ADVERTISEMENT

ಕಾರ್ಮಿಕ ಭವನದ ನಿವೇಶನ, ಅನುದಾನದ ತನಿಖೆ ನಡೆಸಿ: ಕಾರ್ಮಿಕರ ಒಕ್ಕೂಟ

​ಪ್ರಜಾವಾಣಿ ವಾರ್ತೆ
Published 23 ಅಕ್ಟೋಬರ್ 2024, 4:45 IST
Last Updated 23 ಅಕ್ಟೋಬರ್ 2024, 4:45 IST
ಕಾರ್ಮಿಕ ಭವನಕ್ಕೆ ಮಂಜೂರಾಗಿದ್ದ ನಿವೇಶನ ಹಾಗೂ ಅನುದಾನದ ಕುರಿತು ತನಿಖೆಗೆ ಆಗ್ರಹಿಸಿ ರಾಜ್ಯ ಕಟ್ಟಡ ನಿರ್ಮಾಣ ಕಾರ್ಮಿಕರ ಒಕ್ಕೂಟ ಹಾಗೂ ಉತ್ತರ ಕರ್ನಾಟಕ ಕಟ್ಟಡ ನಿರ್ಮಾಣ ಮತ್ತು ಇತರೆ ಕೂಲಿ ಕಾರ್ಮಿಕ ಟ್ರಸ್ಟ್ ಪದಾಧಿಕಾರಿಗಳು ಬೀದರ್‌ನಲ್ಲಿ ಮಂಗಳವಾರ ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ ಅವರಿಗೆ ಮನವಿ ಪತ್ರ ಸಲ್ಲಿಸಿದರು

ಬೀದರ್: ನಗರದ ನೌಬಾದ್ ಸಮೀಪದ ಕಾರ್ಮಿಕ ಭವನ ನಿರ್ಮಾಣಕ್ಕೆ ಮಂಜೂರು ಮಾಡಲಾಗಿದ್ದ ನಿವೇಶನ ಹಾಗೂ ಅನುದಾನದ ಕುರಿತು ತನಿಖೆ ನಡೆಸಬೇಕು ಎಂದು ರಾಜ್ಯ ಕಟ್ಟಡ ನಿರ್ಮಾಣ ಕಾರ್ಮಿಕರ ಒಕ್ಕೂಟ ಹಾಗೂ ಉತ್ತರ ಕರ್ನಾಟಕ ಕಟ್ಟಡ ನಿರ್ಮಾಣ ಮತ್ತು ಇತರೆ ಕೂಲಿ ಕಾರ್ಮಿಕ ಟ್ರಸ್ಟ್ ಒತ್ತಾಯಿಸಿವೆ.

ಒಕ್ಕೂಟ ಹಾಗೂ ಟ್ರಸ್ಟ್ ಪದಾಧಿಕಾರಿಗಳು ನಗರದಲ್ಲಿ ಮಂಗಳವಾರ ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ ಅವರಿಗೆ ಜಂಟಿಯಾಗಿ ಮನವಿ ಪತ್ರ ಸಲ್ಲಿಸಿದರು.

ಕಾರ್ಮಿಕ ಸಂಘಟನೆಗಳ ಮನವಿ ಮೇರೆಗೆ ಬಿ.ಎನ್.ಬಚ್ಚೇಗೌಡರು ಕಾರ್ಮಿಕ ಸಚಿವರಾಗಿದ್ದ ಅವಧಿಯಲ್ಲಿ ನೌಬಾದ್ ಸಮೀಪದ ಸರ್ವೇ ಸಂಖ್ಯೆ 18 ರಲ್ಲಿ ಕಾರ್ಮಿಕ ಭವನಕ್ಕೆ 12 ಗುಂಟೆ ಜಮೀನು ಹಾಗೂ ₹1.50 ಕೋಟಿ ಅನುದಾನ ಮಂಜೂರು ಮಾಡಲಾಗಿತ್ತು. ಆದರೆ, ಭೂಮಿ ಹಾಗೂ ಅನುದಾನ ಎತ್ತ ಹೋಯಿತು ಎನ್ನುವುದು ತಿಳಿಯದಾಗಿದೆ ಎಂದು ಹೇಳಿದರು.

ADVERTISEMENT

ನಿವೇಶನ ಹಾಗೂ ಅನುದಾನ ನುಂಗಿ ಹಾಕಿರುವ ಕುರಿತು ತನಿಖೆ ನಡೆಸಿ, ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದರು.

ಒಕ್ಕೂಟದ ಜಿಲ್ಲಾ ಘಟಕದ ಅಧ್ಯಕ್ಷ ರವೀಂದ್ರ ಕೊಳ್ಳೂರ, ಉಪಾಧ್ಯಕ್ಷ ಅಶೋಕ ಲಾಲಛಡಿ, ರಾಜಕುಮಾರ, ಶಿವಕುಮಾರ, ರಾಮದಾಸ, ಎಂ.ಡಿ. ಲೈಕೊದ್ದಿನ್, ಸಂಜು ಶಹಾಬಾದ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.