ADVERTISEMENT

‘ರೈತರ ಹೊಲಗಳಿಗೆ ಹೋದರೆ ಪರಿಸ್ಥಿತಿ ಮನವರಿಕೆ’

​ಪ್ರಜಾವಾಣಿ ವಾರ್ತೆ
Published 2 ಜನವರಿ 2024, 16:14 IST
Last Updated 2 ಜನವರಿ 2024, 16:14 IST
ಬೀದರ್‌ನಲ್ಲಿ ಮಂಗಳವಾರ ತೋಟಗಾರಿಕೆ ಇಲಾಖೆಯ ಅಧಿಕಾರಿಗಳಿಗೆ ಏರ್ಪಡಿಸಿದ್ದ ಕಾರ್ಯಾಗಾರವನ್ನು ತೋಟಗಾರಿಕೆ  ಕಾಲೇಜಿನ ಡೀನ್ ಎಸ್.ವಿ.ಪಾಟೀಲ ಉದ್ಘಾಟಿಸಿದರು
ಬೀದರ್‌ನಲ್ಲಿ ಮಂಗಳವಾರ ತೋಟಗಾರಿಕೆ ಇಲಾಖೆಯ ಅಧಿಕಾರಿಗಳಿಗೆ ಏರ್ಪಡಿಸಿದ್ದ ಕಾರ್ಯಾಗಾರವನ್ನು ತೋಟಗಾರಿಕೆ  ಕಾಲೇಜಿನ ಡೀನ್ ಎಸ್.ವಿ.ಪಾಟೀಲ ಉದ್ಘಾಟಿಸಿದರು   

ಬೀದರ್‌: ‘ರೈತರ ಹೊಲಗಳಿಗೆ ಅಧಿಕಾರಿಗಳು ಭೇಟಿ ನೀಡಿದರೆ ವಾಸ್ತವ ಸಮಸ್ಯೆ ಗೊತ್ತಾಗುತ್ತದೆ. ಅದಕ್ಕೆ ಸೂಕ್ತ ಪರಿಹಾರ ಒದಗಿಸಲು ಸಾಧ್ಯವಾಗುತ್ತದೆ’ ಎಂದು ತೋಟಗಾರಿಕೆ  ಕಾಲೇಜಿನ ಡೀನ್ ಎಸ್.ವಿ.ಪಾಟೀಲ ತಿಳಿಸಿದರು.

ನಗರದ ತೋಟಗಾರಿಕೆ ಕಾಲೇಜಿನಲ್ಲಿ ಮಂಗಳವಾರ ಏರ್ಪಡಿಸಿದ್ದ ಪ್ರಸಕ್ತ ಸಾಲಿನ ಎರಡನೇ ತ್ರೈಮಾಸಿಕ ತೋಟಗಾರಿಕೆ ಕಾರ್ಯಾಗಾರದಲ್ಲಿ ಭಾಗವಹಿಸಿ ಮಾತನಾಡಿದರು.

ತೋಟಗಾರಿಕೆ ಇಲಾಖೆಯ ವತಿಯಿಂದ ರೈತರಿಗಾಗಿ ಅನೇಕ ಯೋಜನೆಗಳನ್ನು, ಸೌಕರ್ಯಗಳನ್ನು ಒದಗಿಸಲಾಗುತ್ತಿದೆ. ಅದರ ಬಗ್ಗೆಯೂ ರೈತರಿಗೆ ಮಾಹಿತಿ ಒದಗಿಸಬಹುದು ಎಂದರು.

ADVERTISEMENT

ತೋಟಗಾರಿಕೆ ವಿಸ್ತರಣಾ ಶಿಕ್ಷಣ ಘಟಕದ ವಿಸ್ತರಣಾ ಮುಂದಾಳು ವಿ.ಪಿ. ಸಿಂಗ್ ಮಾತನಾಡಿ, ಮುಂದೆ ನಡೆಯಲಿರುವ ತೋಟಗಾರಿಕೆ ಮೇಳದಲ್ಲಿ ಶ್ರೇಷ್ಠ ರೈತ/ರೈತ ಮಹಿಳೆ ಪ್ರಶಸ್ತಿಗಾಗಿ ಅರ್ಜಿ ಸಲ್ಲಿಕೆ ಕುರಿತು ರೈತರಿಗೆ ಮಾಹಿತಿ ಒದಗಿಸಬೇಕು. ಫೆಬ್ರುವರಿ 10ರಿಂದ 12ರ ವರೆಗೆ ರೈತರಿಗೆ ಶೈಕ್ಷಣಿಕ ಪ್ರವಾಸ ಹಮ್ಮಿಕೊಳ್ಳಲಾಗುತ್ತದೆ. ಅದರ ಬಗ್ಗೆಯೂ ಪ್ರಚಾರ ಕೈಗೊಳ್ಳಬೇಕು ಎಂದು ತಿಳಿಸಿದರು.

ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ ಸೋಮನಾಥ ಘಾಳೆ, ಹಿರಿಯ ಸಹಾಯಕ  ಸುನೀಲ ಗಂಗಶ್ರೀ, ಸಹಾಯಕ ಪ್ರಾಧ್ಯಾಪಕರಾದ ದುಷ್ಯಂತ ಓಲೇಕರ, ಪ್ರಶಾಂತ, ‌ಜಿಲ್ಲೆಯ 46 ಸಹಾಯಕ ತೋಟಗಾರಿಕೆ ಅಧಿಕಾರಿಗಳು ಕಾರ್ಯಾಗಾರದಲ್ಲಿ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.