ಬೀದರ್: ಅಬಕಾರಿ ಪೊಲೀಸರು ನಗರದ ಶಹಾಗಂಜ್ ಲೇಬರ್ ಕಾಲೊನಿಯ ಮನೆಯ ಮೇಲೆ ಶನಿವಾರ ದಾಳಿ ನಡೆಸಿ ₹40 ಸಾವಿರ ಮೌಲ್ಯದ, ಅಕ್ರಮವಾಗಿ ಸಂಗ್ರಹಿಸಿ ಇಡಲಾಗಿದ್ದ ಮದ್ಯವನ್ನು ಜಪ್ತಿ ಮಾಡಿ ಒಬ್ಬನನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.
ಭಾರತೀಯ ಸೇನೆಯಲ್ಲಿರುವವರಿಗಷ್ಟೇ ಮಾರಾಟ ಮಾಡುವ ಮದ್ಯ ಹಾಗೂ ಕಲಬೆರಕೆ ಮದ್ಯವನ್ನು ಜಪ್ತಿ ಮಾಡಿ, ಅಂಬಾದಾಸ್ ಇಸ್ಮಾಯಿಲ್ ಎಂಬಾತನನ್ನು ಬಂಧಿಸಿದ್ದಾರೆ.
750 ಎಂಎಲ್ನ ನಾಲ್ಕು ಬ್ಲ್ಯಾಕ್ ಅಂಡ್ ವೈಟ್, ನಾಲ್ಕು 100 ಪೈಪರ್, ಐದು ಓಲ್ಡ್ ಟ್ರಾವೆಲರ್ ವಿಸ್ಕಿ, ಕಲಬೆರಕೆ ಮದ್ಯ, ಸೇನೆಗೆ ಸೇರಿದವರಿಗಷ್ಟೇ ಮಾರಾಟ ಮಾಡುವ 750 ಎಂಎಲ್ನ 20 ವಿವಿಧ ಬ್ರ್ಯಾಂಡ್ಗಳ ಖಾಲಿ ಬಾಟಲಿಗಳನ್ನು ಜಪ್ತಿ ಮಾಡಲಾಗಿದೆ.
ಅಬಕಾರಿ ಬೀದರ್ ಉಪವಿಭಾಗದ ಡಿವೈಎಸ್ಪಿ ಆನಂದ್ ಉಕ್ಕಲಿ, ಅಬಕಾರಿ ಇನ್ಸ್ಪೆಕ್ಟರ್ ಅನಿಲ್ ರಾಜ್, ಸಿಬ್ಬಂದಿ ದೌಲತ್ ರಾಯ್, ಬಾಬು ಚಂದ್ರಯ್ಯ, ಟೋನಿ, ಶಿವಶಂಕರ್, ಅತಿಕ್, ರಾಹುಲ್ ದಾಳಿಯಲ್ಲಿ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.