ADVERTISEMENT

ಏ.10ರಂದು ಮರಾಠ ಸಮಾಜದ ಶಕ್ತಿ ಪ್ರದರ್ಶನ: ಪದ್ಮಾಕರ್‌ ಪಾಟೀಲ

​ಪ್ರಜಾವಾಣಿ ವಾರ್ತೆ
Published 4 ಏಪ್ರಿಲ್ 2024, 16:16 IST
Last Updated 4 ಏಪ್ರಿಲ್ 2024, 16:16 IST
ಪದ್ಮಾಕರ್‌ ಪಾಟೀಲ 
ಪದ್ಮಾಕರ್‌ ಪಾಟೀಲ    

ಬೀದರ್‌: ‘ಏ.10ರಂದು ಭಾಲ್ಕಿ ಪಟ್ಟಣದಲ್ಲಿ ಮರಾಠ ಸಮಾಜದ ಶಕ್ತಿ ಪ್ರದರ್ಶನ ಹಾಗೂ ಬಹಿರಂಗ ಸಮಾವೇಶ ಹಮ್ಮಿಕೊಳ್ಳಲಾಗಿದೆ’ ಎಂದು ಸಮಾಜದ ಮುಖಂಡರೂ ಆದ ಮಾಜಿ ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಪದ್ಮಾಕರ್‌ ಪಾಟೀಲ ತಿಳಿಸಿದರು.

ನಗರದಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸಕಲ ಮರಾಠ ಸಮಾಜದಿಂದ ಅಂದು ನಡೆಯುವ ಸಮಾವೇಶದಲ್ಲಿ ಸುಮಾರು 1 ಲಕ್ಷ ಮರಾಠ ಸಮುದಾಯದವರು ಪಾಲ್ಗೊಳ್ಳುವ ನಿರೀಕ್ಷೆ ಇದೆ’ ಎಂದು ಹೇಳಿದರು.

ಸಮಾಜವು ಆರ್ಥಿಕ, ಶೈಕ್ಷಣಿಕವಾಗಿ ಹಿಂದುಳಿದಿದ್ದು, 2ಎ ಮೀಸಲಾತಿ ಕಲ್ಪಿಸುವುದು, ಸಮಾಜದ ಸ್ಥಿತಿಗತಿ ಕುರಿತು ಸಮಾವೇಶದಲ್ಲಿ ಚರ್ಚಿಸಲಾಗುವುದು. ಸಮಾಜದ ರಾಷ್ಟ್ರೀಯ ಮುಖಂಡ ಮನೋಜ್‌ ದಾದಾ ಪಾಟೀಲ ನೇತೃತ್ವದಲ್ಲಿ ಸಮಾವೇಶ ನಡೆಯಲಿದೆ. ಬೀದರ್‌ ಲೋಕಸಭಾ ಕ್ಷೇತ್ರದಿಂದ ಪಕ್ಷದ ಅಭ್ಯರ್ಥಿಯನ್ನು ಕಣಕ್ಕಿಳಿಸಬೇಕೋ ಅಥವಾ ಬೇಡವೋ ಎನ್ನುವುದರ ಬಗ್ಗೆ ಸಮಾವೇಶದಲ್ಲಿ ನಿರ್ಧರಿಸಿ, ಏ. 12ರಂದು ಪ್ರಕಟಿಸಲಾಗುವುದು’ ಎಂದು ತಿಳಿಸಿದರು.

ADVERTISEMENT

ಮುಖಂಡ ನಾರಾಯಣ ಗಣೇಶ ಮಾತನಾಡಿ,‘ಲೋಕಸಭಾ ಚುನಾವಣೆಯಲ್ಲಿ ಮರಾಠರಿಗೆ ಟಿಕೆಟ್‌ ಸಿಗುವ ನಿರೀಕ್ಷೆ ಇತ್ತು. ಅದು ಹುಸಿಯಾಗಿದೆ’ ಎಂದರು.

ಮುಖಂಡರಾದ ವಿಜಯಕುಮಾರ ಪಾಟೀಲ, ದಿನಕರ್‌ ಮೋರೆ, ಜನಾರ್ದನ ಬಿರಾದಾರ, ಸಂತೋಷ ತೊಗರಖಡೆ, ಅಮರ ಜಾಧವ್‌, ಅಂಗದರಾವ ಜಗತಾಪ್‌, ಸುನೀಲ್‌ ಶಿಂಧೆ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.