ಹುಲಸೂರ: ತಾಲ್ಲೂಕಿನ ಮೂರು ಗ್ರಾಮ ಪಂಚಾಯಿತಿಗಳಾದ ಗೋಟಾ೯(ಬಿ), ತೋಗಲೂರ, ಹುಲಸೂರ ಗ್ರಾಮ ಪಂಚಾಯಿತಿಗಳಿಗೆ ಸಾವ೯ತ್ರಿಕ ಚುನಾವಣೆ ಡಿಸೆಂಬರ್ 27ರಂದು ನಡೆದು, ಡಿ.30 ರಂದು ಮತ ಎಣಿಕೆ ನಡೆಯಿತು. ತಾಲ್ಲೂಕಿನ ಸಕಾ೯ರಿ ಎಂಕೆಕೆಪಿ ಸಕಾ೯ರಿ ಪ್ರಥಮ ದಜೆ೯ ಕಾಲೇಜಿನಲ್ಲಿ ಬೆಳಿಗ್ಗೆ 8 ರಿಂದಲೇ ಮತ ಎಣಿಕೆ ಕಾಯ೯ನಡೆಯಿತು.
ಹುಲಸೂರ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ 12 ವಾಡ್‌೯ಗಳು ಬರುತ್ತವೆ. ಅದರಲ್ಲಿ 11ನೇ ವಾಡ್‌೯ನ ಅಂತರಭಾರತಿ ತಾಂಡಾದ ಸಾಮಾನ್ಯ ಮಹಿಳೆ ಅನೀತಾ ರಾಜೇಂದ್ರ ಜಾಧವ ಅವಿರೋಧ ಆಯ್ಕೆಗೊಂಡ ಪರಿಣಾಮ, ಸೋಲದಾಬಕಾದ 12ನೇ ವಾಡ್‌೯ನ 4 ಸ್ಥಾನ ಹಾಗೂ ಹುಲಸೂರನ 10 ವಾಡ್‌೯ಗಳ 29 ಸದಸ್ಯರ ಸ್ಥಾನಕ್ಕೆ ಡಿಸೆಂಬರ್ 27ರಂದು ಮತದಾನ ನಡೆದಿತ್ತು. ಗುರುವಾರ ಫಲಿತಾಂಶ ಹೊರಬಿದ್ದಿದೆ.
ವಾಡ್‌೯ 1ರಲ್ಲಿ ನಾಲ್ಕು ಸ್ಥಾನಗಳು ಇದ್ದು ಅದರಲ್ಲಿ ಸರಸ್ವತಿ ಬಾಬುರಾವ ಬಾಲಕುಂದೆ 435 ಮತ, ಜಗನಾಥ ಸೂಯ೯ಕಾಂತ ದೆಟ್ನೆ 430, ವೈಜಿನಾಥ ಸನ್ಮೂಕಪ್ಪಾ ಮೇತ್ರೆ 360, ಬಬಿತಾ ಸುರೇಶ 348 ಪಡೆದು ವಿಜೇತರಾಗಿದ್ದಾರೆ.
ವಾಡ್‌೯ 2ರಲ್ಲಿ ಮೂರು ಸ್ಥಾನ ಇದ್ದು, ರೋಹಿಣಿ ಭಾಗ್ಯವಂತ 438 ಮತ, ದೇವಿಂದ್ರ ಬಾಬು ಪವಾರ 404, ಅನುಷಯಾಬಾಯಿ ಸುಯಾ೯ಕಾಂತ 368 ಮತಗಳನ್ನು ಪಡೆದು ವಿಜೇತರಾಗಿದ್ದಾರೆ.
ವಾಡ್‌೯ 3ರಲ್ಲಿ ಮೂರು ಸ್ಥಾನಗಳು ಇದ್ದು, ದೀಪರಾಣಿ ಧಮೇ೯ಂದ್ರ ಭೋಸಲೆ, 231 ಮತ, ಧನಾಜಿ ರಾಜೇಂದ್ರ 216, ಮನಸೂರ ಎಮ್ ಡಿ ನವಾಜ 286 ಮತ ಪಡೆದು ವಿಜೇತರಾಗಿದ್ದಾರೆ.
ವಾಡ್‌೯ 4ರಲ್ಲಿ ಮೂರು ಸ್ಥಾನಗಳಿದ್ದು, ಲಾಲು ತಾತೆರಾವ 446, ನಶ್ರೀನಬೇಗಂ ಇಕ್ರಮ 466, ಸಂತೋಷ ವೈಜಿನಾಥ 449 ಮತ ಪಡೆದು ವಿಜೇತರಾಗಿದ್ದಾರೆ.
ವಾಡ್‌೯ 5ರಲ್ಲಿ ಎರಡು ಸ್ಥಾನಗಳಿದ್ದು, ಸುನೀತಾ ಶಿವಕುಮಾರ 344 ಮತ, ಸಂಜುಕುಮಾರ ಪಾಂಡುರಂಗ 339 ಮತ ಪಡೆದು ವಿಜೇತರಾಗಿದ್ದಾರೆ.
ವಾಡ್‌೯ 6ರಲ್ಲಿ ಮೂರು ಸ್ಥಾನಗಳು ಇದ್ದು, ನಾಗೇಶ ಗೋರಖ ಮೇತ್ರೆ 409 ಮತ, ಪ್ರೇಮಲಾ ಚಂದ್ರಕಾಂತ ಆದೇಪ್ಪಾ 333 ಮತ, ಗುರುನಾಥ ಕರಬಸಪ್ಪಾ ಕುಡಂಬಲೆ 278 ಮತ ಪಡೆದು ವಿಜೇತರಾಗಿದ್ದಾರೆ.
ವಾಡ್‌೯ 7ರಲ್ಲಿ 2 ಸ್ಥಾನಗಳಿದ್ದು, ಭಾಗ್ಯಜೋತಿ ಹಣಮಂತ 105 ಮತ, ತಂಗೆಮ್ಮಾ ಜಾಲೇಂದ್ರ 179 ಪಡೆದು ವಿಜೇತರಾಗಿದ್ದಾರೆ.
ವಾಡ್‌೯ 8ರಲ್ಲಿ 3 ಸ್ಥಾನಗಳಿದ್ದು, ರೂಕ್ಮೋದ್ದಿನ ಮೌಲಾಖಾನ 296, ಶ್ರೀದೇವಿ ಸಿದ್ರಾಮ ಕನ್ನಡೆ 396, ದೇವಿಂದ್ರ ವೀರಣ್ಣಾ ಭೋಪಳೆ 440 ಮತ ಪಡೆದು ವಿಜೇತರಾಗಿದ್ದಾರೆ.
ವಾಡ್‌೯ 9ರಲ್ಲಿ ಮೂರು ಸ್ಥಾನಗಳಿದ್ದು, ಯಾಸ್ಮೀನ ಬಿ ಗಫಾರ 269, ಮಹಾನಂದಾ ರಾಜಕುಮಾರ ಕಾಡಾದಿ 378, ವಿವೇಕಾನಂದ ಬಾಬುರಾವ ಚಳಕಾಪೂರೆ 369 ಮತ ಪಡೆದು ವಿಜೇತರಾಗಿದ್ದಾರೆ.
ವಾಡ್‌೯ 10ರಲ್ಲಿ 3 ಸ್ಥಾನಗಳಿದ್ದು, ಭಾಗ್ಯಶ್ರೀ ಬಸವರಾಜ ಬಾಲಕುಂದೆ 347, ಮಿರಾಬಾಯಿ ರಣಜೀತ ಗಾಯಕವಾಡ 361, ವಿದ್ಯಾಸಾಗರ ನಿವತಿ೯ರಾವ ಬನಸೂಡೆ 373 ಮತ ಪಡೆದು ವಿಜೇತರಾಗಿದ್ದಾರೆ.
ವಾಡ್‌೯ 12 ರಲ್ಲಿ ಸೋಲದಾಬಕಾ 4 ಸ್ಥಾನಗಳಿದ್ದು, ಅದರಲ್ಲಿ ಕುಮಾರ ಮಾಧರಾವ 361, ಭಾಗ್ಯಶ್ರೀ ಸೋಮನಾಥಗಿರಿ 376, ಮುಕ್ತಾಬಾಯಿ ರಾಮರತನ 425, ನೀತೇಶ ವೆಂಕಟರಾವ 485 ಮತ ಪಡೆದು ವಿಜೇತರಾಗಿದ್ದಾರೆ ಎಂದು ಹುಲಸೂರ ತಹಶೀಲ್ದಾರ್ ಶಿವಾನಂದಮೇತ್ರೆ ಘೋಷಣೆ ಮಾಡಿದರು.
ತೋಗಲೂರ: ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ತೋಗಲೂರ 6 ಸದಸ್ಯರು, ಹಾಲಹಳ್ಳಿಯ 3 ಸದಸ್ಯರು, ಕಾದರಾಬಾದ ವಾಡಿ ಒಬ್ಬ ಸದಸ್ಯ ಸೇರಿ ಒಟ್ಟು 10 ಸದಸ್ಯರ ಸ್ಥಾನದ ಫಲಿತಾಂಶ ಪ್ರಕಟಗೊಂಡಿದೆ.
ತೋಗಲೂರ ವಾಡ್‌೯ 1 ರಲ್ಲಿ 3 ಸ್ಥಾನಗಳಿದ್ದು, ಫತ್ರೋಬಿ ಶೇಕ ಚಾಂದಪಾಶಾ 342, ಶೇಷರಾವ ದಾದಾರಾವ 380, ಸುಜಾತಾ ಬಸವರಾಜ 284 ಮತ ಪಡೆದು ವಿಜೇತರಾಗಿದ್ದಾರೆ.
ತೋಗಲೂರ ವಾಡ್‌೯ 2ರಲ್ಲಿ 3 ಸ್ಥಾನಗಳಿದ್ದು, ಅನೀಲ ಕುಮಾರ ಚಂದ್ರಕಾಂತ 386, ಬಿಸ್ಮಿಲಾಬಿ ಮಹೇಬೂಬ 404, ಲಕ್ಷ್ಮಿಬಾಯಿ ವಿಶ್ವನಾಥ 413 ಮತ ಪಡೆದು ವಿಜೇತರಾಗಿದ್ದಾರೆ.
ಚೆನ್ನಮ್ಮಾ ಕುಪೇಂದ್ರ 423, ಜೈಶೀರಾ ಕಲ್ಯಾಣಪ್ಪಾ 469, ಶ್ರೀದೇವಿ ಸತೀಶ 442, ಮನೋಜ ರಾಮಜಿ 232 ಮತ ಪಡೆದು ವಿಜೇತರಾಗಿದ್ದಾರೆ
ಹುಲಸೂರ ಗ್ರಾಮ ಪಂಚಾಯಿತಿ ಅಧ್ಯಕ್ಷ ಸ್ಥಾನ ಸಾಮಾನ್ಯ ವಗ೯ದವರಿಗೆ ಮೀಸಲು, ಉಪಾಧ್ಯಕ್ಷೆ ಸ್ಥಾನ ಸಾಮಾನ್ಯ ಮಹಿಳೆಗೆ ಮೀಸಲಿದೆ. ಗೋಟಾ೯(ಬಿ) ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸ್ಥಾನ ಸಾಮಾನ್ಯ ಮಹಿಳೆ, ಉಪಾಧ್ಯಕ್ಷ ಸ್ಥಾನ ಪರಿಶಿಷ್ಟ ಜಾತಿಗೆ ಮೀಸಲಿದೆ. ತೋಗಲೂರ ಗ್ರಾಮ ಪಂಚಾಯಿತಿ ಅಧ್ಯಕ್ಷ ಸ್ಥಾನ ಪರಿಶಿಷ್ಟ ಜಾತಿ, ಉಪಾಧ್ಯಕ್ಷೆ ಸ್ಥಾನ ಸಾಮಾನ್ಯ ಮಹಿಳೆಗೆ ಮೀಸಲಿದ್ದು, ರಾಜಕೀಯ ಲೆಕ್ಕಾಚಾರ
ಶುರುವಾಗಿವೆ.
ಬಸವಕಲ್ಯಾಣ: ತಾಲ್ಲೂಕಿನ ವಿವಿಧ ಗ್ರಾಮ ಪಂಚಾಯಿತಿಗಳ ನಾಲ್ಕು ಸ್ಥಾನಗಳಿಗೆ ನಡೆದ ಉಪ ಚುನಾವಣೆಯ ಫಲಿತಾಂಶ ಗುರುವಾರ ಪ್ರಕಟವಾಗಿದೆ.
ಮಂಠಾಳ ಗ್ರಾಮ ಪಂಚಾಯಿತಿಯ ಪರಿಶಿಷ್ಟ ಪಂಗಡಕ್ಕೆ ಮೀಸಲಿದ್ದ ಸ್ಥಾನದಿಂದ ರವಿಕಿರಣ ಅನಿಲಕುಮಾರ (363) ಮತಗಳನ್ನು ಪಡೆದು ಆಯ್ಕೆಗೊಂಡಿದ್ದಾರೆ. ರಾಜೇಶ್ವರ ಗ್ರಾಮ ಪಂಚಾಯಿತಿಯ ಸಾಮಾನ್ಯ ಸ್ಥಾನದಿಂದ ರೇವಣಸಿದ್ದಪ್ಪ ಶಿವಶರಣಪ್ಪ (306) ಮತಗಳನ್ನು ಪಡೆದು ಆಯ್ಕೆಗೊಂಡಿದ್ದಾರೆ.
ಬಟಗೇರಾ ಗ್ರಾಮ ಪಂಚಾಯಿತಿಯ ಶಿರಗೂರ ಗ್ರಾಮದ ಸಾಮಾನ್ಯ ಮಹಿಳೆಗೆ ಮೀಸಲಿದ್ದ ಸ್ಥಾನದಿಂದ ಆಶಾಬಾಯಿ ಗೋಲಂದಾಸ (372) ಹಾಗೂ ಕಲಖೋರಾ ಗ್ರಾಮ ಪಂಚಾಯಿತಿಯ ಪರಿಶಿಷ್ಟ ಜಾತಿಗೆ ಮೀಸಲಿದ್ದ ಸ್ಥಾನದಿಂದ ವಿಲಾಸ ಮಾಣಿಕಪ್ಪ (424) ಮತಗಳನ್ನು ಪಡೆದು ವಿಜೇತರಾಗಿದ್ದಾರೆ.
ಭಾಲ್ಕಿ: ತಾಲ್ಲೂಕಿನ ಇಂಚೂರ ಗ್ರಾಮ ಪಂಚಾಯಿತಿ ಸದಸ್ಯ ಸ್ಥಾನಕ್ಕೆ ಈಚೆಗೆ ನಡೆದ ಉಪ ಚುನಾವಣೆಯ ಮತಎಣಿಕೆ ಗುರುವಾರ ನಡೆದಿದ್ದು, ಹಲಸಿ ಗ್ರಾಮದಿಂದ ಆಯ್ಕೆಯಾದ ಸಂತೋಷ ಪಾಟೀಲರನ್ನು ಅವರ ಬೆಂಬಲಿಗರು ಸನ್ಮಾನಿಸಿದರು. ಚುನಾವಣೆಯಲ್ಲಿ ಒಟ್ಟು 659 ಮತದಾರರು ತಮ್ಮ ಹಕ್ಕು ಚಲಾಯಿಸಿದ್ದರು. ವಿಜೇತ ಅಭ್ಯರ್ಥಿ ಸಂತೋಷ ಪಾಟೀಲ 534 ಮತಗಳನ್ನು ಪಡೆದು ಪ್ರತಿಸ್ಪರ್ಧಿ ಅಂಬಾದಾಸ ಮಿರಗಾಜಿ (124) ವಿರುದ್ಧ ಭರ್ಜರಿ ಗೆಲುವು ಸಾಧಿಸಿದ್ದಾರೆ.
ಬೆಂಬಲಿಗರಾದ ಶಿವಪುತ್ರ ಪಾಟೀಲ, ಸಂಗಮೇಶ ಭೂರೆ, ಬಿಬಿಶನ ಬಿರಾದರ, ವಿನೋದ ಕಾರಾಮುಂಗೆ, ವಿಠಲ ಪಾಟೀಲ, ಗುಂಡಪ್ಪ ಮೇತ್ರೆ, ಶ್ರಿನಿವಾಸ ಬಿರಾದಾರ, ಸುರೇಶ ಕಾನೆಕರ, ಪ್ರಪುಲ ಮಾನೆ, ರಮೇಶ ಮಿರಗಾಜಿ ನೂತನ ಗ್ರಾಮ ಪಂಚಾಯಿತಿ ಸದಸ್ಯ ಸಂತೋಷ ಪಾಟೀಲ ರನ್ನು ಸಿಹಿ ತಿನ್ನಿಸಿ, ಶಾಲು ಹೊದಿಸಿ ಗೌರವಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.