ADVERTISEMENT

ಬೀದರ್‌ನಲ್ಲಿ ಲೋಕಾಯುಕ್ತ ದಾಳಿ: ಡಿಟಿಐ ಅಧಿಕಾರಿ ಬಳಿ ₹4 ಕೋಟಿ ಆಸ್ತಿ ಪತ್ತೆ

​ಪ್ರಜಾವಾಣಿ ವಾರ್ತೆ
Published 12 ನವೆಂಬರ್ 2024, 6:28 IST
Last Updated 12 ನವೆಂಬರ್ 2024, 6:28 IST
<div class="paragraphs"><p>ರವೀಂದ್ರ ರೊಟ್ಟೆ ಮನೆಯಲ್ಲಿ ದಾಖಲೆ ಪರಿಶೀಲಿಸುತ್ತಿರುವ ಲೋಕಾಯುಕ್ತ ಪೊಲೀಸರು</p></div>

ರವೀಂದ್ರ ರೊಟ್ಟೆ ಮನೆಯಲ್ಲಿ ದಾಖಲೆ ಪರಿಶೀಲಿಸುತ್ತಿರುವ ಲೋಕಾಯುಕ್ತ ಪೊಲೀಸರು

   

ಬೀದರ್‌: ಇಲ್ಲಿನ ಉಪ ತಹಶೀಲ್ದಾರ್‌ ಹಾಗೂ ಜಿಲ್ಲಾ ತರಬೇತಿ ಸಂಸ್ಥೆಯ (ಡಿಟಿಐ) ಉಪನಿರ್ದೇಶಕ ರವೀಂದ್ರಕುಮಾರ ರೊಟ್ಟೆ ಅವರು ಅಕ್ರಮವಾಗಿ ₹4 ಕೋಟಿಗೂ ಹೆಚ್ಚು ಮೌಲ್ಯದ ಆಸ್ತಿ ಗಳಿಸಿರುವುದು ಲೋಕಾಯುಕ್ತ ಪೊಲೀಸರ ಶೋಧ ಕಾರ್ಯದಿಂದ ಗೊತ್ತಾಗಿದೆ.

ಅಕ್ರಮ ಆಸ್ತಿ ಸಂಪಾದನೆ ಮಾಡಿದ್ದಾರೆ ಎಂಬ ದೂರುಗಳ ಮೇರೆಗೆ ಲೋಕಾಯುಕ್ತ ಪೊಲೀಸರು ನಗರದಲ್ಲಿ ಮಂಗಳವಾರ ಅವರ ಕಚೇರಿ ಹಾಗೂ ಗುಂಪಾದಲ್ಲಿರುವ ಮನೆಯಲ್ಲಿ ಶೋಧ ಕಾರ್ಯಾಚರಣೆ ನಡೆಸಿದರು.

ADVERTISEMENT

‘ರವೀಂದ್ರಕುಮಾರ ರೊಟ್ಟೆ ಅವರು ಬೀದರ್‌ನಲ್ಲಿ ಒಂದು ಮನೆ, ಒಂದು ನಿವೇಶನ, ಬೆಂಗಳೂರಿನಲ್ಲಿ ನಾಲ್ಕು ಅಪಾರ್ಟ್‌ಮೆಂಟ್‌, ಒಂದು ನಿವೇಶನ ಹಾಗೂ ಚಿನ್ನಾಭರಣ ಹೊಂದಿದ್ದಾರೆ. ಅವುಗಳ ಒಟ್ಟು ಮೌಲ್ಯ ಅಂದಾಜು ₹4 ಕೋಟಿಗೂ ಅಧಿಕವಾಗಿದೆ. ಅವರ ಸೇವಾವಧಿಯಲ್ಲಿ ಗಳಿಸಿದ ಆದಾಯಕ್ಕಿಂತ ಇದು ಹೆಚ್ಚಿರುವುದು ಗೊತ್ತಾಗಿದೆ. ಇನ್ನೂ ಪರಿಶೀಲನಾ ಕಾರ್ಯ ನಡೆದಿದ್ದು, ಪೂರ್ಣಗೊಂಡ ನಂತರ ಸಂಪೂರ್ಣ ವಿವರ ಸಿಗಲಿದೆ’ ಎಂದು ಕಲಬುರಗಿ ಲೋಕಾಯುಕ್ತ ಎಸ್ಪಿ ಉಮೇಶ ಬಿ.ಕೆ. ತಿಳಿಸಿದ್ದಾರೆ.

ರವೀಂದ್ರ ಅದರು ಬೀದರ್ ಜಿಲ್ಲಾಧಿಕಾರಿ ಕಚೇರಿಯಲ್ಲಿ ಶಿರಸ್ತೇದಾರ ಹಾಗೂ ಬೆಂಗಳೂರಿನ ಬಿಬಿಎಂಪಿಯಲ್ಲಿ ಅಧಿಕಾರಿಯಾಗಿ ಕೆಲಸ ನಿರ್ವಹಿಸಿದ್ದಾರೆ. ಡಿವೈಎಸ್‌ಪಿ ಹನುಮಂತ ನೇತೃತ್ವದಲ್ಲಿ ನಾಲ್ಕು ಖಾಸಗಿ ವಾಹನಗಳಲ್ಲಿ ಸಿಬ್ಬಂದಿ ದಾಳಿ ನಡೆಸಿ, ಶೋಧ ನಡೆಸಿದ್ದಾರೆ.

ರವೀಂದ್ರ ರೊಟ್ಟೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.