ADVERTISEMENT

ಬೀದರ್‌ | ಜ.2ರಂದು ರಾಜ್ಯ ಕಲಾ ಪ್ರತಿಭೋತ್ಸವ

​ಪ್ರಜಾವಾಣಿ ವಾರ್ತೆ
Published 30 ಡಿಸೆಂಬರ್ 2023, 14:41 IST
Last Updated 30 ಡಿಸೆಂಬರ್ 2023, 14:41 IST
ದಿಲೀಪ ಕಾಡವಾದ
ದಿಲೀಪ ಕಾಡವಾದ   

ಬೀದರ್‌: ‘ಅನುಕಂಪ ಬೇಡ ಅವಕಾಶ ಕಲ್ಪಿಸಿ’ ಎಂಬ ಸಂಕಲ್ಪದಡಿ ಜನವರಿ 2ರಂದು ನಗರದ ಡಾ.ಚನ್ನಬಸವ ಪಟ್ಟದ್ದೇವರು ರಂಗಮಂದಿರದಲ್ಲಿ ವಿಶೇಷ ಚೇತನ ಕಲಾವಿದರ ರಾಜ್ಯಮಟ್ಟದ ಕಲಾ ಪ್ರತಿಭೋತ್ಸವ ಹಮ್ಮಿಕೊಳ್ಳಲಾಗಿದೆ’ ಎಂದು ಜೀವನ ಪ್ರಕಾಶ ಕಲ್ಚರಲ್ ಮತ್ತು ವೆಲ್‌ಫೇರ್‌ ಸೊಸೈಟಿ ಅಧ್ಯಕ್ಷ ದಿಲೀಪ ಕಾಡವಾದ ತಿಳಿಸಿದರು.

ನಗರದಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು,‘ಅಂದು ಬೆಳಿಗ್ಗೆ 10ರಿಂದ ಸಂಜೆ 4ರವರೆಗೆ 18 ಸ್ಥಳೀಯ ಕಲಾವಿದರು, 13 ಅನ್ಯ ಜಿಲ್ಲೆಗಳ ಕಲಾವಿದರು ಶಾಸ್ತ್ರೀಯ ಸಂಗೀತ, ಸುಗಮ ಸಂಗೀತ, ವಚನ ಗಾಯನ, ಜನಪದ ಗಾಯನ, ತತ್ವಪದ, ದೇಶಭಕ್ತಿ ಗೀತೆಗಳು, ತಾಳವಾದ್ಯ ಕಾರ್ಯಕ್ರಮ ನಡೆಸಿಕೊಡುವರು. ಸಾಹಿತ್ಯ ಗೋಷ್ಠಿ, ವಿಚಾರ ಸಂಕಿರಣಗಳು ನಡೆಯಲಿವೆ’ ಎಂದು ವಿವರಿಸಿದರು.

ಭಾಲ್ಕಿ ಹಿರೇಮಠ ಸಂಸ್ಥಾನದ ಪೀಠಾಧಿಪತಿ ಗುರುಬಸವ ಪಟ್ಟದ್ದೇವರು, ಫಾದರ್ ವಿಲ್ಸನ್ ಫರ್ನಾಂಡಿಸ್ ಸಾನ್ನಿಧ್ಯ ವಹಿಸುವರು. ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಬಿ. ಖಂಡ್ರೆ ಉದ್ಘಾಟಿಸುವರು ಎಂದರು.

ADVERTISEMENT

ಸೈಮನ್ ಸೂರ್ಯವಂಶಿ, ಮಹೇಶ ಕುಂಬಾರ, ತಾಜೊದ್ದೀನ್‌ ಮರ್ಜಾಪೂರ, ಜೆಸ್ಸಿ ಸೋನ್ವಾನೆ, ಲೋಕನಾಥ ಚಾಂಗಲೇರಾ, ಇಮ್ಯಾನುವೆಲ್‌ ಗಾದಗಿ, ಶ್ರೀಮಂತ ಕಾಡವಾದ ಹಾಗೂ ರಾಮಣ್ಣ ಮಾಳಗಿ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.