ADVERTISEMENT

ಹುಲಸೂರ: ಮಾಂಜ್ರಾ ನದಿಗೆ ಹರಿದು ಬಂದ ನೀರು

​ಪ್ರಜಾವಾಣಿ ವಾರ್ತೆ
Published 11 ಜೂನ್ 2024, 15:36 IST
Last Updated 11 ಜೂನ್ 2024, 15:36 IST
ಹುಲಸೂರ ಸಮೀಪದ ಮುಚಳಂಬ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಲಿಂಬಾಪುರ ಗ್ರಾಮದ ಫಾತಿಮಾ ಅವರ ಮನೆ ಗೋಡೆ ಕುಸಿದಿದೆ
ಹುಲಸೂರ ಸಮೀಪದ ಮುಚಳಂಬ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಲಿಂಬಾಪುರ ಗ್ರಾಮದ ಫಾತಿಮಾ ಅವರ ಮನೆ ಗೋಡೆ ಕುಸಿದಿದೆ   

ಹುಲಸೂರ: ತಾಲ್ಲೂಕಿನ ಮಾಂಜ್ರಾ ನದಿಗೆ ನೆರೆ ಮಹಾರಾಷ್ಟ್ರ ಭಾಗದಲ್ಲಿ ಸುರಿದ ಭಾರಿ ಮಳೆಗೆ ಅಪಾರ ನೀರು ಹರಿದುಬರುತ್ತಿದ್ದು, ಮಂಗಳವಾರ ನದಿ ತನ್ನ ಒಡಲು ತುಂಬಿಕೊಂಡು ಹರಿಯಲಾರಂಭಿಸಿದೆ.

ನೆರೆ ರಾಜ್ಯದ ಲಾತುರ್, ಉಸ್ಮಾನಾಬಾದ, ಬಿಡ, ಸೋಲಾಪುರ ಸೇರಿ ವಿವಿಧ ಜಿಲ್ಲೆಗಳಲ್ಲಿ ಭಾರಿ ಪ್ರಮಾಣದ ಮಳೆ ಸುರಿಯುತ್ತಿರುವ ಹಿನ್ನೆಲೆ ಬತ್ತಿ ಹೋಗಿದ್ದ ಮಾಂಜ್ರಾ ನದಿಯಲ್ಲಿ ನೀರಿನ ಶೇಖರಣಾ ಪ್ರಮಾಣ ಹೆಚ್ಚಾಗಿದೆ. ಹವಾಮಾನದ ಇಲಾಖೆಯ ಸೂಚನೆಯಂತೆ ಇನ್ನು ಎರಡು ದಿನ ಹೆಚ್ಚಿನ ಮಳೆ ಸುರಿದರೆ, ನೀರಿನ ಹರಿವಿನ ಪ್ರಮಾಣ ಇನ್ನೆರಡು ದಿನಗಳಲ್ಲಿ ಮತ್ತಷ್ಟು ಹೆಚ್ಚಾಗುವ ಸಾಧ್ಯತೆಯಿದೆ.

ಬರದ ಛಾಯೆಯಲ್ಲಿ ಮುಳುಗಿದ್ದ ಹುಲಸೂರ ತಾಲ್ಲೂಕಿನ ರೈತರ ಮೊಗದಲ್ಲಿ ಮಂದಹಾಸ ಮೂಡಿದೆ.

ADVERTISEMENT

ಮಳೆಗೆ ಮನೆ ಗೋಡೆ ಕುಸಿತ:

ತಾಲ್ಲೂಕಿನಲ್ಲಿ ರಾತ್ರಿ ಸುರಿದ ಮಳೆಗೆ ಮುಚಳಂಬ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಲಿಂಬಾಪುರ ಗ್ರಾಮದ  ಫಾತಿಮಾ ಜಾನಿಮಿಯ್ಯ ಅವರ ಮನೆ ಗೋಡೆ ಕುಸಿದಿದೆ. ಸ್ಥಳಕ್ಕೆ ಪಿಡಿಒ, ಗ್ರಾಮಲೆಕ್ಕಿಗರು ಪರಿಶೀಲನೆ ನಡೆಸಿದರು.

ಮಳೆ ನೀರಿನಿಂದ ಮಾಂಜ್ರಾ ನದಿಯಲ್ಲಿ ನೀರಿನ ಹರಿವು ಹೆಚ್ಚಾಗಿರುವುದು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.