ADVERTISEMENT

ಬೀದರ್‌: ಸಾಯಗಾಂವ್‌, ಖಟಕಚಿಂಚೋಳಿಯಲ್ಲಿ ಹೆಚ್ಚು ಮಳೆ

​ಪ್ರಜಾವಾಣಿ ವಾರ್ತೆ
Published 11 ಜೂನ್ 2024, 15:36 IST
Last Updated 11 ಜೂನ್ 2024, 15:36 IST
ಮಳೆ
ಮಳೆ   

ಬೀದರ್‌: ಜಿಲ್ಲೆಯ ಬಹುತೇಕ ಕಡೆಗಳಲ್ಲಿ ಮಂಗಳವಾರವೂ ಮಳೆ ಮುಂದುವರೆದಿದ್ದು, ನಸುಕಿನ ಜಾವ ಉತ್ತಮ ವರ್ಷಧಾರೆಯಾಗಿದೆ.

ಭಾಲ್ಕಿ ತಾಲ್ಲೂಕಿನ ಸಾಯಗಾಂವ್‌ ಹಾಗೂ ಖಟಕಚಿಂಚೋಳಿ ಹೋಬಳಿಗಳಲ್ಲಿ ಅತಿ ಹೆಚ್ಚು ಮಳೆಯಾಗಿದೆ. 5.8 ಸೆಂ.ಮೀ ವರ್ಷಧಾರೆಯಾಗಿದ್ದು, ಮುಂಗಾರು ಆಗಮನದ ನಂತರ ಅತಿ ಹೆಚ್ಚಿನ ಮಳೆಯಾಗಿರುವುದು ಇದೇ ಮೊದಲು.

ಕಮಲನಗರ ಹೋಬಳಿಯಲ್ಲಿ 4.4 ಸೆಂ.ಮೀ, ಬಸವಕಲ್ಯಾಣದಲ್ಲಿ 3.8 ಸೆಂ.ಮೀ ಆಗಿದೆ. ಜಿಲ್ಲೆಯಾದ್ಯಂತ ಒಟ್ಟು 2.3 ಸೆಂ.ಮೀ ಮಳೆ ಸುರಿದಿದೆ.

ADVERTISEMENT

ಸೋಮವಾರ ರಾತ್ರಿ ಗುಡುಗು ಸಹಿತ ತುಂತುರು ಮಳೆ ಶುರುವಾಯಿತು. ತಡರಾತ್ರಿ ಶುರುವಾದ ಜಿಟಿಜಿಟಿ ಮಳೆ ನಸುಕಿನ ಜಾವದ ವರೆಗೆ ಸುರಿಯಿತು. ನಸುಕಿನ ಜಾವ ಗಂಟೆಗೂ ಹೆಚ್ಚು ಕಾಲ ಬಿರುಸಾಗಿ ಸುರಿಯಿತು.

ಮಂಗಳವಾರ ದಿನವಿಡೀ ಕಾರ್ಮೋಡ ಕವಿದಿತ್ತು. ಆದರೆ, ಮಳೆಯ ಸುಳಿವು ಇರಲಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.