ರಾಜಕುಮಾರ ನಿಡೋದೆ, ಬಸವರಾಜ ಖಿಂಡೆಮಠ, ಸಿದ್ರಾಮ ಟಿಳೆ, ಶಿವರಾಜ ಪಾರಶೇಟೆ, ವೀರಪ್ಪ ಪಾಂಚಾಳ, ಜಗನಾಥ ದೆಟ್ನೆ, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಅನೀಲ ಭೂಸಾರೆ, ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷೆ ಲತಾ ಶಾಂತಕುಮಾರ ಹಾರಕೂಡೆ ಹಾಗೂ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಸುಧೀರ ಕಾಡಾದಿ, ಗೊವೀಂದರಾವ ಸೋಮವಂಶಿ, ಪ್ರಲ್ಹಾದರಾವ ಮೊರೆ, ದೇವಿಂದ್ರ ಭೊಪಳೆ, ದೇವಿಂದ್ರ ಭೊಪಳೆ, ಸಂಜೀವ ಏಕಲೂರೆ ಭಾಗವಹಿಸಿದ್ದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.