ADVERTISEMENT

ಬೀದರ್ | ಕುಟುಂಬದವರು ಮದುವೆಗೆ ನಿರಾಕರಿಸಿದ್ದಕ್ಕೆ ಪ್ರೇಮಿಗಳ ಆತ್ಮಹತ್ಯೆ

​ಪ್ರಜಾವಾಣಿ ವಾರ್ತೆ
Published 9 ಆಗಸ್ಟ್ 2022, 7:32 IST
Last Updated 9 ಆಗಸ್ಟ್ 2022, 7:32 IST
   

ಬೀದರ್: ಕುಟುಂಬದವರು ಮದುವೆ ಮಾಡಲು ನಿರಾಕರಿಸಿದ್ದಕ್ಕೆ ಯುವ ಪ್ರೇಮಿಗಳಿಬ್ಬರು ಇಲ್ಲಿಯ ಲಾಡಗೇರಿಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಹೈದರಾಬಾದ್‌ನಲ್ಲಿ ಎಲೆಕ್ಟ್ರಿಷಿಯನ್‌ ಆಗಿದ್ದ ಶರತ್ ಚಳಕೆ (26) ಮನೆಯಲ್ಲಿ ನೇಣು ಹಾಕಿಕೊಂಡರೆ, ಪದವಿ ಶಿಕ್ಷಣ ಪಡೆದಿರುವ ಸಂಗೀತಾ ಎಮ್ಮೆನೋರ್ (22) ಬಾವಿಗೆ ಹಾರಿ ಪ್ರಾಣ ಬಿಟ್ಟಿದ್ದಾರೆ.

ಶರತ್ ಹಾಗೂ ಸಂಗೀತಾ ನಾಲ್ಕು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು. ಸಂಗೀತಾಳ ಕುಟುಂಬದವರು ಬೇರೆ ವರ ನೋಡಿ ನಿಶ್ಚಿತಾರ್ಥ ಮಾಡಿದ್ದರು. ಈ ಸುದ್ದಿ ತಿಳಿದ ಶರತ್ ಪಾಲಕರು ಸಂಗೀತಾಳ ಮನೆಗೆ ಹೋಗಿ ನಮ್ಮ ಮಗ ಹಾಗೂ ನಿಮ್ಮ ಮಗಳು ಪರಸ್ಪರ ಪ್ರೀತಿಸುತ್ತಿದ್ದಾರೆ. ಅವಳಿಗೆ ಬೇರೆ ಕಡೆ ಮದುವೆ ಮಾಡ ಕೊಡಬೇಡಿ ಎಂದು ಮನವಿ ಮಾಡಿಕೊಂಡಿದ್ದರು. ಇಬ್ಬರೂ ಒಂದೇ ಸಮುದಾಯಕ್ಕೆ ಸೇರಿದ್ದರೂ ಯುವತಿಯ ಮನೆಯವರು ಒಪ್ಪಿರಲಿಲ್ಲ.

ADVERTISEMENT

ಇದರಿಂದ ಮನನೊಂದು ಶರತ್ ಸೋಮವಾರ ತಡ ರಾತ್ರಿ ಮನೆಯಲ್ಲಿ ನೇಣು ಹಾಕಿಕೊಂಡಿದ್ದಾರೆ. ತನಗಾಗಿ ಗೆಳೆಯ ಪ್ರಾಣತೆತ್ತ ಸುದ್ದಿ ಕೇಳಿ ಆಘಾತಗೊಂಡ ಸಂಗೀತಾ ಮನೆಯ ಸಮೀಪದ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.