ADVERTISEMENT

ಕೆ–ಸಿಇಟಿ ಪರೀಕ್ಷೆಯಲ್ಲಿ ಪಠ್ಯದಲ್ಲಿಲ್ಲದ ಪ್ರಶ್ನೆಗಳು!

​ಪ್ರಜಾವಾಣಿ ವಾರ್ತೆ
Published 18 ಏಪ್ರಿಲ್ 2024, 14:26 IST
Last Updated 18 ಏಪ್ರಿಲ್ 2024, 14:26 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

ಬೀದರ್‌: ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಗುರುವಾರ ನಡೆಸಿದ ಕೆ–ಸಿಇಟಿಯಲ್ಲಿನ ಜೀವವಿಜ್ಞಾನ ವಿಷಯದ ಪರೀಕ್ಷೆಯಲ್ಲಿ ಪಠ್ಯದಿಂದ ಕೈಬಿಟ್ಟಿರುವ ವಿಷಯಗಳಿಗೆ ಸಂಬಂಧಿಸಿದಂತೆ 10 ಪ್ರಶ್ನೆಗಳನ್ನು ಕೇಳಿರುವುದರಿಂದ ವಿದ್ಯಾರ್ಥಿಗಳು ಸಮಸ್ಯೆ ಎದುರಿಸಬೇಕಾಯಿತು.

ಪಠ್ಯದಿಂದ ಕೈಬಿಟ್ಟಿದ್ದ ಎನ್‌ವೈರಾನ್‌ಮೆಂಟಲ್‌ ಇಶ್ಯೂಸ್‌, ಇಕೋಸಿಸ್ಟಮ್‌, ಆರ್ಗನಿಸಮ್‌ ಪಾಪ್ಯುಲೇಶನ್‌, ಸ್ಟ್ರ್ಯಾಟರ್ಜಿ ಫಾರ್‌ ಎನ್‌ಹ್ಯಾನ್ಸ್‌ಮೆಂಟ್‌ ಇನ್‌ ಫುಡ್‌ ಪ್ರೊಡಕ್ಷನ್‌, ಟ್ರಾನ್ಸಪೋರ್ಟ್‌ ಇನ್‌ ಪ್ಲ್ಯಾಂಟ್ಸ್‌ ಪಠ್ಯಗಳಿಂದ 10 ಪ್ರಶ್ನೆಗಳನ್ನು ಕೇಳಲಾಗಿದೆ.

ADVERTISEMENT

‘ಒಟ್ಟು 60 ಪ್ರಶ್ನೆಗಳ ಪೈಕಿ ಪಠ್ಯದಿಂದ ಕಡಿತಗೊಳಿಸಿದ ಪಾಠಗಳಿಗೆ ಸಂಬಂಧಿಸಿದಂತೆ 10 ಪ್ರಶ್ನೆಗಳನ್ನು ಕೇಳಲಾಗಿದೆ. ಇದರಿಂದಾಗಿ ವಿದ್ಯಾರ್ಥಿಗಳಲ್ಲಿ ವೃತ್ತಿಪರ ಕೋರ್ಸ್‌ಗಳ ರ್‍ಯಾಂಕ್‌ ಕುಸಿಯುವ ಆತಂಕ ಎದುರಾಗಿದೆ. ಈ ಕುರಿತು ವಿದ್ಯಾರ್ಥಿಗಳು, ಪಾಲಕರು ನಮ್ಮನ್ನು ಪ್ರಶ್ನಿಸುತ್ತಿದ್ದಾರೆ. ರಾಜ್ಯದಲ್ಲಿ ಒಟ್ಟು ಮೂರೂವರೆ ಲಕ್ಷ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದಾರೆ. ಕೂಡಲೇ ಪರೀಕ್ಷಾ ಪ್ರಾಧಿಕಾರದ ಅಧಿಕಾರಿಗಳು ಈ ಕಡೆಗೆ ಗಮನಹರಿಸಿ ಮಕ್ಕಳಿಗೆ ನ್ಯಾಯ ಕೊಡಬೇಕು’ ಎಂದು ಭಾಲ್ಕಿ ತಾಲ್ಲೂಕಿನ ಕರಡ್ಯಾಳನ ಡಾ.ಚನ್ನಬಸವೇಶ್ವರ ಗುರುಕುಲ ವಿಜ್ಞಾನ ಸಂಯುಕ್ತ ಕಾಲೇಜಿನ ಪ್ರಾಂಶುಪಾಲ ಬಸವರಾಜ ಮೊಳಕೇರೆ ಆಗ್ರಹಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.