ADVERTISEMENT

ಬೀದರ್‌: ಲತಾ ಮಂಗೇಶ್ಕರ್ ಜನ್ಮದಿನಾಚರಣೆ

​ಪ್ರಜಾವಾಣಿ ವಾರ್ತೆ
Published 29 ಸೆಪ್ಟೆಂಬರ್ 2022, 14:24 IST
Last Updated 29 ಸೆಪ್ಟೆಂಬರ್ 2022, 14:24 IST
ಬೀದರ್‌ನಲ್ಲಿ ಸಂಗೀತ ಸಾಮ್ರಾಜ್ಞೆ ಲತಾ ಮಂಗೇಶ್ಕರ್ ಜನ್ಮದಿನ ಆಚರಿಸಲಾಯಿತು
ಬೀದರ್‌ನಲ್ಲಿ ಸಂಗೀತ ಸಾಮ್ರಾಜ್ಞೆ ಲತಾ ಮಂಗೇಶ್ಕರ್ ಜನ್ಮದಿನ ಆಚರಿಸಲಾಯಿತು   

ಬೀದರ್‌: ಇಂಪಾಗಿ ಹಾಡುವುದರಿಂದ ಮನಸ್ಸು ಪ್ರಫುಲ್ಲಿತವಾಗುತ್ತದೆ. ದೇಹದ ನರನಾಡಿಗಳಿಗೆ ಹೊಸ ಚೈತನ್ಯ ದೊರಕುತ್ತದೆ ಎಂದು ಸಂಗೀತ ಕಲಾಮಂಡಲ ಅಧ್ಯಕ್ಷ ರಾಜೇಂದ್ರಸಿಂಗ್ ಪವಾರ್ ಹೇಳಿದರು.

ಸಂಗೀತ ಕಲಾ ಮಂಡಲ ಹಾಗೂ ಜೈ ಹಿಂದ್ ಹಿರಿಯ ನಾಗರಿಕರ ಸಂಘದ ವತಿಯಿಂದ ಏರ್ಪಡಿಸಿದ್ದ ಸಂಗೀತ ಸಾಮ್ರಾಜ್ಞೆ ಲತಾ ಮಂಗೇಶ್ಕರ್ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಉದ್ಯಮಿ ರಾಮಕೃಷ್ಣ ಮುನಿಗ್ಯಾಲ್ ಅಧ್ಯಕ್ಷತೆ ವಹಿಸಿದ್ದರು. ಶಿವಾನಿ-ಶಿವದಾಸ ಸ್ವಾಮಿ, ರಶ್ಮಿ ಶರ್ಮಾ, ಗುರು-ಪ್ರಿಯಾ, ನಾರಾಯಣರಾವ್ ಕಾಂಬಳೆ, ವಿ. ಉಪ್ಪಿನ್, ಧನರಾಜ್ ಲಾಚುರಿಯಾ, ಆಬೆದ ಅಲಿ ಸುಮಧುರವಾದ ಹಾಡುಗಳನ್ನು ಹಾಡಿ ಪ್ರೇಕ್ಷಕರ ಮನ ರಂಜಿಸಿದರು.

ADVERTISEMENT

ಸಂಘದ ಕಾರ್ಯದರ್ಶಿ ವೀರಭದ್ರಪ್ಪ ಉಪ್ಪಿನ್ ನಿರೂಪಿಸಿದರು. ಗಂಗಪ್ಪ ಸಾವಳೆ ವಂದಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.