ADVERTISEMENT

ಗುರುನಾನಕ ದೇವ್‌ ಶಾಲೆಗೆ ನೂರಕ್ಕೆ ನೂರು ಫಲಿತಾಂಶ

​ಪ್ರಜಾವಾಣಿ ವಾರ್ತೆ
Published 18 ಮೇ 2024, 15:13 IST
Last Updated 18 ಮೇ 2024, 15:13 IST
ಅಮೂಲ್ಯ
ಅಮೂಲ್ಯ   

ಬೀದರ್‌: 2023-24ನೇ ಸಾಲಿನ ಸಿಬಿಎಸ್‌ಇ ಹತ್ತನೆ ತರಗತಿಯ ಪರೀಕ್ಷೆಯಲ್ಲಿ ಗುರುನಾನಕ ದೇವ್ ಪಬ್ಲಿಕ್ ಶಾಲೆಯ ವಿದ್ಯಾರ್ಥಿಗಳು ಉತ್ತಮ ಸಾಧನೆ ತೋರಿದ್ದಾರೆ.

ಶಾಲೆಯ ವಿದ್ಯಾರ್ಥಿನಿ ವರ್ಷಾ ಎಸ್. ಶೇ 98ರಷ್ಟು ಅಂಕ ಗಳಿಸಿ ಗಮನಾರ್ಹ ಸಾಧನೆ ಮಾಡಿದ್ದಾರೆ. ವರ್ಷಾ ಅವರು ಸಮಾಜ ವಿಜ್ಞಾನದಲ್ಲಿ 100, ಕನ್ನಡ 99, ಗಣಿತಶಾಸ್ತ್ರದಲ್ಲಿ 97, ವಿಜ್ಞಾನ 98 ಮತ್ತು ಇಂಗ್ಲಿಷ್‌ನಲ್ಲಿ 94 ಅಂಕ ಪಡೆದು ಶಾಲೆಗೆ ಮತ್ತು ಜಿಲ್ಲೆಗೆ ಕೀರ್ತಿ ತಂದಿದ್ದಾರೆ.

ಪರೀಕ್ಷೆ ಬರೆದ ಒಟ್ಟು 80 ವಿದ್ಯಾರ್ಥಿಗಳಲ್ಲಿ 10 ವಿದ್ಯಾರ್ಥಿಗಳು ಶೇ 90ಕ್ಕಿಂತ ಅಧಿಕ, 38 ಅಗ್ರಶ್ರೇಣಿ, 30 ಪ್ರಥಮ ಶ್ರೇಣಿ ಮತ್ತು 12 ವಿದ್ಯಾರ್ಥಿಗಳು ದ್ವಿತೀಯ ದರ್ಜೆಯಲ್ಲಿ ತೇರ್ಗಡೆ ಹೊಂದಿದ್ದಾರೆ. ಪ್ರತಿ ವರ್ಷದಂತೆ ಈ ವರ್ಷವೂ ನೂರಕ್ಕೆ ನೂರು ಪ್ರತಿಶತ ಫಲಿತಾಂಶ ಬಂದಿದೆ.

ADVERTISEMENT

ವಿದ್ಯಾರ್ಥಿಗಳಾದ ಸಾಹಿತ್ಯ ಎಸ್. ಶೇ 95.80, ಅರ್ಪಿತಾ ಶೇ 95, ಸೈಯದಾ ಸುಬಿಯಾ ಫಾಲಿಮಾ ಶೇ 94, ಭೂಮಿಕಾ ಎಂ. ಶೇ 93, ಎಸ್.ವಿಜಯಲಕ್ಷ್ಮಿ ಶೇ 93, ಭಕ್ತಿ ಶಿವಪುತ್ರ ಶೇ 91, ಗೌರಿ ಬಸವರಾಜ ಶೇ 91, ಅಮೂಲ್ಯ ಶೇ 90.2, ಸುಯಶ್ ಶೇ 90ರಷ್ಟು ಅಂಕ ಪಡೆದು ಅತ್ಯುತ್ತಮ ಸಾಧನೆ ಮಾಡಿದ್ದಾರೆ.

ವಿದ್ಯಾರ್ಥಿಗಳ ಸಾಧನೆಗೆ ಗುರುನಾನಕ ದೇವ್ ಪಬ್ಲಿಕ್ ಶಾಲೆಯ ಅಧ್ಯಕ್ಷೆ ರೇಷ್ಮಾ ಕೌರ್, ಪ್ರಾಚರ‍್ಯೆ ಶರ್ಲಿ ಶೀಬಾ ಸಂತಸ ವ್ಯಕ್ತಪಡಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.