ADVERTISEMENT

ಬೀದರ್‌: ಕೃಷ್ಣ ಜನ್ಮಾಷ್ಟಮಿಗೆ ಕೋಲಾಟ, ಭಜನೆ ಮೆರುಗು

​ಪ್ರಜಾವಾಣಿ ವಾರ್ತೆ
Published 27 ಆಗಸ್ಟ್ 2024, 15:46 IST
Last Updated 27 ಆಗಸ್ಟ್ 2024, 15:46 IST
ಬೀದರ್‌ನ ಚಿಕ್ಕಪೇಟೆ ಸಮೀಪದ ಜಗನ್ನಾಥ ಮಂದಿರದಲ್ಲಿ ಏರ್ಪಡಿಸಿದ್ದ ಕೃಷ್ಣ ಜನ್ಮಾಷ್ಟಮಿಯಲ್ಲಿ ಭಕ್ತರು ಕೃಷ್ಣನ ಸ್ತುತಿ ಮಾಡಿದರು
ಬೀದರ್‌ನ ಚಿಕ್ಕಪೇಟೆ ಸಮೀಪದ ಜಗನ್ನಾಥ ಮಂದಿರದಲ್ಲಿ ಏರ್ಪಡಿಸಿದ್ದ ಕೃಷ್ಣ ಜನ್ಮಾಷ್ಟಮಿಯಲ್ಲಿ ಭಕ್ತರು ಕೃಷ್ಣನ ಸ್ತುತಿ ಮಾಡಿದರು    

ಬೀದರ್‌: ಕೃಷ್ಣ ಜನ್ಮಾಷ್ಟಮಿ ಅಂಗವಾಗಿ ಜಿಲ್ಲೆಯ ವಿವಿಧೆಡೆ ಸೋಮವಾರ ಸಂಜೆ ಹಾಗೂ ರಾತ್ರಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು. ಕೋಲಾಟ, ಭಜನೆ ಕಾರ್ಯಕ್ರಮಕ್ಕೆ ಮೆರುಗು ತಂದವು. ಅದರ ವಿವರ ಇಂತಿದೆ.

ರಾಧಾಕೃಷ್ಣ ಮಹಿಳಾ ಕೋಲಾಟ ಸಂಘ:

ನಗರದ ಗುಮ್ಮೆ ಕಾಲೊನಿಯ ಹನುಮಾನ ಮಂದಿರದಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಮಹಿಳೆಯರು ಕೋಲಾಟವಾಡಿದರು. ಇದಕ್ಕೂ ಮುನ್ನ ಕೃಷ್ಣನಿಗೆ ವಿಶೇಷ ಪೂಜೆ ಸಲ್ಲಿಸಿ, ಜಾನಪದ ಗೀತೆಗಳನ್ನು ಹಾಡಿದರು. ಆನಂತರ ಭಕ್ತಿ ಭಾವದಿಂದ ಕೋಲಾಟ ಹಾಕಿದರು.

ADVERTISEMENT

ಸಂಘದ ಅಧ್ಯಕ್ಷೆ ಗೀತಾ ಪಾಟೀಲ, ಗೌರವ ಅಧ್ಯಕ್ಷೆ ಮಹಾದೇವಿ ಬಿರಾದಾರ, ಉಪಾಧ್ಯಕ್ಷೆ ಮಲ್ಲಮ್ಮ ಬಿರಾದಾರ, ಪ್ರಧಾನ ಕಾರ್ಯದರ್ಶಿ ಭಾರತಿ ಬಿರಾದಾರ, ಖಜಾಂಚಿ ಸಂಗೀತಾ ಪಾಟೀಲ, ಸಹ ಕಾರ್ಯದರ್ಶಿ ಕಲ್ಪನಾ ಅಬ್ಯಂದಿ, ಸದಸ್ಯರಾದ ಉಮಾದೇವಿ, ರೇಣುಕಾ, ರೂಪಾ ಪಾಟೀಲ, ರೇಖಾ ವಗದಾಳೆ, ಕವಿತಾ ಸ್ವಾಮಿ, ಸುನಿತಾ, ಜೈಶ್ರೀ, ಸಂಗೀತಾ ದಾನಿ, ಮಲ್ಲಮ್ಮ, ನೀಲಮ್ಮ, ಕಲಾವತಿ, ಸೀಮಾವತಿ, ಶೋಭಾ, ವಿದ್ಯಾವತಿ, ವಿಜಯಲಕ್ಷ್ಮಿ ಹಾಜರಿದ್ದರು.

ಜಗನ್ನಾಥ ಮಂದಿರ ನೀಲಾಚಲ ಧಾಮ:

ನಗರದ ಹೊರವಲಯದ ಚಿಕ್ಕಪೇಟೆಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸಿಕಿಂದ್ರಾಬಾದ್‌ ಇಸ್ಕಾನ್ ಪ್ರಮುಖ ಸಾಧಕ ಚೈತನ್ಯದಾಸ ಪ್ರಭು ಮಾತನಾಡಿ, ಕೃಷ್ಣ ಒಳ್ಳೆಯವರ ಮಾತು ಕೇಳುತ್ತಾನೆ. ಒಳ್ಳೆಯವರನ್ನು ಕಾಪಾಡುತ್ತಾನೆ. ಉತ್ತಮ ಮಾರ್ಗದಲ್ಲಿ ನಡೆಯುವವರಿಗೆ ಸದಾ ಆತ್ಮಬಲ, ಆತ್ಮಜ್ಞಾನ, ಆತ್ಮಾನಂದ ನೀಡುತ್ತಿರುತ್ತಾನೆ ಎಂದರು.

ಶಿವರಾಮ ಜೋಶಿ, ನಿಲೇಶ ದೇಶಮುಖ, ಕವಿರಾಜ ಹಲಮಡಗಿ, ಗಿರೀಶ್‌ ಕುಲಕರ್ಣಿ, ರಾಜಕುಮಾರ ಅಳ್ಳೆ, ರಾಮಕಿಶನ್‌ ಕಾಳೇಕರ್, ಸಾಯಿನಾಥ ವಿಶ್ವಕರ್ಮ, ಬಸವಚೇತನ, ಪವನಕುಮಾರ, ಸತ್ಯಾನಂದ ಪ್ರಭು, ಸಂಧ್ಯಾ ಜೋಶಿ, ನಮ್ರತಾ ದೇಶಮುಖ, ಅರುಣಾ ಅಳ್ಳೆ, ಸಪ್ನಾ ಹಲಮಡಗಿ, ರಾಮಕೃಷ್ಣನ್ ಸಾಳೆ ಮತ್ತಿತರರು ಹಾಜರಿದ್ದರು. 

ಗ್ಲೋಬಲ್‌ ಸೈನಿಕ್‌ ಅಕಾಡೆಮಿ:

ನಗರ ಹೊರವಲಯದ ಬೆನಕನಳ್ಳಿ ರಸ್ತೆಯಲ್ಲಿರುವ ಅಕಾಡೆಮಿಯಲ್ಲಿ ಕೃಷ್ಣ ಜನ್ಮಾಷ್ಟಮಿಯನ್ನು ಸಡಗರ, ಸಂಭ್ರಮದಿಂದ ಆಚರಿಸಲಾಯಿತು. 

ಔರಾದ್‌ ತಾಲ್ಲೂಕಿನ ನಾಗಮಾರಪಳ್ಳಿ ಗ್ರಾಮದ ಸಪ್ತಸ್ವರ ಕಲಾ ಸಂಸ್ಥೆಯವರು ಬೀದರ್‌ನ ಪಾಪನಾಶ ದೇವಸ್ಥಾನದಲ್ಲಿ ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು

ಅಕಾಡೆಮಿಯ ಅಧ್ಯಕ್ಷ ಶರಣಪ್ಪ ಸಿಕೇನಪೂರ, ಮನೀಷಾ, ಪ್ರಾಂಶುಪಾಲ ಜ್ಯೋತಿ ರಾಗ, ಆಡಳಿತ ಮಂಡಳಿ ಸದಸ್ಯರಾದ ಸುಬೇದಾರ್‌ ಮಾದಪ್ಪ, ಸುಬೇದಾರ್‌ ಧನರಾಜ್‌, ಅಶೋಕ ಪಾಟೀಲ, ಜ್ಞಾನಿನಾಥ, ಹರ್ಷವರ್ಧನ್‌ ಸ್ವಾಮಿ ಮತ್ತಿತರರು ಹಾಜರಿದ್ದರು. ಚಿಣ್ಣರು ಕೃಷ್ಣ, ರಾಧೆ ವೇಷ ಧರಿಸಿ ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟರು.

ಸಪ್ತಸ್ವರ ಕಲಾ ಸಂಸ್ಥೆ:

ಔರಾದ್‌ ತಾಲ್ಲೂಕಿನ ನಾಗಮಾರಪಳ್ಳಿ ಗ್ರಾಮದ ಸಂಸ್ಥೆಯವರು ನಗರದ ಪಾಪನಾಶ ದೇವಸ್ಥಾನದಲ್ಲಿ ಸಂಗೀತ ಸಂಸ್ಕೃತಿ ಕಾರ್ಯಕ್ರಮ ನಡೆಸಿಕೊಟ್ಟರು. ಸಂಸ್ಥೆ ಅಧ್ಯಕ್ಷ ಮಲ್ಲಿಕಾರ್ಜುನ ನಾಗಮಾರಪಳ್ಳಿ ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.

ಬೀದರ್‌ನ ಗುಮ್ಮೆ ಕಾಲೊನಿಯ ರಾಧಾಕೃಷ್ಣ ಮಹಿಳಾ ಕೋಲಾಟ ಸಂಘದವರು ಕೋಲಾಟ ಆಡಿದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.