ADVERTISEMENT

ನಿರಂತರ ಮಳೆ: ಬೀದರ್ ಜಿಲ್ಲೆಯಲ್ಲಿ 38 ಮನೆಗಳಿಗೆ ಹಾನಿ

​ಪ್ರಜಾವಾಣಿ ವಾರ್ತೆ
Published 1 ಸೆಪ್ಟೆಂಬರ್ 2024, 13:32 IST
Last Updated 1 ಸೆಪ್ಟೆಂಬರ್ 2024, 13:32 IST
<div class="paragraphs"><p>ಬಸವಕಲ್ಯಾಣ ತಾಲ್ಲೂಕಿನ ಸದ್ಲಾಪುರದಲ್ಲಿ ಸಂಜೀವ ಲಾಲಪ್ಪ ಅವರ ಮನೆ ಗೋಡೆ ಕುಸಿದು ಬಿದ್ದಿದೆ</p></div>

ಬಸವಕಲ್ಯಾಣ ತಾಲ್ಲೂಕಿನ ಸದ್ಲಾಪುರದಲ್ಲಿ ಸಂಜೀವ ಲಾಲಪ್ಪ ಅವರ ಮನೆ ಗೋಡೆ ಕುಸಿದು ಬಿದ್ದಿದೆ

   

ಬೀದರ್: ಶನಿವಾರದಿಂದ ಬೀದರ್ ಜಿಲ್ಲೆಯಾದ್ಯಂತ ನಿರಂತರವಾಗಿ ಮಳೆ ಸುರಿಯುತ್ತಿದ್ದು, ವರ್ಷಧಾರೆಗೆ ಭಾನುವಾರ ಜಿಲ್ಲೆಯಲ್ಲಿ 38 ಮನೆಗಳಿಗೆ ಭಾಗಶಃ ಹಾನಿಯಾಗಿದೆ.

ಬೀದರ್‌ನ ಜಿಲ್ಲಾ ರಂಗಮಂದಿರ, ಡಿಡಿಪಿಐ ಕಚೇರಿ, ನೆಹರೂ ಕ್ರೀಡಾಂಗಣ, ಜಿಲ್ಲಾ ಉಸ್ತುವಾರಿ ಸಚಿವರ ಕಚೇರಿ ಜಲಾವೃತವಾಗಿದೆ. ಸತತ ಮಳೆಗೆ ಜನಜೀವನ ಅಸ್ತವ್ಯಸ್ತಗೊಂಡಿದೆ.

ADVERTISEMENT

ಮಳೆಗೆ ಮನೆ ಹಾನಿಗೀಡಾದ ತಾಲ್ಲೂಕುವಾರು ವಿವರ

ತಾಲ್ಲೂಕು; ಹಾನಿಗೀಡಾದ ಮನೆಗಳು

ಔರಾದ್; 6

ಕಮಲನಗರ; 14

ಬಸವಕಲ್ಯಾಣ; 4

ಹುಮನಾಬಾದ್; 2

ಚಿಟಗುಪ್ಪ; 7

ಹುಲಸೂರ;1

ಭಾಲ್ಕಿ; 4

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.