ADVERTISEMENT

ಬೀದರ್‌: ಬಾಕಿ ಉಳಿಸಿಕೊಂಡಿದ್ದಕ್ಕೆ ಡೈರಿ ಕರೆಂಟ್‌ ಕಟ್‌, ಹಾಲು ಸುರಿದು ಆಕ್ರೋಶ

​ಪ್ರಜಾವಾಣಿ ವಾರ್ತೆ
Published 30 ಅಕ್ಟೋಬರ್ 2023, 16:17 IST
Last Updated 30 ಅಕ್ಟೋಬರ್ 2023, 16:17 IST
<div class="paragraphs"><p>ಬೀದರ್‌&nbsp;ನಗರದ ಜೆಸ್ಕಾಂ ಕಚೇರಿ ಎದುರು&nbsp;ಹಾಲು ಚೆಲ್ಲಿರುವ ದೃಶ್ಯ</p></div>

ಬೀದರ್‌ ನಗರದ ಜೆಸ್ಕಾಂ ಕಚೇರಿ ಎದುರು ಹಾಲು ಚೆಲ್ಲಿರುವ ದೃಶ್ಯ

   

ಬೀದರ್‌: ವಿದ್ಯುತ್‌ ಬಿಲ್‌ ಬಾಕಿ ಉಳಿಸಿಕೊಂಡಿದ್ದಕ್ಕೆ ಡೈರಿ ಕರೆಂಟ್‌ ಕಟ್‌ ಮಾಡಿದ್ದರಿಂದ ಸುಮಾರು ಮೂರು ಸಾವಿರ ಲೀಟರ್‌ ಹಾಳಾಗಿದ್ದು, ಡೈರಿ ಮಾಲೀಕರು ನಗರದ ಜೆಸ್ಕಾಂ ಕಚೇರಿ ಎದುರು ಸೋಮವಾರ ರಾತ್ರಿ ಹಾಲು ಚೆಲ್ಲಿ ಆಕ್ರೋಶ ವ್ಯಕ್ತಪಡಿಸಿದರು.

ನಗರದ ‘ಲೋಕಲ್‌ ಫಾರ್ಮ್‌’ ಡೈರಿ ಜೆಸ್ಕಾಂಗೆ ₹1.30 ಲಕ್ಷ ಬಿಲ್ ಕಟ್ಟದೇ ಬಾಕಿ ಉಳಿಸಿಕೊಂಡಿತ್ತು. ಸೋಮವಾರ ಬೆಳಿಗ್ಗೆ ಡೈರಿ ವಿದ್ಯುತ್‌ ಸಂಪರ್ಕ ಕಡಿತಗೊಳಿಸಲಾಗಿತ್ತು. ಇದರಿಂದಾಗಿ ಮೂರು ಸಾವಿರ ಲೀಟರ್‌ ಹಾಲು ಕೆಟ್ಟು ಹೋಗಿದೆ. ತೀವ್ರ ನಷ್ಟವಾಗಿದ್ದಕ್ಕೆ ಸಿಟ್ಟಾಗಿ ಕ್ಯಾನ್‌ಗಳಲ್ಲಿ ಹಾಲು ತಂದು ಜೆಸ್ಕಾಂ ಕಚೇರಿ ಎದುರು ಸುರಿದರು.

ADVERTISEMENT

‘ನಮ್ಮ ಡೈರಿಯಿಂದ ₹1.30 ಲಕ್ಷ ವಿದ್ಯುತ್‌ ಬಿಲ್‌ ಕಟ್ಟಬೇಕಿತ್ತು. ₹45 ಸಾವಿರ ಕಟ್ಟಿದ್ದೆವು. ಶುಕ್ರವಾರ ₹50 ಸಾವಿರ ಮೊತ್ತದ ಚೆಕ್‌ ನೀಡಿದ್ದೇವೆ. ಚೆಕ್‌ ಕ್ಲೇಮ್‌ ಮಾಡಿಕೊಳ್ಳದೆ ಏಕಾಏಕಿ ಬಂದು ಬೆಳಿಗ್ಗೆ ವಿದ್ಯುತ್‌ ಸಂಪರ್ಕ ಕಟ್‌ ಮಾಡಿದ್ದಾರೆ. ನೋಟಿಸ್‌ ಕೂಡ ನೀಡಿಲ್ಲ. ನಿತ್ಯ 25 ಹಳ್ಳಿಗಳ ರೈತರು ನಮಗೆ ಹಾಲು ಮಾರಾಟ ಮಾಡುತ್ತಾರೆ. ಸಂಗ್ರಹವಾಗಿದ್ದ ಹಾಲು ಹಾಗೂ ಹಾಲಿನ ಇತರೆ ಉತ್ಪನ್ನಗಳು ಹಾಳಾಗಿದ್ದು, ₹4 ಲಕ್ಷ ಮೌಲ್ಯದ ನಷ್ಟವಾಗಿದೆ. ಮಂಗಳವಾರ ಪುನಃ ರೈತರು ಹಾಲು ತೆಗೆದುಕೊಂಡು ಬರುತ್ತಾರೆ. ಕರೆಂಟ್‌ ಇಲ್ಲದ ಕಾರಣ ಸಂಗ್ರಹಿಸಲು ಆಗುವುದಿಲ್ಲ. ಇದಕ್ಕೆ ಯಾರು ಹೊಣೆ. ನಷ್ಟವನ್ನು ಜೆಸ್ಕಾಂ ಅಧಿಕಾರಿಗಳು ಭರಿಸಬೇಕು’ ಎಂದು ಡೈರಿ ಮಾಲೀಕರಾದ ಶಾಂತಬಾಯಿ ಹಾಗೂ ಅಜಯ್ ಬಿರಾದಾರ್ ಆಗ್ರಹಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.