ADVERTISEMENT

ಬೀದರ್‌ ಜಿಲ್ಲೆಯಲ್ಲಿ ಐದು ಸಿ.ಎನ್.ಜಿ ಸ್ಟೇಷನ್ ಆರಂಭ

ಬೀದರ್‌ನಲ್ಲಿ ಮನೆಗಳಿಗೆ ಗ್ಯಾಸ್ ಪೂರೈಕೆ ಶೀಘ್ರ

​ಪ್ರಜಾವಾಣಿ ವಾರ್ತೆ
Published 2 ಜನವರಿ 2023, 10:50 IST
Last Updated 2 ಜನವರಿ 2023, 10:50 IST
ಭಾರತ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್‍ನಿಂದ ಹುಮನಾಬಾದ್‍ನಲ್ಲಿ ನೂತನ ಕಂಪ್ರೆಸ್ಡ್ ನ್ಯಾಚುರಲ್ ಗ್ಯಾಸ್ (ಸಿಎನ್‍ಜಿ) ಸ್ಟೇಷನ್ ಉದ್ಘಾಟಿಸಲಾಯಿತು
ಭಾರತ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್‍ನಿಂದ ಹುಮನಾಬಾದ್‍ನಲ್ಲಿ ನೂತನ ಕಂಪ್ರೆಸ್ಡ್ ನ್ಯಾಚುರಲ್ ಗ್ಯಾಸ್ (ಸಿಎನ್‍ಜಿ) ಸ್ಟೇಷನ್ ಉದ್ಘಾಟಿಸಲಾಯಿತು   

ಬೀದರ್: ಭಾರತ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ ವತಿಯಿಂದ ಜಿಲ್ಲೆಯಲ್ಲಿ ಹೊಸದಾಗಿ ಐದು ಕಂಪ್ರೆಸ್ಡ್ ನ್ಯಾಚುರಲ್ ಗ್ಯಾಸ್ (ಸಿಎನ್‍ಜಿ) ಸ್ಟೇಷನ್‍ಗಳನ್ನು ಆರಂಭಿಸಲಾಗಿದೆ ಎಂದು ಕಾರ್ಪೊರೇಷನ್‍ನ ಪ್ರದೇಶ ವ್ಯವಸ್ಥಾಪಕ ಸಂಜೀವ ಕೆ.ಎ ಹಾಗೂ ಮಾರಾಟ ಅಧಿಕಾರಿ ಸೆಂಥಿಲ್ ಕುಮಾರ ತಿಳಿಸಿದ್ದಾರೆ.

ಬೀದರ್‌ನ ಎಫ್.ಕೆ ಪೆಟ್ರೋಲಿಯಂ, ನಕ್ಷತ್ರ ಫಿಲ್ಲಿಂಗ್ ಸ್ಟೇಷನ್, ಹುಮನಾಬಾದ್‍ನ ವಿ.ಆರ್. ಚಿದ್ರಿ ಪೆಟ್ರೋಲ್ ಬಂಕ್, ಶರಣಮ್ಮ ಪೆಟ್ರೋಲಿಯಂ ಹಾಗೂ ಬಸವಕಲ್ಯಾಣದ ಲಕ್ಷ್ಮಿ ವೆಂಕಟೇಶ್ವರ ಪೆಟ್ರೋಲಿಯಂನಲ್ಲಿ ಸ್ಟೇಷನ್‍ಗಳನ್ನು ಉದ್ಘಾಟಿಸಲಾಗಿದೆ. ಬರುವ ವರ್ಷಗಳಲ್ಲಿ ಇನ್ನಷ್ಟು ಸ್ಟೇಷನ್‍ಗಳನ್ನು ಪ್ರಾರಂಭಿಸುವ ಯೋಜನೆ ಇದೆ ಎಂದು ಹೇಳಿದ್ದಾರೆ.

ಕಾರ್ಪೊರೇಷನ್, ಬೀದರ್ ನಗರದಲ್ಲಿ ಸಿಟಿ ಗ್ಯಾಸ್ ಡಿಸ್ಟ್ರಿಬ್ಯೂಷನ್ (ಸಿಜಿಡಿ) ಯೋಜನೆ ಅನುಷ್ಠಾನಕ್ಕೆ ತಯಾರಿ ನಡೆಸಿದೆ. ಈಗಾಗಲೇ ಹಲವು ಮನೆಗಳಿಗೆ ಮೀಟರ್ ಹಾಗೂ ನಿಯಂತ್ರಕಗಳನ್ನು ಅಳವಡಿಸಿದೆ. ಶೀಘ್ರದಲ್ಲೇ ಗ್ಯಾಸ್ ಪೂರೈಕೆಯಾಗುವ ನಿರೀಕ್ಷೆ ಇದೆ ಎಂದು ತಿಳಿಸಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.