ಚಿಟಗುಪ್ಪ: 20 ವರ್ಷಗಳ ಹಿಂದೆ ಪ್ರಾಥಮಿಕ ಆರೋಗ್ಯ ಘಟಕದಿಂದ ಸಮುದಾಯ ಆರೋಗ್ಯ ಕೇಂದ್ರವಾಗಿ ಮೇಲ್ದರ್ಜೆಗೇರಿದ ಸರ್ಕಾರಿ ಆಸ್ಪತ್ರೆಯಲ್ಲಿ ಸಿಬ್ಬಂದಿ ಕೊರತೆ ಕಾಡುತ್ತಿದೆ.
30 ಹಾಸಿಗೆ ಸಾಮರ್ಥ್ಯದ ಈ ಆಸ್ಪತ್ರೆಯ ರೋಗಿಗಳ ವಿಭಾಗದಲ್ಲಿ 150ರಿಂದ 200 ಹಾಗೂ ಒಳರೋಗಿಗಳ ವಿಭಾಗದಲ್ಲಿ 10 ರಿಂದ 15 ರೋಗಿಗಳು ದಾಖಲಾಗುತ್ತಿದ್ದಾರೆ.
ಮಂಜೂರಾದ ಐದು ವೈದ್ಯಾಧಿಕಾರಿ ಹುದ್ದೆಗಳ ಪೈಕಿ ಮೂವರು ವೈದ್ಯರು ಕಾರ್ಯ ನಿರ್ವಹಿಸುತ್ತಿದ್ದಾರೆ. 12 ನರ್ಸ್‌ಗಳಿರಬೇಕಾದ ಆಸ್ಪತ್ರೆಯಲ್ಲಿ ಕೇವಲ ಏಳು ಮಂದಿ ನರ್ಸ್‌ಗಳಿದ್ದಾರೆ. ಅವರೂ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿದ್ದಾರೆ. ಎಕ್ಸ್-ರೇ ಯಂತ್ರಗಳಿದ್ದರೂ ತಂತ್ರಜ್ಞ ಹುದ್ದೆಗಳು ಮಂಜುರಾತಿಯೇ ಇಲ್ಲ. ಕೊರತೆಯಿದೆ. ಸ್ಟಾಫ್ ನರ್ಸ್ ಹುದ್ದೆಗಳೂ ಖಾಲಿಯಿದ್ದು, ರೋಗಿಗಳ ಆರೈಕೆಗೆ ತೊಂದರೆಯಾಗುತ್ತಿದೆ. ಆಸ್ಪತ್ರೆಯಲ್ಲಿ ಐದು ತಿಂಗಳಿನಿಂದ ಪ್ರಸೂತಿತಜ್ಞ ವೈದ್ಯರ ಹುದ್ದೆ ಖಾಲಿಯಿದ್ದು ನಿತ್ಯವೂ ದಾದಿಯರಿಂದಲೇ ಹೆರಿಗೆ ಮಾಡಿಸಲಾಗುತ್ತಿದೆ!
ಇನ್ನು, ತಾಲ್ಲೂಕಿನ ಮನ್ನಾಎಖ್ಖೇಳಿ ಗ್ರಾಮದಲ್ಲಿರುವ ಸಮುದಾಯ ಆರೋಗ್ಯ ಕೇಂದ್ರದಲ್ಲಿ ವೈದ್ಯಕೀಯ, ಅರೆ ವೈದ್ಯಕೀಯ ಸಿಬ್ಬಂದಿಗಳಿದ್ದಾರೆ. ಹೆದ್ದಾರಿ ಪಕ್ಕದಲ್ಲಿರುವ ನಮ್ಮ ಆಸ್ಪತ್ರೆಗೆ ನಿತ್ಯ ಅಪಘಾತವಾಗಿ ರೋಗಿಗಳು ಬರುವುದೇ ಹೆಚ್ಚು. ಅವರ ತುರ್ತು ಚಿಕಿತ್ಸೆಗೆ ಆದ್ಯತೆ ನೀಡಲಾಗುತ್ತದೆ’ ಎಂದು ವೈದ್ಯಾಧಿಕಾರಿ ಡಾ. ಜಾಧವ್ ತಿಳಿಸುತ್ತಾರೆ.
‘ಆದರೆ, ಆಸ್ಪತ್ರೆಯ ಹಳೆಯ ಕಟ್ಟಡ ಹಾಳಾಗಿದ್ದು, ಮಳೆಯಿಂದ ಎಲ್ಲೆಂದರಲ್ಲಿ ನೀರು ತೊಟ್ಟಿಕ್ಕುತ್ತಿದೆ. ರೋಗಿಗಳಿಗೂ ತೊಂದರೆಯಾಗುತ್ತಿದೆ. ಹೊಸದಾಗಿ ನಿರ್ಮಿಸಿದ ಕಟ್ಟಡ ಕಾಮಗಾರಿ ಅಪೂರ್ಣವಾಗಿದೆ. ಯಾವುದೇ ಕೋಣೆಗೂ ಬಾಗಿಲುಗಳು, ಕಿಟಕಿಗಳು ಅಳವಡಿಸಿಲ್ಲ. ಸ್ನಾನ ಗೃಹ, ಶೌಚಾಲಯ ನಿರ್ಮಿಸಿಲ್ಲ. ಹೀಗಾಗಿ ಹೊಸ ಕಟ್ಟಡ ಆಸ್ಪತ್ರೆಗೆ ಹಸ್ತಾಂತರಿಸಿದಾಗಿನಿಂದ ನಿರುಪಯುಕ್ತವಾಗಿಯೇ ಉಳಿದಿದೆ’ ಎಂದು ವೈದ್ಯರು ಹೇಳುತ್ತಾರೆ.
ತಾಲ್ಲೂಕಿನ ನಿರ್ಣಾದ ಪ್ರಾಥಮಿಕ ಆರೋಗ್ಯ ಕೇಂದ್ರವು 6 ಹಾಸಿಗೆ ಸಾಮರ್ಥ್ಯ ಹೊಂದಿದ್ದು, ಒಬ್ಬ ವೈದ್ಯಾಧಿಕಾರಿ, ಒಬ್ಬ ಎ.ಎನ್.ಎಂ ಹುದ್ದೆಗಳು ಖಾಲಿ ಇವೆ. ಗ್ರಾಮೀಣ ಭಾಗದ ಆಸ್ಪತ್ರೆಯಾಗಿದ ಕಾರಣ ತುರ್ತು ಚಿಕಿತ್ಸೆ ನೀಡಲಾಗುತ್ತದೆ. ಹೆಚ್ಚಿನ ಚಿಕಿತ್ಸೆ ಅಗತ್ಯವಿರುವ ರೋಗಿಗಳನ್ನು ಬೇರೆಡೆ ಸಾಗಿಸಲು ಆಸ್ಪತ್ರೆಯಲ್ಲಿ ಆಂಬುಲೆನ್ಸ್ ಕೂಡ ಇದೆ. ಆದರೆ, ಅದಕ್ಕೆ ಚಾಲಕ ಹುದ್ದೆ ಮಂಜೂರಾಗಿಲ್ಲ!
ಕುಡಂಬಲ್, ತಾಳಮಡಗಿ, ಚಾಂಗಲೇರಾ ಹಾಗೂ ಬೇಮಳಖೇಡಾ ಗ್ರಾಮಗಳಲ್ಲಿಯ ಆರು ಹಾಸಿಗೆ ಸಾಮರ್ಥ್ಯದ ಪ್ರಾಥಮಿಕ ಆರೋಗ್ಯ ಕೇಂದ್ರಗಳು ಕಾರ್ಯ ನಿರ್ವಹಿಸುತ್ತಿವೆ. ಎಲ್ಲೆಡೆ ವೈದ್ಯಾಧಿಕಾರಿ ಹುದ್ದೆ ಖಾಲಿ ಇವೆ. ಹೀಗಾಗಿ ಆಸ್ಪತ್ರೆಯ ಆಡಳಿತಾತ್ಮಕ ವ್ಯವಸ್ಥೆಗೆ ಅಡ್ಡಿಯಾಗುತ್ತಿದೆ. ಜೊತೆಗೆ ರೋಗಿಗಳ ಸೂಕ್ತ ಚಿಕಿತ್ಸೆಗೂ ತೊಂದರೆಯಾಗುತ್ತಿದೆ.
ಆಂಬುಲೆನ್ಸ್ ಇದ್ದರೂ ಚಾಲಕನ ಕೊರತೆ ವೈದ್ಯಾಧಿಕಾರಿಗಳಿಲ್ಲದ ಆಸ್ಪತ್ರೆಗಳು
ಸಮುದಾಯ ಆರೋಗ್ಯ ಕೇಂದ್ರಕ್ಕೆ ಅಗತ್ಯವಿರುವ ವೈದ್ಯಕೀಯ ಅರೆ ವೈದ್ಯಕೀಯ ಸಿಬ್ಬಂದಿ ನೇಮಕಾತಿ ಕುರಿತು ಶಾಸಕರು ಹಾಗೂ ಸ್ಥಳೀಯ ಮುಖಂಡರು ಆಸಕ್ತಿ ವಹಿಸಿ ಸರ್ಕಾರದಿಂದ ಮಂಜೂರು ಮಾಡಿಸಲು ಕೆಲಸ ಆಗಬೇಕಿದೆಡಾ.ವಿಜಯ ಹಿರಾಸ್ಕರ್ ವೈದ್ಯಾಧಿಕಾರಿ ಚಿಟಗುಪ್ಪ
ಸರ್ಕಾರ ಆಸ್ಪತ್ರೆಗಳಲ್ಲಿ ರೋಗಿಗಳಿಗೆ ಶುದ್ಧ ಕುಡಿಯುವ ನೀರು ಪೂರೈಕೆ ವೈದ್ಯರ ನೇಮಕಾತಿಗೆ ಕೂಡಲೇ ಕ್ರಮವಹಿಸಬೇಕುಗಿರೀಶ ನಂದಿಕೋಲ ಚಿಟಗುಪ್ಪ ನಿವಾಸಿ
ನಿರ್ಣಾ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವೈದ್ಯಾಧಿಕಾರಿ ಮತ್ತು ನರ್ಸ್‌ಗಳ ಕೊರತೆಯಿದೆ. ಇದರಿಂದ ರೋಗಿಗಳ ಆರೈಕೆಗೆ ತೊಂದರೆಯಾಗುತ್ತಿದ್ದು ಸರ್ಕಾರ ಖಾಲಿ ಹುದ್ದೆಗಳನ್ನು ಭರ್ತಿ ಮಾಡಬೇಕುಶೇಖರ್ ಚಿರ್ಚಿ ನಿರ್ಣಾ ನಿವಾಸಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.