ಕಮಲನಗರ: ಪಟ್ಟಣದ ಹೋಟೆಲ್‌ಗಳ ಮೆಲೆ ತಾಲ್ಲೂಕು ಆಹಾರ ಸುರಕ್ಷತಾ ನಿರೀಕ್ಷಕ ಕೀಶೋರಕುಮಾರ್ ಶನಿವಾರ ದಿಢೀರ್ ದಾಳಿ ಮಾಡಿದರು. ಕೆಲವರಿಗೆ ನೋಟಿಸ್ ನೀಡಿದರು.
ಆಹಾರ ಸುರಕ್ಷತಾ ಆಂದೋಲನ ಪ್ರಯುಕ್ತ ಪಟ್ಟಣದ ಬೀದಿಬದಿ ಹೋಟೆಲ್ ರೆಸ್ಟೋರೆಂಟ್ ಹಾಗೂ ಬೀದಿಬದಿ ಅಂಗಡಿಗಳ ಮೇಲೆ ದಾಳಿ ಮಾಡಿದರು. ‘ಹೋಟೆಲ್‌ಗಳಲ್ಲಿ ಆಹಾರ ತಯಾರಕರು ತಲೆಗೆ ಟೋಪಿ, ಮಾಸ್ಕ್, ಕೈಗಳಿಗೆ ಗ್ಲೌಜ್‌ಗಳನ್ನು ತಪ್ಪದೇ ಧರಿಸಬೇಕು. ಒಂದು ಸಾರಿ ಬಳಸಿದ ಅಡುಗೆ ಎಣ್ಣೆಯನ್ನು ಪುನಃ ಬಳಸಬಾರದು. ಆಹಾರದಲ್ಲಿ ರಾಸಾಯನಿಕ ಇರುವ ಬಣ್ಣ ಬಳಸಬಾರದು’ ಎಂದು ಹೋಟೆಲ್ ಮಾಲೀಕರಿಗೆ ಎಚ್ಚರಿಕೆ ನೀಡಿದರು.
‘ಹೋಟೆಲ್‌ಗಳಲ್ಲಿ ಊಟ ಬಡಿಸುವ ಕೆಲಸದವರು ಕೂಡ ತಪ್ಪದೇ ಮಾಸ್ಕ್, ಕೈಗೆ ಗ್ಲೌಜ್, ಟೋಪಿಗಳನ್ನು ಬಳಸಬೇಕು ಮತ್ತು ಸ್ವಚ್ಛತೆ ಕಾಪಾಡಬೇಕು’ ಎಂದು ಸೂಚಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.