ADVERTISEMENT

ಇಂದಿರಾ ಕ್ಯಾಂಟೀನ್ ಆರಂಭಕ್ಕೆ ಮೀನಮೇಷ

​ಪ್ರಜಾವಾಣಿ ವಾರ್ತೆ
Published 5 ನವೆಂಬರ್ 2024, 6:56 IST
Last Updated 5 ನವೆಂಬರ್ 2024, 6:56 IST
<div class="paragraphs"><p>ಚಿಟಗುಪ್ಪ ಪಟ್ಟಣದಲ್ಲಿರುವ ಇಂದಿರಾ ಕ್ಯಾಂಟಿನ್</p></div>

ಚಿಟಗುಪ್ಪ ಪಟ್ಟಣದಲ್ಲಿರುವ ಇಂದಿರಾ ಕ್ಯಾಂಟಿನ್

   

ಹುಮನಾಬಾದ್: ಇಲ್ಲಿಗೆ ಸಮೀಪದ ಚಿಟಗುಪ್ಪ ಪಟ್ಟಣದಲ್ಲಿ ಇಂದಿರಾ ಕ್ಯಾಂಟೀನ್ ಕಟ್ಟಡದ ಕಾಮಗಾರಿ ಮುಗಿದು‌ ಸುಮಾರು ಮೂರು ತಿಂಗಳು ಕಳೆದರೂ ಕ್ಯಾಂಟೀನ್ ಆರಂಭವಾಗಿಲ್ಲ.

ಕಡಿಮೆ ದರದಲ್ಲಿ ಎಲ್ಲ ವರ್ಗದ ಜನರಿಗೆ ಗುಣಮಟ್ಟದ ಆಹಾರ ಒದಗಿಸುವ ಸದುದ್ದೇಶದಿಂದ ಚಿಟಗುಪ್ಪ ಪಟ್ಟಣದಲ್ಲಿ ಸುಸಜ್ಜಿತವಾದ ಇಂದಿರಾ ಕ್ಯಾಂಟೀನ್ ಕಟ್ಟಡ ನಿರ್ಮಿಸಲಾಗಿದೆ. ‘ಈ ಕ್ಯಾಂಟೀನ್ ಯಾವಾಗ ಆರಂಭವಾಗಲಿದೆ’ ಎಂದು ಕೂಲಿ ಕಾರ್ಮಿಕರು, ಶಾಲಾ-ಕಾಲೇಜು ವಿದ್ಯಾರ್ಥಿಗಳು ಎದುರು ನೋಡುತ್ತಿದ್ದಾರೆ.

ADVERTISEMENT

ಪಟ್ಟಣದ ಪುರಸಭೆ ಆವರಣದಲ್ಲಿನ ತಹಶೀಲ್ದಾರ್ ಕಚೇರಿ ಎದುರು ಕ್ಯಾಂಟೀನ್ ನಿರ್ಮಿಸಲಾಗಿದೆ. ಇದೀಗ ಕಟ್ಟಡದ ಆವರಣದಲ್ಲಿ ಬಿಡಾಡಿ ನಾಯಿ, ಹಂದಿಗಳು ಓಡಾಡುತ್ತಿವೆ. ಜತೆಗೆ ಕಟ್ಟಡದ ಮುಂಭಾಗವು ಕಾರು, ಬೈಕ್‌ ಸೇರಿದಂತೆ ಇನ್ನಿತರ ವಾಹನಗಳ ನಿಲುಗಡೆ ತಾಣವಾಗಿ ಮಾರ್ಪಟ್ಟಿದೆ.

ಇಂದಿರಾ ಕ್ಯಾಂಟೀನ್‌ ಆರಂಭವಾಗದ ಕಾರಣ ವಿವಿಧ ಸರ್ಕಾರಿ ಕಚೇರಿಗಳಿಗೆ ಬರುವ ಜನ, ದಿನಗೂಲಿಗಳು ಸೇರಿದಂತೆ ಇನ್ನಿತರ ಕೆಲಸಕ್ಕೆ ನಗರಕ್ಕೆ ಬರುವ ಜನ ದುಬಾರಿ ಹಣ ಕೊಟ್ಟು ಆಹಾರ ಸೇವಿಸುವ ಸ್ಥಿತಿ ತಪ್ಪಿಲ್ಲ.

‘ಇಂದಿರಾ ಕ್ಯಾಂಟಿನ್ ಎದುರು ಸಮುದಾಯ ಆರೋಗ್ಯ ಕೇಂದ್ರ , ತಹಶೀಲ್ದಾರ್ ಕಚೇರಿ, ಪುರಸಭೆ‌ ಕಚೇರಿ ಸೇರಿದಂತೆ ಶಾಲಾ –ಕಾಲೇಜುಗಳು ಇವೆ. ಹೀಗಾಗಿ ಕ್ಯಾಂಟೀನ್ ಆರಂಭಿಸಿದರೆ ನೂರಾರು ಜನರಿಗೆ ಅನುಕೂಲವಾಗಲಿದೆ’ ಎಂಬುದು ಜನರ ಅಭಿಪ್ರಾಯ.‌

ಕ್ಯಾಂಟೀನ್‌ ಕಟ್ಟಡದ ಕಾಮಗಾರಿ ಮುಗಿದಿದೆ. ಟೆಂಡರ್ ಪ್ರಕ್ರಿಯೆ ಆಗದ ಕಾರಣ ಆರಂಭಿಸಿಲ್ಲ. ಶೀಘ್ರವೇ ಕ್ಯಾಂಟೀನ್ ಆರಂಭಿಸಲಾಗುವುದು
ಎಂ.ಡಿ.ಹುಸಾಮೋದ್ದಿನ್, ಪುರಸಭೆ ಮುಖ್ಯಾಧಿಕಾರಿ, ಚಿಟಗುಪ್ಪ
ಇಂದಿರಾ ಕ್ಯಾಂಟೀನ್ ನಿರ್ಮಾಣ ಕಾಮಗಾರಿ ಮುಗಿದರೂ, ಈತನಕ ಆರಂಭವಾಗಿಲ್ಲ. ಸಂಬಂಧಪಟ್ಟ ಅಧಿಕಾರಿಗಳು ತಕ್ಷಣ ಕ್ಯಾಂಟಿನ್ ಆರಂಭಿಸಬೇಕು
ರಾಜದೀಪ್ ಜಾಬ್ಪುರಸಭೆ ಸದಸ್ಯ, ಚಿಟಗುಪ್ಪ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.