ADVERTISEMENT

ಮಾರ್ಚ್‌ 5ರ ಒಳಗೆ ಕನ್ನಡ ನಾಮಫಲಕಕ್ಕೆ ಗಡುವು ಕೊಟ್ಟ ಕರವೇ

‘ಕನ್ನಡ ನಾಮಫಲಕ ಬಳಸಿ’ ಅಭಿಯಾನ

​ಪ್ರಜಾವಾಣಿ ವಾರ್ತೆ
Published 12 ಫೆಬ್ರುವರಿ 2024, 7:25 IST
Last Updated 12 ಫೆಬ್ರುವರಿ 2024, 7:25 IST
ಕರ್ನಾಟಕ ರಕ್ಷಣಾ ವೇದಿಕೆಯ ಕಾರ್ಯಕರ್ತರು ಬೀದರ್‌ನಲ್ಲಿ ಭಾನುವಾರ ಕನ್ನಡ ನಾಮಫಲಕ ಅಳವಡಿಸಬೇಕೆಂದು ಜನಜಾಗೃತಿ ಅಭಿಯಾನ ನಡೆಸಿದರು
ಕರ್ನಾಟಕ ರಕ್ಷಣಾ ವೇದಿಕೆಯ ಕಾರ್ಯಕರ್ತರು ಬೀದರ್‌ನಲ್ಲಿ ಭಾನುವಾರ ಕನ್ನಡ ನಾಮಫಲಕ ಅಳವಡಿಸಬೇಕೆಂದು ಜನಜಾಗೃತಿ ಅಭಿಯಾನ ನಡೆಸಿದರು   

ಪ್ರಜಾವಾಣಿ ವಾರ್ತೆ

ಬೀದರ್‌: ಕರ್ನಾಟಕ ರಕ್ಷಣಾ ವೇದಿಕೆ ಬೀದರ್‌ ಜಿಲ್ಲಾ ಘಟಕದ ವತಿಯಿಂದ ನಗರದಲ್ಲಿ ಭಾನುವಾರ ಕನ್ನಡ ನಾಮಫಲಕ ಕಡ್ಡಾಯ ಮತ್ತು ಕನ್ನಡ ಬಳಸಿ ಇಲ್ಲವೇ ಕರ್ನಾಟಕ ಬಿಟ್ಟು ತೊಲಗಿ ಜನಜಾಗೃತಿ ಅಭಿಯಾನ ನಡೆಸಲಾಯಿತು.

ಜಾಗತಿಕ ಲಿಂಗಾಯತ ಮಹಾಸಭಾ ಉಪಾಧ್ಯಕ್ಷ ಬಸವರಾಜ ಧನ್ನೂರ, ದೀಪಕ್‌ ಪಾಟೀಲ ಚಾಂದೂರಿ ಅವರು ಅಭಿಯಾನಕ್ಕೆ ನಗರದ ಶಿವನಗರದ ಬಳಿ ಚಾಲನೆ ನೀಡಿದರು.

ADVERTISEMENT

ಕೇಂದ್ರ ಬಸ್ ನಿಲ್ದಾಣ, ಮಡಿವಾಳೇಶ್ವರ ವೃತ್ತ, ಕನ್ನಡಾಂಬೆ ವೃತ್ತ, ಕರಿಯಪ್ಪ ವೃತ್ತ, ಅಂಬೇಡ್ಕರ್‌ ವೃತ್ತ,  ಭಗತ್ ಸಿಂಗ್ ವೃತ್ತ, ಬೊಮ್ಮಗೊಂಡೇಶ್ವರ ವೃತ್ತ, ಮೈಲೂರ್ ಕ್ರಾಸ್, ಚಿಟ್ಟಾ ಕ್ರಾಸ್, ಮೈಲೂರ್ ರಿಂಗ್ ರಸ್ತೆ, ಚಿದ್ರಿ, ಮೋಹನ್‌ ಮಾರ್ಕೆಟ್‌ ಮಾರ್ಗವಾಗಿ ಗಣೇಶ ಮೈದಾನದಲ್ಲಿ ಕೊನೆಗೊಂಡಿತು.

ಅಭಿಯಾನದುದ್ದಕ್ಕೂ ಆಂಗ್ಲ ಭಾಷೆಯ ನಾಮಫಲಕ ಹಾಕಿದ್ದ ಅಂಗಡಿಗಳ ಮಾಲೀಕರಿಗೆ ನಾಮಫಲಕ ಕನ್ನಡ ಭಾಷೆಯಲ್ಲಿ ಬರೆಸಬೇಕು ಎಂದು ತಿಳಿಸಲಾಯಿತು. 

ಅಂಗಡಿ  ಮತ್ತು ವಾಣಿಜ್ಯ ಮಳಿಗೆಗಳ ನಾಮಫಲಕಗಳು ಕಡ್ಡಾಯವಾಗಿ ಶೇ 60ರಷ್ಟು ಕನ್ನಡದಲ್ಲಿಯೇ ಹಾಕಿಸಬೇಕೆಂದು ಸರ್ಕಾರ ಸುತ್ತೋಲೆ ಹೊರಡಿಸಿದೆ. ಬರುವ ಮಾರ್ಚ್‌ 5ರ ಒಳಗೆ ಕನ್ನಡದಲ್ಲಿ ನಾಫಲಕಗಳು ಬರೆಸದಿದ್ದಲ್ಲಿ ಅವುಗಳನ್ನು ವೇದಿಕೆಯಿಂದ ತೆಗೆಯಲಾಗುವುದು ಎಂದು ವೇದಿಕೆಯ ಜಿಲ್ಲಾಧ್ಯಕ್ಷ ಅಧ್ಯಕ್ಷ ಸೋಮನಾಥ ಮುಧೋಳ ತಿಳಿಸಿದರು.

ಅಭಿಯಾನದಲ್ಲಿ ಔರಾದ್‌ ತಾಲ್ಲೂಕು ಅಧ್ಯಕ್ಷ ಅನಿಲ್‌ ಹೇಡೆ, ಬೀದರ್‌ ತಾಲ್ಲೂಕು ಅಧ್ಯಕ್ಷ ವೀರಶೆಟ್ಟಿ ಗೌಸಪೂರ, ಬೀದರ್‌ ಉತ್ತರ ಅಧ್ಯಕ್ಷ ಸಚಿನ್‌ ಜಟಗೊಂಡ, ಹುಮನಾಬಾದ್‌ ತಾಲ್ಲೂಕು ಅಧ್ಯಕ್ಷ ಸಚಿನ್‌ ತಿಪಶೆಟ್ಟಿ, ಪ್ರಮುಖರಾದ ವಿನಾಯಕ ರೆಡ್ಡಿ, ಸೋಮಶೇಖರ ಸಜ್ಜನ್, ಉದಯಕುಮಾರ ಅಷ್ಟೂರೆ, ದತ್ತಾತ್ರೆ ಅಲ್ಲಮಕೇರೆ, ಶಿವರುದ್ರ ತೀರ್ಥ, ಸಂತೋಷ ಚೆಟ್ಟಿ, ವಿಶ್ವನಾಥ ಆಲೂರೆ, ನಾಗಪ್ಪ ಜಾನಕನೊರ್, ಮಲ್ಲಿಕಾರ್ಜುನ ಸಿಕೇನಪೂರೆ, ಮಹೇಶ ಕಾಪಸೆ, ಹಣಮಂತ ಮುಸ್ತಾಪೂರೆ, ಮಹೇಶ ವಾಡೆ, ಮಹೇಶ ಸ್ವಾಮಿ, ಪ್ರಭು ಬುಧೇರಾ, ಚಂದು ಡಿ.ಕೆ., ಸಂಜು ಯಾದವ ಇತರರು ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.