ADVERTISEMENT

ಔರಾದ್: 80 ರೋಗಿಗಳ ಆರೋಗ್ಯ ತಪಾಸಣೆ

​ಪ್ರಜಾವಾಣಿ ವಾರ್ತೆ
Published 27 ಜುಲೈ 2024, 15:54 IST
Last Updated 27 ಜುಲೈ 2024, 15:54 IST
ಔರಾದ್ ಪಟ್ಟಣದಲ್ಲಿ ನಡೆದ ಉಚಿತ ಆರೋಗ್ಯ ತಪಾಸಣೆ ಶಿಬಿರವನ್ನು  ಪಿಎಸ್‌ಐ ವಸೀಮ್ ಪಟೇಲ್, ಉದ್ಘಾಸಿದರು. ವೈದ್ಯರು, ಸ್ಥಳೀಯ ಗಣ್ಯರು ಇದ್ದರು
ಔರಾದ್ ಪಟ್ಟಣದಲ್ಲಿ ನಡೆದ ಉಚಿತ ಆರೋಗ್ಯ ತಪಾಸಣೆ ಶಿಬಿರವನ್ನು  ಪಿಎಸ್‌ಐ ವಸೀಮ್ ಪಟೇಲ್, ಉದ್ಘಾಸಿದರು. ವೈದ್ಯರು, ಸ್ಥಳೀಯ ಗಣ್ಯರು ಇದ್ದರು   

ಔರಾದ್: ‘ಪಟ್ಟಣದ ಮಾತೋಶ್ರೀ ಆಸ್ಪತ್ರೆಯಲ್ಲಿ ಶನಿವಾರ ಸುದೀಕ್ಷಾ ಫೌಂಡೇಶನ್ ಸಹಯೋಗದಲ್ಲಿ ನಡೆದ ಉಚಿತ ಆರೋಗ್ಯ ಶಿಬಿರದಲ್ಲಿ 80 ರೋಗಿಗಳ ಆರೋಗ್ಯ ತಪಾಸಣೆ ಮಾಡಲಾಯಿತು.

ಡಾ.ನಾಗೇಶ್ ಕೌಟಗೆ ಅವರು ಕೀಲು ನೋವು, ಮೊಣಕಾಲು, ಹಿಮ್ಮಡಿ ನೋವಿನಿಂದ ಬಳಲುತ್ತಿರುವ ರೋಗಿಗಳಿಗೆ ತಪಾಸಣೆ ಮಾಡಿ ಔಷಧ ವಿತರಿಸಿದರು.

ಡಾ.ಕಿರಣ ಕಾಡಗೆ ಸಾಮಾನ್ಯ ರೋಗಿಗಳಿಗೆ ತಪಾಸಣೆ ಮಾಡಿ, ‘ಎಲ್ಲರೂ ತಮ್ಮ ದೈನಂದಿನ ಕೆಲಸದ ಜತೆ ಆರೋಗ್ಯದ ಕಡೆಗೂ ಗಮನ ಕೊಡಬೇಕು. ಇಂದಿನ ಜೀವನ ಶೈಲಿಯಿಂದ ಆಗಾಗ ಆರೋಗ್ಯ ತಪಾಸಣೆ ಅಗತ್ಯ’ ಎಂದು ಹೇಳಿದರು.

ADVERTISEMENT

ಪಿಎಸ್‌ಐ ವಸೀಮ್ ಪಟೇಲ್ ಶಿಬಿರ ಉದ್ಘಾಟಿಸಿದರು. ಕಾಯಕ ಯೋಗಿ ಟ್ರಸ್ಟ್ ಕಾರ್ಯದರ್ಶಿ ಅನಿಲ ಜಿರೋಬೆ, ಸಂಪನ್ಮೂಲ ಶಿಕ್ಷಕ ನಾಗನಾಥ ಚಿಟ್ಮೆ, ಗಣಪತಿ, ಸಿದ್ರಾಮ ನಿಡೋದೆ, ಅನೀಲ ರೆಡ್ಡಿ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.