ADVERTISEMENT

ಸಂಭ್ರದಮ ಹೈ.ಕ ವಿಮೋಚನಾ ದಿನಾಚರಣೆ

​ಪ್ರಜಾವಾಣಿ ವಾರ್ತೆ
Published 17 ಸೆಪ್ಟೆಂಬರ್ 2018, 12:13 IST
Last Updated 17 ಸೆಪ್ಟೆಂಬರ್ 2018, 12:13 IST
ಕಮಲನಗರದ ಶಾಂತಿವರ್ಧಕ ಶಿಕ್ಷಣ ಸಂಸ್ಥೆಯ ಅಂಗ ಸಂಸ್ಥೆಗಳ ಸಂಯುಕ್ತ ಆಶ್ರಯದಲ್ಲಿ ಸೋಮವಾರ ಹೈದರಾಬಾದ್‌ ಕರ್ನಾಟಕ ವಿಮೋಚನಾ ದಿನಾಚರಣೆ ಅಂಗವಾಗಿ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಚಿತ್ರಕ್ಕೆ ಪೂಜೆ ಸಲ್ಲಿಸಲಾಯಿತು
ಕಮಲನಗರದ ಶಾಂತಿವರ್ಧಕ ಶಿಕ್ಷಣ ಸಂಸ್ಥೆಯ ಅಂಗ ಸಂಸ್ಥೆಗಳ ಸಂಯುಕ್ತ ಆಶ್ರಯದಲ್ಲಿ ಸೋಮವಾರ ಹೈದರಾಬಾದ್‌ ಕರ್ನಾಟಕ ವಿಮೋಚನಾ ದಿನಾಚರಣೆ ಅಂಗವಾಗಿ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಚಿತ್ರಕ್ಕೆ ಪೂಜೆ ಸಲ್ಲಿಸಲಾಯಿತು   

ಕಮಲನಗರ:ಪಟ್ಟಣ ಸೇರಿ ತಾಲ್ಲೂಕಿನ ವಿವಿಧೆಡೆ ಸೋಮವಾರ ಹೈದರಾಬಾದ್‌ ಕರ್ನಾಟಕ ವಿಮೋಚನಾ ದಿನವನ್ನು ಸಂಭ್ರಮದಿಂದ ಆಚರಿಸಲಾಯಿತು.

‌ಇಲ್ಲಿನ ಶಾಂತಿವರ್ಧಕ ಶಿಕ್ಷಣ ಸಂಸ್ಥೆಯ ಅಂಗ ಸಂಸ್ಥೆಗಳ ಸಂಯುಕ್ತ ಆಶ್ರಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮುಖಂಡ ಬಾಬುರಾವ್‌ ಪಾಟೀಲ ಧ್ವಜಾರೋಹಣ ನೆರವೇರಿಸಿದರು.

ಪ್ರಾಚಾರ್ಯ ಬಿ.ಕೆ.ಬೂದೆ, ಪ್ರೊ. ಜೆ.ಎಂ.ಚಿಮ್ಮಾ, ಪ್ರೊ.ಎಸ್‌.ಎನ್‌.ಶಿವಣಕರ್‌, ಬಿ.ಎಸ್‌.ರಿಕ್ಕೆ, ಚನ್ನಬಸವ ಟೊಣ್ಣೆ, ಎಂ.ಎನ್‌.ಬಿಲಗುಂದೆ, ಶಿವಕುಮಾರ ಪಾಟೀಲ, ಸಂತೋಷ ಸುಲಾಕೆ ಇದ್ದರು.

ADVERTISEMENT

ಡಾ.ಚನ್ನಬಸವ ಪಟ್ಟದ್ದೇವರ ಪ್ರೌಢಶಾಲೆ: ಇಲ್ಲಿನ ಹಿರೇಮಠ ಸಂಸ್ಥಾನ ಸಂಚಾಲಿತ ಡಾ.ಚನ್ನಬಸವ ಪಟ್ಟದ್ದೇವರ ಪ್ರೌಢಶಾಲೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮುಖಂಡ ಶಿವರಾಜ ಪಾಟೀಲ ಧ್ವಜಾರೋಹಣ ನೆರವೇರಿಸಿದರು.

ವಿದ್ಯಾರ್ಥಿಗಳಾದ ಸೃಷ್ಟಿ ಬಸವರಾಜ, ಬಸವಪ್ರಭು ಮನೋಹರ ಹಾಗೂ ಶಿಕ್ಷಕ ಬಸವರಾಜ ನೇಸರಗೆ ಅವರು, ಹೈದರಾಬಾದ್‌ ಕರ್ನಾಟಕ ವಿಮೋಚನಾ ಹೋರಾಟದ ಕುರಿತು ಮಾತನಾಡಿದರು.
ಆಡಳಿತಾಧಿಕಾರಿ ಪ್ರಕಾಶ ಮಾನಕರಿ ಅಧ್ಯಕ್ಷತೆ ವಹಿಸಿದ್ದರು.

ವೈಜಿನಾಥ ಭವರಾ, ಬಸವರಾಜ ಶಿವಣಕರ್‌, ಭೀಮರಾವ ಶ್ರೀಗಿರೆ, ಮಹಾನಂದಾ ಧರಣೆ, ವಿಜಯಕುಮಾರ ಶೇಗೆದಾರ್‌, ಹಾವಗಿರಾವ್‌ ಮಠಪತಿ ಇದ್ದರು.

ಡಾ.ಚನ್ನಬಸವ ಪಟ್ಟದ್ದೇವರ ವಾಚನಾಲಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪಟ್ಟದ್ದೇವರ ಟ್ರಸ್ಟ್‌ ಅಧ್ಯಕ್ಷ ಸಿ.ಎಂ.ಹಿರೇಮಠ ಧ್ವಜಾರೋಹಣ ನೆರವೇರಿಸಿದರು.

ಸಾಹಿತಿ ಬಾ.ನಾ.ಸೊಲ್ಲಾಪುರೆ ಮಾತನಾಡಿ, ‘ತ್ಯಾಗ, ಬಲಿದಾನಗಳ ಫಲವಾಗಿ ದೊರೆತ ಸ್ವಾತಂತ್ರ್ಯವನ್ನು ದುರುಪಯೋಗ ಪಡಿಸಿಕೊಳ್ಳಬಾರದು. ಸದೃಢ ರಾಷ್ಟ್ರ ನಿರ್ಮಾಣಕ್ಕಾಗಿ ಪ್ರತಿಯೊಬ್ಬರೂ ಶ್ರಮಿಸಬೇಕು’ ಎಂದರು.

ವೈಜಿನಾಥ ವಡ್ಡೆ, ಸಂಜೀವಕುಮಾರ ಮಹಾಜನ್‌, ಪ್ರವೀಣ ಕುಲಕರ್ಣಿ, ಧೂಳಪ್ಪ ನವಾಡೆ, ಮಡಿವಾಳಪ್ಪ ನಿಲಂಗೆ, ಉತ್ತಮರಾವ್‌ ಮಾನೆ, ರಮೇಶ ಹಿಪ್ಪಳಗಾವೆ ಇದ್ದರು.

ಖತಗಾಂವ್‌ ವರದಿ

ತಾಲ್ಲೂಕಿನ ಖತಗಾಂವ್‌ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಎಸ್‌ಡಿಎಂಸಿ ಅಧ್ಯಕ್ಷ ಚನ್ನಬಸವ ಪಾಟೀಲ ಧ್ವಜಾರೋಹಣ ನೆರವೇರಿಸಿದರು.

ಮುಖ್ಯಶಿಕ್ಷಕ ವಿಜಯಕುಮಾರ ಬಿರಾದಾರ್‌, ಸುಭಾಷ ಬಿರಾದಾರ್‌, ಸೂರ್ಯಕಾಂತ ಮಹಾಜನ್‌, ಇಂದ್ರಜೀತ್‌ ಗವಳಿ, ಮಲ್ಲಮ್ಮ ಕಸ್ತೂರೆ, ಇಂದಿರಾಬಾಯಿ ಕಾಂಬಳೆ ಇದ್ದರು.

ಠಾಣಾಕುಶನೂರ್‌ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಎಸ್‌ಡಿಎಂಸಿ ಅಧ್ಯಕ್ಷ ಶಿವಕುಮಾರ ಪರಶೆಟ್ಟೆ ಧ್ವಜಾರೋಹಣ ನೆರವೇರಿಸಿದರು.

ಮುಖಂಡ ರಾಮಶೆಟ್ಟಿ ಪನ್ನಾಳೆ, ಶಂಕರರಾವ್‌ ಕೊಳಾರ್‌ ಮಾತನಾಡಿದರು. ಮುಖ್ಯಶಿಕ್ಷಕ ಮಂಜುನಾಥ ನಾಯಕ್‌ ಅಧ್ಯಕ್ಷತೆ ವಹಿಸಿದ್ದರು.

ವೀರಕುಮಾರ ಮಂಠಾಳಕರ್‌, ದತ್ತಾತ್ರಿ ಮಸ್ಕಲೆ, ಸುನೀಲ ರಂಡ್ಯಾಲೆ, ವಾಮನರಾವ್‌ ಕಾಮತಿಕರ್‌, ವರ್ಷಾ ಪಾಟೀಲ, ಪ್ರಭಾವತಿ ಭಂಡೆ, ಪ್ರಭಾವತಿ ಕದಮ್‌ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.