ಬೀದರ್: ‘ಆರಂಭದಲ್ಲೇ ಚಿಕಿತ್ಸೆ ಪಡೆದರೆ ಸ್ತನ ಕ್ಯಾನ್ಸರ್‌ನಿಂದ ಗುಣಮುಖರಾಗಬಹುದು’ ಎಂದು ಹೈದರಾಬಾದ್‍ನ ಕೇರ್ ಆಸ್ಪತ್ರೆಯ ಕ್ಯಾನ್ಸರ್ ತಜ್ಞ ಡಾ.ವಿಪಿನ್ ಗೋಯಲ್ ಹೇಳಿದರು.
ನಗರದ ಬ್ರಿಮ್ಸ್‌ನಲ್ಲಿ ನಡೆದ ಸ್ತನ ಕ್ಯಾನ್ಸರ್ ಜಾಗೃತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಸ್ತನ ಕ್ಯಾನ್ಸರ್ ಅನ್ನು ಪ್ರಾರಂಭಿಕ ಹಂತದಲ್ಲೇ ಗುರುತಿಸಬೇಕು. ಆರಂಭದಲ್ಲಿ ಚಿಕಿತ್ಸೆ ನೀಡಿದಲ್ಲಿ ಉತ್ತಮ ಫಲಿತಾಂಶ ಕಾಣಬಹುದು ಎಂದು ತಿಳಿಸಿದರು.
ಬ್ರಿಮ್ಸ್ ನಿರ್ದೇಶಕ ಡಾ. ಶಿವಕುಮಾರ ಶೆಟಕಾರ್, ಐಎಂಎ ಬೀದರ್ ಘಟಕದ ಅಧ್ಯಕ್ಷ ಡಾ. ಮದನಾ ವೈಜಿನಾಥ, ಉಪಾಧ್ಯಕ್ಷೆ ಡಾ. ಉಮಾ ದೇಶಮುಖ, ಕಾರ್ಯದರ್ಶಿ ಡಾ. ಮಲ್ಲಿಕಾರ್ಜುನ ಪನಶೆಟ್ಟಿ, ಡಾ. ಸಂಜಯ ಚಂದಾ, ಡಾ. ಮಹೇಶ ಬಿರಾದಾರ, ಡಾ. ಎ.ಸಿ. ಲಲಿತಮ್ಮ, ಡಾ. ಜಯಶ್ರೀ ಸ್ವಾಮಿ, ಡಾ. ಶ್ವೇತಾ ಕುಣಕೇರಿ, ಡಾ. ಸರಿತಾ ಭದಭದೆ, ಡಾ. ಸಿ. ಆನಂದರಾವ್ ಹಾಗೂ ನಿತಿನ್ ಕರ್ಪೂರ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.