ಬೀದರ್: ಬೀದರ್ ದಕ್ಷಿಣ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಆಭ್ಯರ್ಥಿ ಬಂಡೆಪ್ಪ ಕಾಶೆಂಪುರ ಅವರು ಸಲ್ಲಿಸಿರುವ ಅಫಿಡವಿಟ್‌ನಲ್ಲಿ 2021–2022ರಲ್ಲಿ ತಮ್ಮ ಆದಾಯ ₹ 1,02,50,019 ಹಾಗೂ ಪತ್ನಿಯ ಆದಾಯ ₹ 80,60,740 ತೋರಿಸಿದ್ದಾರೆ.
ತಮ್ಮ ಹೆಸರಲ್ಲಿ ₹ 1.15 ಕೋಟಿ ಚರಾಸ್ತಿ ಹಾಗೂ ₹ 1.93 ಕೋಟಿ ಸ್ಥಿರಾಸ್ತಿ, ಪತ್ನಿ ಹೆಸರಲ್ಲಿ ₹ 66.32 ಲಕ್ಷ ಚರಾಸ್ತಿ ಹಾಗೂ ₹ 3 ಲಕ್ಷ ಸ್ಥಿರಾಸ್ತಿ ಇದೆ. ವಿವಿಧ ಹಣಕಾಸು ಸಂಸ್ಥೆಗಳಿಂದ ಬಂಡೆಪ್ಪ ₹ 28 ಲಕ್ಷ, ಪತ್ನಿ ₹ 36 ಲಕ್ಷ ಸಾಲ ಪಡೆದುಕೊಂಡಿದ್ದಾರೆ. ತಮ್ಮ ಕೈಯಲ್ಲಿ ₹ 6.30 ಲಕ್ಷ ಹಾಗೂ ಪತ್ನಿ ಕೈಯಲ್ಲಿ ₹ 3.06 ಲಕ್ಷ ನಗದು ಇಟ್ಟುಕೊಂಡು ಚುನಾವಣೆಗೆ ಸ್ಪರ್ಧಿಸಿದ್ದಾರೆ.
ಬಂಡೆಪ್ಪ ಅವರು ಎಸ್‌ಬಿಐ ಉಳಿತಾಯ ಖಾತೆಯಲ್ಲಿ ₹ 1.56 ಲಕ್ಷ, ಬ್ಯಾಂಕ್ ಆಫ್ ಬರೋಡಾದಲ್ಲಿ ₹ 7.19 ಲಕ್ಷ, ಭವಾನಿ ಖಂಡಸಾರಿ ಶುಗರ್ಸ್‌ನಲ್ಲಿ ₹ 11,50,000 ಮೌಲ್ಯದ ಷೇರುಗಳು, ರವೀಂದ್ರ ಆ್ಯಂಡ್ ಕಂಪನಿಯಲ್ಲಿ ₹ 7.01 ಲಕ್ಷ, ಓಮಿನಿ ಹಾಸ್ಟೆಲ್‌ನಲ್ಲಿ ₹ 50 ಸಾವಿರ, ಭವಾನಿ ಝಿಪ್ಸ್‌ನಲ್ಲಿ ₹ 1.25 ಲಕ್ಷ, ಭವಾನಿ ವೈನ್ಸ್‌ನಲ್ಲಿ ₹ 13.84 ಲಕ್ಷ ತೊಡಗಿಸಿದ್ದಾರೆ. ₹ 12.50 ಲಕ್ಷ ಮೌಲ್ಯದ 25 ತೊಲ ಚಿನ್ನಾಭರಣ, ₹ 1.20 ಲಕ್ಷ ಮೌಲ್ಯದ 2 ಕೆ.ಜಿ ಬೆಳ್ಳಿಯ ಪೂಜಾ ಸಾಮಗ್ರಿಗಳು ಅವರ ಬಳಿ ಇವೆ.
ಪತ್ನಿ ಹೆಸರಲ್ಲಿ ಕೆನರಾ ಬ್ಯಾಂಕ್‌ನಲ್ಲಿ ₹ 3 ಲಕ್ಷ ಠೇವಣಿ, ಕೆನರಾ ಬ್ಯಾಂಕ್ ಉಳಿತಾಯ ಖಾತೆಯಲ್ಲಿ ₹ 9.84 ಲಕ್ಷ ಇದೆ. ಭವಾನಿ ಖಂಡಸಾರಿ ಶುಗರ್ಸ್‌ನಲ್ಲಿ ₹ 4.30 ಲಕ್ಷ ಮೌಲ್ಯದ ಷೇರುಗಳು, ರವೀಂದ್ರ ಆ್ಯಂಡ್ ಕಂಪನಿಯಲ್ಲಿ ₹ 10.88 ಲಕ್ಷ ಹಣ ತೊಡಗಿಸಿದ್ದಾರೆ. ₹ 25 ಲಕ್ಷ ಮೌಲ್ಯದ 50 ತೊಲ ಚಿನ್ನಾಭರಣ, ₹ 3 ಲಕ್ಷ ಮೌಲ್ಯದ 5 ಕೆಜಿ. ಬೆಳ್ಳಿಯ ಪೂಜಾ ಸಾಮಗ್ರಿಗಳು ಇವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.