ಜನವಾಡ: ಕೃಷಿ ಅಧಿಕಾರಿಗಳ ತಂಡದ ಕ್ಷೇತ್ರ ಭೇಟಿ ವೇಳೆ ಬೀದರ್ ತಾಲ್ಲೂಕಿನ ವಿವಿಧೆಡೆ ಸೋಯಾ ಅವರೆ ಹಾಗೂ ಹೆಸರು ಬೆಳೆಯಲ್ಲಿ ಎಲೆ ತಿನ್ನುವ ಕೀಟ ಬಾಧೆ ಕಂಡು ಬಂದಿದೆ.
ಮರಕಲ್, ಮನ್ನಳ್ಳಿ, ಕಮಠಾಣ, ಬಗದಲ್ ಮೊದಲಾದ ಕಡೆಗಳಲ್ಲಿ ಸೋಯಾ ಅವರೆ ಹಾಗೂ ಹೆಸರಿನಲ್ಲಿ ಎಲೆ ತಿನ್ನುವ ಕೀಟದ ಬಾಧೆ ಕಾಣಿಸಿದೆ ಎಂದು ತಂಡದ ನೇತೃತ್ವ ವಹಿಸಿದ್ದ ಬೀದರ್ ಸಹಾಯಕ ಕೃಷಿ ನಿರ್ದೇಶಕ ಎಂ.ಎ.ಕೆ. ಅನ್ಸಾರಿ ತಿಳಿಸಿದರು.
ಎಲೆ ತಿನ್ನುವ ಕೀಟಗಳ ನಿಯಂತ್ರಣಕ್ಕೆ ಇಮಾಮೆಕ್ಟಿನ್ ಬೆಂಜಾಯಟ್ 5 ಎಸ್‍ಸಿ 150 ಲೀಟರ್ ನೀರಲ್ಲಿ 70 ಗ್ರಾಂ. ಬೆರೆಸಿ ಸಿಂಪಡಿಸಬೇಕು ಎಂದು ಹೇಳಿದರು.
ಸೋಯಾ ಅವರೆ, ಉದ್ದು ಮತ್ತು ಹೆಸರು ಬೆಳೆಗಳಲ್ಲಿ ರಸ ಹೀರುವ ಕೀಟಗಳು ಕಂಡು ಬಂದಲ್ಲಿ ಇಮಿಡಾಕ್ಲೊಪ್ರಿಡ್ 17.8 ಎಸ್‍ಎಲ್ 150 ಲೀಟರ್ ನೀರಲ್ಲಿ 50 ಎಂ.ಎಲ್ ಬೆರೆಸಿ ಬೆಳೆಗಳಿಗೆ ಸಿಂಡಪಿಸಬೇಕು ಎಂದು ತಿಳಿಸಿದರು.
ಮರಕಲ್ ಗ್ರಾಮದ ರೈತರಾದ ಬಾಬುರಾವ್ ಬುಯ್ಯಾ ಹಾಗೂ ಕಾಶಿನಾಥ ಪಾರಾ ಅವರ ಹೊಲದಲ್ಲಿ ಬೆಳೆದ ಹೆಸರು, ತೊಗರಿ ಹಾಗೂ ಸೋಯಾ ಅವರೆ ಅಂತರ ಬೆಳೆಯನ್ನು ಅಧಿಕಾರಿಗಳು ವೀಕ್ಷಿಸಿದರು.
ಕೃಷಿ ಅಧಿಕಾರಿ ಸಂತೋಷ ಪಾಟೀಲ, ಸಹಾಯಕ ತಾಂತ್ರಿಕ ವ್ಯವಸ್ಥಾಪಕ ದೀಪಕ್ ಪಾಟೀಲ, ವಲಯ ತಾಂತ್ರಿಕ ವ್ಯವಸ್ಥಾಪಕ ಸತೀಶ್ ಶೆಟಕಾರ್ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.