ಔರಾದ್: ಜೆಡಿಎಸ್ ಜನಪರ ಹಾಗೂ ರೈತರ ಹಿತಕಾಯುವ ಪಕ್ಷವಾಗಿದೆ’ ಎಂದು ಪಕ್ಷದ ಜಿಲ್ಲಾ ಕಾರ್ಯದರ್ಶಿ ಮಲ್ಲಿಕಾರ್ಜುನ ಶೆಟಕಾರ ಹೇಳಿದರು.
ಪಟ್ಟಣದಲ್ಲಿ ಭಾನುವಾರ ನಡೆದ ಜೆಡಿಎಸ್ ಸಕ್ರಿಯ ಕಾರ್ಯಕರ್ತರ ಸಭೆಯಲ್ಲಿ ಅವರು ಮಾತನಾಡಿದರು.
‘ರಾಜ್ಯದ ಜನರು ಬಿಜೆಪಿ, ಕಾಂಗ್ರೆಸ್ ಹಾಗೂ ಜೆಡಿಎಸ್ ಸರ್ಕಾರಗಳ ಆಡಳಿತ ವೈಖರಿ ನೋಡಿದ್ದಾರೆ. ಎಚ್‍ಡಿ ದೇವೇಗೌಡ ಹಾಗೂ ಕುಮಾರಸ್ವಾಮಿ ಅವರು ರಾಜ್ಯಕ್ಕೆ ನೀಡಿದ ಆಡಳಿತ ರಾಷ್ಟ್ರೀಯ ಪಕ್ಷಗಳಿಂದ ನೀಡಲು ಸಾಧ್ಯವಾಗಿಲ್ಲ. ಹೀಗಾಗಿ ಜನರು ಮತ್ತೆ ಜೆಡಿಎಸ್ ಸರ್ಕಾರದ ಆಡಳಿತವನ್ನು ಎದುರು ನೋಡುತ್ತಿದ್ದಾರೆ. ಕಾರ್ಯ ಕರ್ತರು ಮುಂಬರುವ ಜಿಲ್ಲಾ, ತಾಲ್ಲೂಕು ಪಂಚಾಯಿತಿ ಹಾಗೂ 2023ರ ವಿಧಾನಸಭೆ ಚುನಾವಣೆಗೆ ಸಿದ್ಧರಾಗಬೇಕು’ ಎಂದರು.
ತಾಲ್ಲೂಕು ಘಟಕದ ಅಧ್ಯಕ್ಷ ತಾನಾಜಿ ತೋರಣೆಕರ್ ಮಾತನಾಡಿ ‘ಈಗಾಗಲೇ ತಾಲ್ಲೂಕಿನಾದ್ಯಂತ ಪ್ರತಿ ಗ್ರಾಮದಲ್ಲಿ ಪಕ್ಷದ ಸಂಘಟನೆ ಸಭೆ ನಡೆಸಲಾಗುತ್ತಿದೆ. ಬೂತ್ ಮಟ್ಟದಿಂದ ಕಾರ್ಯಕರ್ತರ ಕ್ರಿಯಾ ಶೀಲತೆ ಹೆಚ್ಚಿಸಲಾಗುತ್ತಿದೆ. ಬರಲಿ ರುವ ಚುನಾವಣೆಗಳಲ್ಲಿ ಪಕ್ಷದ ಸಾಧನೆ ಉತ್ತಮವಾಗಿ ಇರಲಿದೆ ಎಂದರು.
ಪಕ್ಷದ ಮುಖಂಡ ರಮೇಶ ಶೆಳಕೆ ಮಾತನಾಡಿ, ‘ಪಕ್ಷ ಸಂಘಟನೆಯಲ್ಲಿ ಯುವಕರನ್ನು ಬಳಸಿಕೊಳ್ಳಬೇಕು. ಅವರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಮಾಡಬೇಕು’ ಎಂದರು.
ಮುಖಂಡ ಬಸವರಾಜ ವಕೀಲ, ವಿಶಾಲ ಶೆಳಕೆ, ಸಂದೀಪ ಕೌಡಗಾವೆ, ಸಂಜು ಜಾಧವ್, ಶಮಶೋದ್ದಿನ್, ರತ್ನಾಕರ್ ಮೋರೆ, ಕಲ್ಲಪ್ಪ ಚಾಂಡೇಶ್ವರೆ, ಗಣಪತರಾವ ಮುಧೋಳ, ಜಗದೀಶ ಬನ್ನಾರೆ, ಧಮ್ಮದೀಪ, ಪ್ರಶಾಂತ ಸಿಂಧೆ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.