ADVERTISEMENT

ಹುಮನಾಬಾದ್: ದಲಿತ ಪ್ಯಾಂಥರ್ ಮಹಿಳಾ ಘಟಕ ಉದ್ಘಾಟನೆ

​ಪ್ರಜಾವಾಣಿ ವಾರ್ತೆ
Published 16 ಜೂನ್ 2024, 15:24 IST
Last Updated 16 ಜೂನ್ 2024, 15:24 IST
ಹುಮನಾಬಾದ್ ಪಟ್ಟಣದಲ್ಲಿ ಭಾರತೀಯ ದಲಿತ ಪ್ಯಾಂಥರ್ ಸಂಘಟನೆ ಮಹಿಳಾ ಘಟಕದ ಪದಾಧಿಕಾರಿಗಳಿಗೆ ಸನ್ಮಾನಿಸಲಾಯಿತು.
ಹುಮನಾಬಾದ್ ಪಟ್ಟಣದಲ್ಲಿ ಭಾರತೀಯ ದಲಿತ ಪ್ಯಾಂಥರ್ ಸಂಘಟನೆ ಮಹಿಳಾ ಘಟಕದ ಪದಾಧಿಕಾರಿಗಳಿಗೆ ಸನ್ಮಾನಿಸಲಾಯಿತು.   

ಹುಮನಾಬಾದ್: ನಾಗರಿಕ ಸಮಾಜದ ಬೆಳವಣಿಗೆಯಲ್ಲಿ ಮಹಿಳೆಯರ ಪಾತ್ರ ಹಿರಿದಾಗಿದೆ ಎಂದು ಗುಲಬರ್ಗಾ ವಿಶ್ವವಿದ್ಯಾಲಯದ ಕನ್ನಡ ವಿಭಾಗದ ಅತಿಥಿ ಉಪನ್ಯಾಸಕ ಪೀರಪ್ಪ ಸಜ್ಜನ್ ಹೇಳಿದರು.

ಪಟ್ಟಣದ ರೋಟರಿ ಕ್ಲಬ್ ಆವರಣದಲ್ಲಿ ಭಾನುವಾರ ನಡೆದ ಭಾರತೀಯ ದಲಿತ ಪ್ಯಾಂಥರ್ ಸಂಘಟನೆ ಮಹಿಳಾ ಘಟಕ ಉದ್ಘಾಟನೆ ಹಾಗೂ ಸಂವಿಧಾನ ಜಾಗೃತಿ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು.

ಬುದ್ಧ, ಬಸವಣ್ಣ ಹಾಗೂ ಅಂಬೇಡ್ಕರ್ ಸೇರಿದಂತೆ ಅನೇಕ ಸಂತ ಶರಣರು ನಿರಂತರ ಹೋರಾಟ ಮಾಡುವ ಮೂಲಕ ಮಹಿಳೆಯರಿಗೆ ಸ್ವಾಂತಂತ್ರ್ಯ ದೊರಕಿಸಿ ಕೊಟ್ಟಿದ್ದಾರೆ. ಹೀಗಾಗಿ ಮಹಿಳೆಯರು ಇಂದಿನ ಸ್ಪರ್ಧಾತ್ಮಕ ಯುಗದ ಎಲ್ಲ ಕ್ಷೇತ್ರಗಳಲ್ಲಿ ಉತ್ತಮವಾದ ಸಾಧನೆ ಮಾಡುತ್ತಿದ್ದಾರೆ. ಅದರಂತೆ ಹಿಂದುಳಿದ ಮಹಿಳೆಯರು ಕೂಡ ದಿಟ್ಟ ಹೆಜ್ಜೆಯನ್ನಿಟ್ಟು ಸಮಾಜದ ಪರಿವರ್ತನೆಗೆ ಮುಂದಾಗಬೇಕು ಎಂದು ಸಲಹೆ ನೀಡಿದರು.

ADVERTISEMENT

ಭಾರತೀಯ ದಲಿತ ಪ್ಯಾಂಥರ್ ಸಂಘಟನೆಯ ರಾಜ್ಯ ಕಾರ್ಯದರ್ಶಿ ಮನೋಹರ ಮೋರೆ ಮಾತನಾಡಿ, ನಿಸ್ವಾರ್ಥ ಸೇವಾ ಮನೋಭಾವನೆಗಳು ಹಾಗೂ ಎಲ್ಲರೂ ಒಂದೇ ಎನ್ನುವ ವಿಚಾರಗಳನ್ನು ಮೈಗೂಡಿಸಿಕೊಂಡಾಗ ಮಾತ್ರ ಶೋಷಿತ ಸಮುದಾಯಗಳು ಅಭಿವೃದ್ಧಿ ಪಥದಲ್ಲಿ ಸಾಗಲು ಸಾಧ್ಯವಾಗುತ್ತದೆ ಎಂದರು.

ಭಾರತೀಯ ದಲಿತ ಪ್ಯಾಂಥರ್ ಸಂಘಟನೆ ತಾಲೂಕ ಅಧ್ಯಕ್ಷ ಗಣಪತಿ ಅಷ್ಟೋರೆ ನೇತೃತ್ವದಲ್ಲಿ ಮಹಿಳಾ ಘಟಕದ ನೂತನ ಅಧ್ಯಕ್ಷರಾಗಿ ಕಾವೇರಿ ಕಾಂಬಳೆ, ಉಪಾಧ್ಯಕ್ಷರಾಗಿ ಜ್ಯೋತಿ ಓತಗಿ, ಖಜಾಂಚಿ ರೇಣುಕಾ ಕಾಂಬಳೆ, ಕಾರ್ಯದರ್ಶಿ ಜ್ಯೋತಿ ಸೋನಕೇರಾ, ಸದಸ್ಯರಾಗಿ ಸುನೀತಾ ಕಾಂಬಳೆ, ವಿಠಬಾಯಿ ಸೋನಕೇರಾ, ಶಾಂತಮ್ಮಗೆ ಆಯ್ಕೆ ಮಾಡಲಾಯಿತು.

ಈ ಸಂದರ್ಭದಲ್ಲಿ ಧರ್ಮರಾಯ ಘಾಂಗ್ರೆ, ಕೈಲಾಸ ಭಾವಿಕಟ್ಟಿ, ಅಶೋಕ ಸಿಂಧೆ, ವೈಜಿನಾಥ ಸಿಂಧೆ, ಶಿವಾನಂದ ಕಟ್ಟಿಮನಿ, ದೇವೀಂದ್ರ ಗದ್ದಾರ್, ಬಸರವಾಜ ಸಿಂಧೆ, ಭೀಮರಾಯ್ ನಾಗೂರ್, ಪ್ರಕಾಶ ಬಾವಿಕಟ್ಟಿ, ಸುಶೀಲಕುಮಾರ ಭೋಲಾ, ಗೌತಮ್ ಜಾನವೀರ್, ವಿಠಲ್ ಶಿವನಾಯಕ್, ದಶರಥ ದಂಡೆಕರ್, ರಾಹುಲ್ ಬೋತಗಿ, ಶ್ರೀಕಾಂತ ಜಮಗಿ, ಸಿದ್ಧಾರ್ಥ ಜಾನವೀರ್, ಅನಂತ ಮಾಳಗೆ, ಅರ್ಜುನ್ ಡಾಂಗೆ, ಮಾಣಿಕರಾವ ಮೇಟಿ, ಗುರುನಾಥ ಭೋಸ್ಲೆ, ವಿಶಾಲ ಸಿಂಧನಕೇರಾ, ಆಕಾಶ ಸಿಂಧೆ, ಸಾಗರ ಬೋತಗಿ, ರಘವೀರ ಕಲ್ಲೂರ್, ಅಂಕುಶ ಪ್ರಸಾದ, ಕಿಶೋರ ಸೂರ್ಯವಂಶಿ, ಹರಿನಾಥ ಬಾಸಪಳ್ಳಿ, ಮಡೇಪ್ಪ ಅಷ್ಟೋರೆ, ರೇವಣಪ್ಪ ಜಾನವೀರ್, ಮಡಿವಾಳಪ್ಪ ಮೇಟಿ ಸೇರಿದಂತೆ ಇತರರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.