ADVERTISEMENT

ಆರೋಗ್ಯ ಕಾರ್ಡ್‌ ಮಾಡಿಸಿಕೊಳ್ಳಿ- ಬಾಲಾಜಿ ಕೋಟೆ

​ಪ್ರಜಾವಾಣಿ ವಾರ್ತೆ
Published 26 ಏಪ್ರಿಲ್ 2022, 15:23 IST
Last Updated 26 ಏಪ್ರಿಲ್ 2022, 15:23 IST
ಬೀದರ್‌ ತಾಲ್ಲೂಕಿನ ಗಾದಗಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚಾಮರಾಜಪುರ ಗ್ರಾಮದ ಕಾಮಗಾರಿ ಸ್ಥಳದಲ್ಲಿ ಕೃಷಿ ಕೂಲಿ ಕಾರ್ಮಿಕರಿಗೆ ಆರೋಗ್ಯ ಕಾರ್ಡ್‌ ಕುರಿತು ತಿಳಿವಳಿಕೆ ನೀಡಲಾಯಿತು
ಬೀದರ್‌ ತಾಲ್ಲೂಕಿನ ಗಾದಗಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚಾಮರಾಜಪುರ ಗ್ರಾಮದ ಕಾಮಗಾರಿ ಸ್ಥಳದಲ್ಲಿ ಕೃಷಿ ಕೂಲಿ ಕಾರ್ಮಿಕರಿಗೆ ಆರೋಗ್ಯ ಕಾರ್ಡ್‌ ಕುರಿತು ತಿಳಿವಳಿಕೆ ನೀಡಲಾಯಿತು   

ಜನವಾಡ: ‘ಪ್ರತಿಯೊಬ್ಬರೂ ಆರೋಗ್ಯ ಕಾರ್ಡ್ ಹಾಗೂ ಕೇಂದ್ರ ಸರ್ಕಾರದ ವಿಮಾ ಯೋಜನೆ ಮಾಡಿಕೊಂಡಲ್ಲಿ ಕಷ್ಟದ ಸಮಯದಲ್ಲಿ ಅದು ಕೈ ಹಿಡಿಯಲಿದೆ’ ಎಂದು ಜಿಲ್ಲಾ ಪಂಚಾಯಿತಿ ಸಹಾಯಕ ಕಾರ್ಯದರ್ಶಿ (ಅಭಿವೃದ್ಧಿ) ಬಾಲಾಜಿ ಕೋಟೆ ಹೇಳಿದರು.

ಬೀದರ್‌ ತಾಲ್ಲೂಕಿನ ಗಾದಗಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚಾಮರಾಜಪುರ ಗ್ರಾಮದ ಕಾಮಗಾರಿ ಸ್ಥಳದಲ್ಲಿ ನಡೆದ ದುಡಿಯೋಣ ಬಾ ಅಭಿಯಾನದಲ್ಲಿ ಪಾಲ್ಗೊಂಡು ಮಾತನಾಡಿದ ಅವರು,‘ಕೇಂದ್ರ ಸರ್ಕಾರದ ವಿಮಾ ಯೋಜನೆಗಳಾದ ಪ್ರಧಾನ ಮಂತ್ರಿ ಜೀವನ್ ಜ್ಯೋತಿ ಹಾಗೂ ಪ್ರಧಾನ ಮಂತ್ರಿ ಸುರಕ್ಷಾ ಬೀಮಾ ವಿಮಾ ಯೋಜನೆಗಳು ಕಷ್ಟ ಕಾಲದಲ್ಲಿ ಉಪಯೋಗಕ್ಕೆ ಬರುತ್ತವೆ. ಇವು ಅಪಘಾತ ಹಾಗೂ ಜೀವ ವಿಮೆಗಳಾಗಿದ್ದು, ಪ್ರತಿ ವಿಮೆಗೂ ₹ 2 ಲಕ್ಷ ಬರುತ್ತದೆ’ ಎಂದು ತಿಳಿಸಿದರು.

ಜಿಲ್ಲಾ ಐಇಸಿ ಸಂಯೋಜಕರಾದ ಮರೆಪ್ಪ.ಸಿ ಹರವಾಳಕರ್ ಮಾತನಾಡಿ,‘ಆಯುಸ್ಮಾನ್‌ ಭಾರತ ಆರೋಗ್ಯ ಕರ್ನಾಟಕ ಕಾರ್ಡ್ ಬಡ ಕುಟುಂಬಗಳಿಗೆ ಅಗತ್ಯವಿದೆ. ಇದು ಬಿಪಿಎಲ್ ಕಾರ್ಡ್ ಹೊಂದಿದ್ದ ಎಲ್ಲರಿಗೂ ₹ 5 ಲಕ್ಷವರೆಗೆ, ಎಪಿಎಲ್ ರೇಷನ್ ಕಾರ್ಡ್ ಹೊಂದಿದವರಿಗೆ ₹2 ಲಕ್ಷದ ವರೆಗೆ ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಯಲ್ಲಿ ಉಚಿತವಾಗಿ ಆರೋಗ್ಯ ಚಿಕಿತ್ಸೆ ಪಡೆದುಕೊಳ್ಳಲು ಅವಕಾಶವಿದೆ’ ಎಂದು ತಿಳಿಸಿದರು.

ADVERTISEMENT

ಎಸ್‍ಬಿಐ ಸೇವಾ ಕೇಂದ್ರದ ಸದಸ್ಯರಾದ ರಾಜೇಂದ್ರ ಜಾದವ್ ಹಾಗೂ ರವೀಂದ್ರ ದೋಮಾಲ ಅವರು ಕೂಲಿ ಕಾರ್ಮಿಕರಿಗೆ ವಿಮಾ ಯೋಜನೆಗಳ ಕುರಿತು ಮಾಹಿತಿ ನೀಡಿದರು.

ತಾಲ್ಲೂಕು ಐಇಸಿ ಸಂಯೋಜಕ ಸತ್ಯಜೀತ ವೈಜನ್ನಾಥ ಮಾತನಾಡಿದರು.

ಜಿಲ್ಲಾ ಪಂಚಾಯಿತಿಯ ಎಡಿಪಿಸಿ ದೀಪಕ್ ಕಡಿಮನಿ, ಟಿ.ಎ. ನಸ್ಸಿಮುದ್ದೀನ್, ಅಮರನಾಥ ಬಿರಾದಾರ, ಕಾಯಕ ಬಂಧುಗಳಾದ ಶಿವಲೀಲಾ, ವಿಜಯಲಕ್ಷ್ಮಿ, ಲಲಿತಾ, ಚಿನ್ನಮ್ಮ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.